Kadaba: ಪಾಳು ಬಿದ್ದ ಐಬಿಗಿಲ್ಲ ಮುಕ್ತಿ; ಹೊಸ ಕಟ್ಟಡ ನಿರ್ಮಾಣಕ್ಕೆ ನಿಗದಿಯಾಗದ ಸೂಕ್ತ ಜಾಗ

ಕಡಬದಲ್ಲಿ ಶಿಥಿಲಗೊಂಡಿರುವ ಸರಕಾರಿ ಪ್ರವಾಸಿ ಬಂಗಲೆ

Team Udayavani, Jan 30, 2025, 12:45 PM IST

2

ಕಡಬ: ಕಡಬದ ಸರಕಾರಿ ಪ್ರವಾಸಿ ಬಂಗಲೆ (ನಿರೀಕ್ಷಣ ಮಂದಿರ) ಶಿಥಿಲಗೊಂಡು ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾಗಿದೆ. ಆದರೆ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಅಗತ್ಯವಾಗಿ ಬೇಕಿರುವ ಹೊಸ ಪ್ರವಾಸಿ ಬಂಗಲೆ ನಿರ್ಮಿಸಲು ಸೂಕ್ತ ಜಾಗ ಮಾತ್ರ ಇನ್ನೂ ನಿಗದಿಯಾಗಿಲ್ಲ.

ಹಳೆಯ ಪ್ರವಾಸಿ ಬಂಗಲೆಯನ್ನು ದುರಸ್ತಿಗೊಳಿಸುವ ಸಲುವಾಗಿ ಈ ಹಿಂದೆ ಪರಿಶೀಲನೆಗೆ ಆಗಮಿಸಿದ್ದ ಜಿ.ಪಂ. ಅಧಿಕಾರಿಗಳು ಕಟ್ಟಡ ಸಂಪೂರ್ಣ ಶಿಥಿಲ ಗೊಂಡಿದ್ದು, ದುರಸ್ತಿಗೆ ಯೋಗ್ಯವಾಗಿಲ್ಲ ಎಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ತೆರವುಗೊಳಿ ಸಲು ನಿರ್ಧರಿಸಲಾಗಿತ್ತು. ಆದರೆ ಆ ಕೆಲಸ ಇದುವರೆಗೆ ಕಾರ್ಯಗತವಾಗಿಲ್ಲ. ಕಟ್ಟಡದ ಹಿಂಭಾಗ ಭಾಗಶಃ ಕುಸಿದಿದ್ದು, ಯಾವುದೇ ಕ್ಷಣದಲ್ಲಿ ಕಟ್ಟಡ ಪೂರ್ತಿಯಾಗಿ ಧರಾಶಾಯಿಯಾಗುವ ಸಾಧ್ಯತೆಗಳಿವೆ. ಕಟ್ಟಡ ಕುಸಿದು ಅಪಾಯ ಸಂಭವಿಸುವ ಮೊದಲು ಈ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕಿದೆ.

ದಾನಿಗಳು ಕೊಟ್ಟಿದ್ದ ಜಮೀನು
ಒಂದು ಕಾಲದಲ್ಲಿ ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಈ ಪ್ರವಾಸಿ ಬಂಗಲೆ ಇದೀಗ ಯಾವುದೇ ಚಟುವಟಿಕೆಗಳಿಲ್ಲದೆ ಪರಿಸರದಲ್ಲಿ ಗಿಡಗಂಟಿ ಬೆಳೆದು ಅನಾಥವಾಗಿದೆ. ಕಡಬದ ಕೊಡುಗೈ ದಾನಿ ಎಂದೇ ಹೆಸರು ಪಡೆದಿರುವ ದಿ|ಮೇಲೂರು ಚಂದಯ್ಯ ಶೆಟ್ಟಿ ಅವರು 1925ನೇ ಇಸವಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿಕೊಟ್ಟಿರುವ ಬಗ್ಗೆ ಲಭ್ಯ ದಾಖಲೆಗಳಲ್ಲಿ ಉಲ್ಲೇಖವಿದೆ. ಬಂಗಲೆ ಇರುವ ಜಮೀನು ಸೇರಿದಂತೆ ಒಟ್ಟು 2.29 ಎಕ್ರೆ ಜಮೀನನ್ನು ಅವರು ಅಂದಿನ ಕಾಲದಲ್ಲಿ ಸರಕಾರಿ ಆಸ್ಪತ್ರೆಗೆ ದಾನವಾಗಿ ಕೊಟ್ಟಿದ್ದರು. ಸಮುದಾಯ ಆಸ್ಪತ್ರೆಯ ಆವರಣದಲ್ಲಿರುವ ಈ ಕಟ್ಟಡ ಆರಂಭದಲ್ಲಿ ವೈದ್ಯಾಧಿಕಾರಿಗಳ ವಸತಿಗೃಹವಾಗಿತ್ತು. ಪುತ್ತೂರು ಬಿಡಿಒ ಕಚೇರಿ ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿತ್ತು. ಅನಂತರ 2 ಕೊಠಡಿಗಳನ್ನು ಸೇರಿಸಿ ಪುನಶ್ಚೇತನಗೊಳಿಸಿ ಈ ಕಟ್ಟಡವನ್ನು ಪ್ರವಾಸಿ ಬಂಗಲೆಯಾಗಿ ಪರಿವರ್ತಿಸಲಾಗಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ತಾ.ಪಂ. ಹಾಗೂ ಗ್ರಾ.ಪಂ. ಆಡಳಿತ ಇದರ ನಿರ್ವಹಣೆಯ ಹೊಣೆ ಹೊತ್ತುಕೊಂಡಿತಾದರೂ ಈಗ ಈ ಕಟ್ಟಡವನ್ನು ಯಾರೂ ಕೇಳುವವರಿಲ್ಲದಂತಾಗಿದೆ.

ಮೂಲತಃ ಸರಕಾರಿ ಸಮುದಾಯ ಆಸ್ಪತ್ರೆಗೆ ಸೇರಿದ ಈ ಜಮೀನನ್ನು ಮತ್ತೆ ಆಸ್ಪತ್ರೆಯ ಉಪಯೋಗಕ್ಕೆ ನೀಡಬೇಕೆಂದು ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯವರ ಮುಖಾಂತರ ಜಿ.ಪಂ.ಗೆ ಮನವಿ ಸಲ್ಲಿಸಲಾಗಿತ್ತು. ಮುಂದೆ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣವಾಗಬೇಕಿರುವುದರಿಂದ ಹೆಚ್ಚಿನ ಜಾಗದ ಅಗತ್ಯವಿರುವುದರಿಂದ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.

ಕಲ್ಲಂತಡ್ಕದಲ್ಲಿ ಜಾಗ ಗುರುತು
ಕಡಬದ ಹಳೆಸ್ಟೇಶನ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ತಾ.ಪಂ. ಕಟ್ಟಡದ ಸಮೀಪವೇ ಹೊಸದಾಗಿ ಸುಸಜ್ಜಿತ ನಿರೀಕ್ಷಣ ಮಂದಿರ ನಿರ್ಮಿಸಲು ಜಮೀನು ಗುರುತಿಸಲಾಗಿತ್ತು. ಆದರೆ ಬಳಿಕದ ಬೆಳವಣಿಗೆಯಲ್ಲಿ ತಾ.ಪಂ. ಕಟ್ಟಡದ ಆವರಣದಲ್ಲಿ ವಾಹನ ಪಾರ್ಕಿಂಗ್‌ ಇತ್ಯಾದಿಗಳಿಗೆ ಜಾಗದ ಅಗತ್ಯವಿರುವುದರಿಂದ ಆ ಜಮೀನನ್ನು ಕೈಬಿಡಲಾಗಿದೆ. ಇದೀಗ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿರುವ ರುದ್ರಭೂಮಿಯ ಬಳಿ ನಿರೀಕ್ಷಣ ಮಂದಿರ ನಿರ್ಮಾಣಕ್ಕೆ ಜಾಗ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಪ್ರಭಾಕರ ಖಜೂರೆ, ಕಡಬ ತಹಶೀಲ್ದಾರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳುಮಾಡಿಕೊಳ್ಳದ ಭಗವಂತ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳು ಮಾಡಿಕೊಳ್ಳದ ಭಗವಂತ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Mangaluru: ಭೂವಿವಾದ, ಕಳೆ ಕತ್ತರಿಸುವ ಯಂತ್ರದಿಂದ ಹಲ್ಲೆ: ನಾಲ್ವರಿಗೆ ಶಿಕ್ಷೆ

Mangaluru: ಭೂವಿವಾದ, ಕಳೆ ಕತ್ತರಿಸುವ ಯಂತ್ರದಿಂದ ಹಲ್ಲೆ: ನಾಲ್ವರಿಗೆ ಶಿಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಚರಂಡಿಗೆ ಉರುಳಿದ ರೋಡ್‌ ರೋಲರ್‌

Sullia: ಚರಂಡಿಗೆ ಉರುಳಿದ ರೋಡ್‌ ರೋಲರ್‌

Uppinangady: ನೇಣು ಬಿಗಿದು ವಿದ್ಯಾರ್ಥಿ ಆತ್ಮಹ*ತ್ಯೆ..!

Uppinangady: ನೇಣು ಬಿಗಿದು ವಿದ್ಯಾರ್ಥಿ ಆತ್ಮಹ*ತ್ಯೆ..!

Sullia ಅಪಘಾತ ಪ್ರಕರಣ: ಆರೋಪಿ ಠಾಣೆಗೆ ಹಾಜರು – ಜಾಮೀನು

Sullia ಅಪಘಾತ ಪ್ರಕರಣ: ಆರೋಪಿ ಠಾಣೆಗೆ ಹಾಜರು – ಜಾಮೀನು

Uppinangady: ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

Uppinangady: ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

Road Mishap: ಕಾರುಗಳ ಮಧ್ಯೆ ಅಪಘಾತ; ಮೂವರಿಗೆ ಗಾಯ

Road Mishap: ಕಾರುಗಳ ಮಧ್ಯೆ ಅಪಘಾತ; ಮೂವರಿಗೆ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳುಮಾಡಿಕೊಳ್ಳದ ಭಗವಂತ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳು ಮಾಡಿಕೊಳ್ಳದ ಭಗವಂತ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.