Kadaba: ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರಷ್ಟೇ ಸಾಧನೆ ಸಾಧ್ಯ ಎಂಬುದು ಭ್ರಮೆ

ನ. 30ರಂದು ನಡೆಯಲಿರುವ ಕಡಬ ತಾ| ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎನ್‌. ಕರುಣಾಕರ ಗೋಗಟೆ

Team Udayavani, Nov 3, 2024, 8:30 AM IST

24-kadaba-interview

ಕಡಬ: ಕಡಬ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವು ನ. 30ರಂದು ಕುಂತೂರು ಪದವು ಸೈಂಟ್‌ ಜಾರ್ಜ್‌ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಬರಹಗಾರ, ಪರಿಸರ ಹೋರಾಟಗಾರ ಎನ್‌.ಕರುಣಾಕರ ಗೋಗಟೆ ಅವರು ವಹಿಸಲಿದ್ದಾರೆ.

ಹಳ್ಳಿ ಬದುಕಿನ ಚಿತ್ರಣ ನೀಡುವ ಕೃತಿ “ಒಂದು ಸೇತುವೆಯ ಕಥೆ’ ಹಾಗೂ ಉರುಂಬಿ ಜಲ ವಿದ್ಯುತ್‌ ಯೋಜನೆಯ ವಿರುದ್ಧ ನಡೆದ ಹೋರಾಟದ ಹಾದಿಯನ್ನು ನೆನಪಿಸುವ “ಉರುಂಬಿ ಸಂರಕ್ಷಣೆಯ ಯಶಸ್ಸಿನಲ್ಲಿ’ ಎನ್ನುವ ಪುಸ್ತಕಗಳನ್ನು ಬರೆದಿರುವ ಅವರು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು.

ಕುಮಾರಧಾರ ಪರಿಸರ ಸಂರಕ್ಷಣ ಸಮಿತಿಯ ಅಧ್ಯಕ್ಷ, ಕಡಬ ತಾಲೂಕು ಜಾನಪದ ಪರಿಷತ್‌ನ ಸಂಚಾಲಕ, ಜನಜಾಗೃತಿ ವೇದಿಕೆಯ ಕಡಬ ವಲಯಾಧ್ಯಕ್ಷರು. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಅತ್ಯುತ್ತಮ ಭಜನ ಪಟುವಾಗಿ, ಪರಿಸರವಾದಿಯಾಗಿರುವುದರ ಜತೆಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

 ನಿಮ್ಮದು ಜನಪರ ಹೋರಾಟ, ಕೃಷಿ ಚಿಂತನೆಯ ಬರಹ ಸಮ್ಮಿಳಿತಗೊಂಡ ಬದುಕು. ಇದು ಹೇಗೆ ಸಾಧ್ಯವಾಯಿತು?

ಬಾಲ್ಯದಿಂದಲೇ ನಮ್ಮ ಹಳ್ಳಿಯ ಜನರ ಸರಳ ಜೀವನ, ಪ್ರಕೃತಿಯೊಂದಿಗಿನ ಸಹ ಜೀವನ ಮತ್ತು ಬಂದ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಪರಿಹರಿಸುವುದನ್ನೆಲ್ಲಾ ನೋಡಿದ ನನಗೆ ಹಳ್ಳಿಯ ಕೃಷಿ ಬದುಕಿನಲ್ಲಿ ಎಲ್ಲವನ್ನೂ ಎದುರಿಸಬಹುದು ಮತ್ತು ಆ ಮೂಲಕ ಬದುಕು ಕಟ್ಟಬಹುದು ಎಂಬ ಭಾವನೆ ಗಟ್ಟಿಯಾಯಿತು. ನಮ್ಮ ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರವಿದೆ. ಮತ್ತೂಬ್ಬರನ್ನು ದೂರುುವುದನ್ನು ಬಿಟ್ಟು, ಎಲ್ಲವನ್ನೂ ಸರಕಾರದಿಂದ ಅಪೇಕ್ಷಿಸುವುದಕ್ಕಿಂತ ನಮ್ಮಿಂದಾದ ಪ್ರಯತ್ನ ಅಗತ್ಯ ಎಂಬ ಅಭಿಪ್ರಾಯ ನನ್ನದು.

 ಲಕ್ಷಾಂತರ ರೂ. ಖರ್ಚು ಮಾಡಿ ನಡೆಸುವ ಈ ಸಾಹಿತ್ಯ ಸಮ್ಮೇಳನಗಳಿಂದ ಏನು ನಿರೀಕ್ಷೆ ಮಾಡಬಹುದು?

ಇಂದಿನ ಕಾಲಮಾನದಲ್ಲಿ ಎಲ್ಲಾ ಕಾರ್ಯಕ್ರಮಗಳು ಕೂಡ ಅದ್ದೂರಿಯಾಗಿ ನಡೆಯುತ್ತಿರುವಾಗ ಖರ್ಚಿನ ಬಗ್ಗೆ ಯೋಚಿಸುವುದಕ್ಕಿಂತ ತಮ್ಮ ಮೂಲ ಉದ್ದೇಶಗಳ ಸಫಲತೆಯಾಗಿದೆಯೇ? ಎಂಬ ಚಿಂತನೆ ಅಗತ್ಯ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳ ಸಂಯೋಜನೆ ಅಗತ್ಯ.

 ಕನ್ನಡ ಹಾಗೂ ಇಂಗ್ಲಿಷ್‌ ಶಿಕ್ಷಣ ಮಾಧ್ಯಮದ ಗೊಂದಲದಲ್ಲಿರುವ ಈ ಸಂಧಿ ಕಾಲದಲ್ಲಿ ನಿಮ್ಮ ಅಭಿಪ್ರಾಯ ಏನು?

ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರಷ್ಟೇ ಸಾಧನೆ ಸಾಧ್ಯ ಎಂಬ ಭ್ರಮೆಯಲ್ಲಿದ್ದೇವೆ. ಇದು ಸರಿಯಲ್ಲ. ಕನ್ನಡ ಮಾಧ್ಯಮದೊಂದಿಗೆ ಇತರ ಭಾಷೆಗಳೊಂದಿಗಿನ ಶಿಕ್ಷಣವನ್ನು ಪಡೆಯೋಣ. ಭಾಷೆಯು ಸಂಪರ್ಕವನ್ನು ಸಾಧಿಸುವ ಮಾಧ್ಯಮವಾಗಬೇಕೇ ಹೊರತು ಕಂದಕ ಸೃಷ್ಟಿಸಬಾರದು.

ಕನ್ನಡದಲ್ಲಿ ಕಲಿತರೆ ಮಕ್ಕಳ ಭವಿಷ್ಯ ಹಾಳು ಎಂಬ ವಾದಗಳು ಖಂಡನೀಯ. ಹಾಗೆ ಹೇಳಿದರೆ ಕಳೆದ ಶತಮಾನದಿಂದೀಚೆಗೆ ಕನ್ನಡದಲ್ಲಿ ಕಲಿತ ಅದೆಷ್ಟೋ ಸಾಧಕರನ್ನು ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಮಾಡಿದ ಮಹನೀಯರನ್ನು ಅವಮಾನಿಸಿದಂತಲ್ಲವೇ?

 ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳಿದ್ದರೂ ಆಕರ್ಷಣೆ ಕಳೆದುಕೊಂಡಿವೆಯಲ್ಲ..

ಸೌಲಭ್ಯಗಳೆಲ್ಲ ಇದ್ದರೂ ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಿಕ್ಷಕರ ನೇಮಕಾತಿ ವಿಳಂಬವೋ?,ಶಿಕ್ಷಕರು ಸಾಕಷ್ಟು ಇಲ್ಲದಿದ್ದಾಗ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರ ನಿರಾಸಕ್ತಿಯೋ? ಕನ್ನಡ ಶಾಲೆ ಎಂಬ ಕೀಳರಿಮೆಯೋ? ಅಂತೂ ಕನ್ನಡ ಶಾಲೆಗಳ ಬಲವರ್ಧನೆ ಅನಿವಾರ್ಯ. ಅದಕ್ಕೆ ಪೂರಕವಾದ ಎಲ್ಲಾ ಸೌಕರ್ಯಗಳನ್ನು ಸರಕಾರ ನೀಡಲಿದೆ ಎಂಬ ಆಶಾಭಾವನೆ ಹೊಂದಿದ್ದೇನೆ.

 ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಅದನ್ನು ಉತ್ತೇಜಿಸುವುದು ಹೇಗೆ?

ಶಿವರಾಮ ಕಾರಂತರ ಅಭಿಮತದಂತೆ 8 ವರ್ಷದವರೆಗೆ ಮಗು ತಾಯಿಯ ಜೊತೆ ಆಡಿಕೊಂಡಿರಬೇಕು. ತಾಯಿ, ಅಜ್ಜಿ ಹೇಳುವ ಕಥೆಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ಜಾಗೃತವಾಗಿ ಆ ಮೂಲಕ ಓದುವ ಹವ್ಯಾಸ ಚಿಗುರೊಡೆಯುತ್ತದೆ. ಈ ಪ್ರವೃತ್ತಿ ಪೋಷಕರ ಅಧ್ಯಾಪಕರ ಸಹಕಾರ ಅಗತ್ಯ. ಪ್ರಸ್ತುತ ಎಲ್ಲಾ ವಯೋಮಾನದವರಲ್ಲಿ ಮೊಬೈಲ್‌ ಬಳಕೆ ಹೆಚ್ಚಾಗಿ ಓದುವ ಪ್ರವೃತ್ತಿ ಕಡಿಮೆಯಾಗಿರುವುದು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹಿನ್ನಡೆಯಾಗಿದೆ.

 ಸಾಹಿತ್ಯ ಬದುಕಿಗೆ ಹೇಗೆ ಪೂರಕ?

ಮನುಷ್ಯನ ವೃತ್ತಿ , ಪ್ರವೃತ್ತಿ, ಉದ್ಯೋಗ, ಕಾಯಕ, ಅಧ್ಯಯನ, ಅಧ್ಯಾಪನ, ಆಸಕ್ತಿ, ಕುಲಕಸುಬು, ಕೃಷಿ, ಆಚಾರ, ವಿಚಾರ, ಹಬ್ಬ ಹರಿ ದಿನಗಳಲ್ಲಿ ಸಾಹಿತ್ಯ ಅಡಕವಾಗಿರುವುದರಿಂದ ಮಾನವನ ಬದುಕು ಸಾಹಿತ್ಯಸಹಿತವಾಗಿಯೇ ಇದೆ. ಭಾರತೀಯ ಸಂಸ್ಕೃತಿ ಆಚಾರ ವಿಚಾರ ಇವೆಲ್ಲವೂ ಸಾಹಿತ್ಯದೊಂದಿಗೆ ಹಾಸುಹೊಕ್ಕಾಗಿದೆ.

-ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.