Kadaba: ಜಾಲತಾಣಕ್ಕಿಂತ ಪುಸ್ತಕದ ಓದೇ ಮೇಲು
ಕುಂತೂರು ಪದವಿನಲ್ಲಿ ಕಡಬ ತಾಲೂಕು 4ನೆಯ ಕನ್ನಡ ಸಾಹಿತ್ಯ ಸಮ್ಮೇಳನ
Team Udayavani, Dec 1, 2024, 12:27 PM IST
ಕಡಬ: ಮನುಷ್ಯನಿಗೆ ಊಟ, ತಿಂಡಿ, ನಿದ್ರೆ ಇದ್ದಂತೆ ಸಾಹಿತ್ಯವೂ ಅಗತ್ಯವಾದುದು. ಸಾಹಿತ್ಯದಿಂದ ಹೊಸ ಚಿಂತನೆ, ಆಲೋಚನೆ, ಶೋಧನೆ, ಸಂಶೋಧನೆ, ಹೊಳಹುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ವ್ಯಕ್ತಿತ್ವ ವಿಕಸನಗೊಂಡು ನಮ್ಮ ವೃತ್ತಿಗೆ, ಆಸಕ್ತಿಗೆ ಪೂರಕವಾಗಿ ಬದುಕಿನ ಸರ್ವತೋಮುಖ ವಿಕಾಸಕ್ಕೆ ಪ್ರೇರಣೆಯಾಗಿ ಬದುಕು ಉಜ್ವಲವಾಗುತ್ತದೆ ಎಂದು ಕಡಬ ತಾಲೂಕು 4ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎನ್.ಕರುಣಾಕರ ಗೋಗಟೆ ಅವರು ಅಭಿಪ್ರಾಯಪಟ್ಟರು.
ಅವರು ಅವರು ಶನಿವಾರ ಕುಂತೂರು ಪದವು ಸೈಂಟ್ ಜಾರ್ಜ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಫಾ|ಎ.ಜೇಕಬ್ ವೇದಿಕೆ, ಡಾ|ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಸಮ್ಮೇಳನದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು. ಸಾಹಿತಿ ಸಮಾಜದ ಮಾರ್ಗದರ್ಶಕ. ಆತ ಅನುಭವಗಳ ಸಂಗ್ರಾಹಕ, ಅವುಗಳನ್ನು ಜನರತ್ತ ತಲುಪಿಸಿ ಬದುಕು ಹಸನುಗೊಳಿಸುವ ಶ್ರಮಿಕ ಎಂದು ಹೇಳಿದ ಅವರು, ಜಾಲತಾಣಗಳನ್ನು ತಡಕಾಡುವುದಕ್ಕಿಂತ ಪುಸ್ತಕಗಳನ್ನು ಓದು ವುದು ಎಷ್ಟೋ ಮೇಲು ಎಂದು ಪ್ರತಿಪಾದಿಸಿದರು.
ಆಂಗ್ಲ ಭಾಷೆಯೇ ಅನ್ನದ ಭಾಷೆ ಎಂಬ ಭ್ರಮೆ ಹಲವರಲ್ಲಿದೆ. ಆಂಗ್ಲ ಭಾಷೆಯಲ್ಲೇ ಓದು ಮುಗಿಸಿದ ಒಬ್ಬ ಎಂಜಿನಿಯರ್, ಡಾಕ್ಟರ್, ವಕೀಲ ಅಥವಾ ಉದ್ಯಮಿ ಕನ್ನಡ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಬೇಕಾದರೆ ನಿರರ್ಗಳ ಕನ್ನಡ ಮಾತಾಡಬಲ್ಲವನಾಗಬೇಕು.ಆತ ಸ್ಥಳೀಯ ಭಾಷೆಗೆ ಸ್ಪಂದಿಸದೇ ಹೋದರೆ ಯಶಸ್ಸು ಸಾಧಿಸಲಾರ ಎಂದು ಗೋಗಟೆ ಅಭಿಪ್ರಾಯಪಟ್ಟರು.
ಸೈಂಟ್ ಜಾರ್ಜ್ ಹೈಸ್ಕೂಲಿನ ಆಡಳಿತ ಮಂಡಳಿಯ ಅಧ್ಯಕ್ಷ ಫಾ| ನಿತಿನ್ ಮ್ಯಾಥ್ಯು ಆಶೀರ್ವಚನ ನೀಡಿದರು. ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ|ಎಂ.ಪಿ.ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಸಾಹಿತ್ಯ ಸಮ್ಮೇಳನದ ನಿಕಟಪೂರ್ವಾ ಧ್ಯಕ್ಷ ಗಣರಾಜ ಕುಂಬ್ಳೆ, ಗ್ರಾಪಂಗಳ ಅಧ್ಯಕ್ಷರಾದ ಸುಶೀಲ ಆಲಂಕಾರು, ಸುಚೇತಾ ರಾಮಕುಂಜ, ಪುಷ್ಪ ಸುಭಾಶ್ ಶೆಟ್ಟಿ ಕೊಯ್ಲ, ಸಂಧ್ಯಾ ಕೆ. ಕಸಾಪ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ರಾಮಕುಂಜ, ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್.ಬಿ., ಗೌರವ ಕಾರ್ಯದರ್ಶಿ ನಾಗರಾಜ್ ಎನ್.ಕೆ., ಶಾಲಾ ಸಂಚಾಲಕ ವಿ.ಐ.ಅಬ್ರಹಾಂ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಹರಿಶ್ಚಂದ್ರ ಕೆ. ಸ್ವಾಗತಿಸಿ, ತಾಲೂಕು ಘಟಕ ಅಧ್ಯಕ್ಷ ಕೆ. ಸೇಸಪ್ಪ ರೈ ರಾಮಕುಂಜ ಪ್ರಸ್ತಾವನೆಗೈದರು. ಶಿಕ್ಷಕ ನಾರಾಯಣ ಭಟ್ ಟಿ. ಸಮ್ಮೇಳನಾಧ್ಯಕ್ಷರನ್ನು, ಶಿಕ್ಷಕಿ ಸರಿತಾ ಜನಾರ್ದನ ಉದ್ಘಾಟಕರನ್ನು ಪರಿಚಯಿಸಿದರು. ಶ್ರೀ ರಾಮಕುಂಜೇಶ್ವರ ಪಿ.ಯು. ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಶೇಖರ ಕೆ. ನಿರೂಪಿಸಿ, ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು.
ಕನ್ನಡಕ್ಕೆ ಶೇ.5 ಬಜೆಟ್ ಕೊಡಿ
ಸಮ್ಮೇಳನವನ್ನು ಉದ್ಘಾಟಿಸಿದ ಕವಿ, ಸಾಹಿತಿ ಡಾ| ವಸಂತ್ ಕುಮಾರ್ ಪೆರ್ಲ ಅವರು, ಸರಕಾರ ಕನ್ನಡ ಭಾಷೆ ಸಾಹಿತ್ಯ ಅಭಿವೃದ್ಧಿಗೆ ರಾಜ್ಯದ ಒಟ್ಟು ಬಜೆಟ್‌ನ ಶೇ.5 ಭಾಗ ಅನುದಾನವನ್ನಾದರೂ ಮೀಸಲಿರಿಸಬೇಕು ಎಂದು ಹೇಳಿದರು.
ಶಿಕ್ಷಣದ ಮೂಲಕ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಬಹುದು ಎಂದ ಅವರು ನಾವು ಎಷ್ಟೇ ಬೆಳೆದರೂ ಈ ಮಣ್ಣಿನ ಭಾಷೆ, ತಾಯಿ ಭಾಷೆಯನ್ನು ಮೀರಿ ಹೋಗುವಂತಿಲ್ಲ. ಹಳ್ಳಿ ಸೊಗಡಿನಲ್ಲಿ ಕನ್ನಡ ಭಾಷೆ ಅಡಕವಾಗಿರುತ್ತದೆ. ಆ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಹಳ್ಳಿ ಭಾಗಗಳಲ್ಲಿ ನಡೆದಾಗ ಅಲ್ಲಿನ ಪ್ರತಿಭೆಗಳು ಪ್ರೇರಣೆಗೊಂಡು ಕನ್ನಡ ಸಾಹಿತ್ಯ ಕ್ಷೇತ್ರ ಬೆಳೆಯಲು ಸಹಾಯಕವಾಗುತ್ತದೆ ಎಂದರು.
ಕೃತಿ, ಸ್ಮರಣ ಸಂಚಿಕೆ ಬಿಡುಗಡೆ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಅವರು ದೀಪ ಪ್ರಜ್ವಲನೆ ಮಾಡಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಾಹಿತ್ಯ ಪರಿಷತ್‌ನ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಕಲಾ ಪ್ರದರ್ಶನ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಮಹಮ್ಮದ್ ಕುಂಞಿ ಪುಸ್ತಕ ಪ್ರದರ್ಶನ , ಸ್ವಾಗತ ಸಮಿತಿ ಸಂಚಾಲಕ ರೋಯಿ ಅಬ್ರಹಾಂ ಪ್ರಾಚ್ಯವಸ್ತು ಪ್ರದರ್ಶನ ಹಾಗೂ ಅಧ್ಯಕ್ಷ ಗುರುರಾಜ್ ರೈ ಕೇವಳ ವಿಜ್ಞಾನ ಪ್ರದರ್ಶನ ಉದ್ಘಾಟಿಸಿದರು.
ಸುಪ್ರಿತಾ ಚರಣ್ ಪಾಲಪ್ಪೆ, ದೀಪ್ತಿ ಬಿ. ನೂಜಿಬಾಳ್ತಿಲ ಹಾಗೂ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ಅವರುಗಳ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ವಿಚಾರ ಮಂಡನೆ
ವಿಚಾರಗೋಷ್ಠಿಯಲ್ಲಿ ಓದುವ ಹವ್ಯಾಸ ಮೂಡಿಸುವಲ್ಲಿ ಸಮ್ಮೇಳನಗಳ ಪಾತ್ರ ಎಂಬ ವಿಷಯದ ಬಗ್ಗೆ ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ಹಾಗೂ ಕನ್ನಡಶಾಲೆಗಳನ್ನು ಉಳಿಸುವುದು ಹೇಗೆ?-ಹೊಸ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ಓಂತ್ರಡ್ಕ ಶಾಲಾ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ವಿಚಾರ ಮಂಡನೆ ಮಾಡಿದರು. ಕುಂತೂರು ಪದವು ಸ.ಹಿ. ಪ್ರಾಥಮಿಕ ಶಾಲೆ ಹಾಗೂ ಸಂತ ಜಾರ್ಜ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.
ಕನ್ನಡ ಭುವನೇಶ್ವರಿ ವೈಭವದ ಮೆರವಣಿಗೆ
ಪದವು ಸೈಂಟ್ ಜಾರ್ಜ್ ಆರ್ಥೋಡಕ್ಸ್ ಚರ್ಚ್ ಬಳಿಯಿಂದ ಸಮ್ಮೇಳನ ವೇದಿಕೆವರೆಗೆ ಕನ್ನಡ ಭುವನೇಶ್ವರಿಯ ಅದ್ದೂರಿ ಮೆರವಣಿಗೆ ಸಾಗಿತು. ಪೆರಾಬೆ ಗ್ರಾಪಂ ಸದಸ್ಯ ಪಿ.ಜಿ. ರಾಜು ಮೆರವಣಿಗೆ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಕುಮಾರ್, ಶಿಕ್ಷಕರಾದ ದಿಲೀಪ್ ಎಸ್., ಮಹೇಶ್ ಪಾಟಾಳಿ, ಬಿ. ಪದ್ಮನಾಭ ಗೌಡ ಸಂಯೋಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.