ಕಡಬ ತಾ.ಪಂ. ರಚನೆಗೆ ಸಮ್ಮತಿ
ಪುತ್ತೂರಿನ 11, ಸುಳ್ಯದ 2 ಕ್ಷೇತ್ರಗಳು ಕಡಬದ ವ್ಯಾಪ್ತಿಗೆ ಸೇರ್ಪಡೆ
Team Udayavani, Jun 13, 2019, 5:00 AM IST
ಕಡಬ: ನೂತನ ಕಡಬ ತಾಲೂಕು ಉದ್ಘಾಟನೆಯಾಗಿ ಅನುಷ್ಠಾನ ಕಾರ್ಯಗಳು ಪ್ರಗತಿಯಲ್ಲಿರುವಂತೆಯೇ ಸ್ವತಂತ್ರ ಕಡಬ ತಾಲೂಕು ಪಂಚಾಯತ್ ರಚನೆಗೆ ಸರಕಾರವು ಹಸುರು ನಿಶಾನೆ ನೀಡಿದೆ.
ರಾಜ್ಯದಲ್ಲಿ ರಚನೆಯಾಗಿರುವ 50 ಹೊಸ ತಾಲೂಕುಗಳಲ್ಲಿ ಪ್ರತ್ಯೇಕ ತಾಲೂಕು ಪಂಚಾಯತ್ ವ್ಯವಸ್ಥೆಗಾಗಿ ಪ್ರತೀ ತಾಲೂಕಿಗೆ 14 ಹುದ್ದೆಗಳಂತೆ 700 ಹುದ್ದೆಗಳನ್ನು ಸೃಷ್ಟಿಯಾಗಲಿದ್ದು, ಈ ಕುರಿತು ಜೂ. 12ರಂದು ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಪ್ರಸ್ತುತ ಪುತ್ತೂರು ಹಾಗೂ ಸುಳ್ಯ ತಾ.ಪಂ. ವ್ಯಾಪ್ತಿ ಯಲ್ಲಿರುವ ಕಡಬ ತಾಲೂಕಿಗೆ ಸೇರ್ಪಡೆಯಾಗಿ ರುವ ಒಟ್ಟು 42 ಗ್ರಾಮಗಳ ನ್ನೊಳಗೊಂಡ 13 ತಾ.ಪಂ. ಕ್ಷೇತ್ರಗಳನ್ನು ಸೇರಿಸಿ ಹೊಸ ಕಡಬ ತಾ.ಪಂ. ಕಾರ್ಯಾ ರಂಭಿಸಲಿದೆ. ಹೊಸ ತಾಲೂಕು ಪಂಚಾಯತ್ ಕಚೇರಿ ತೆರೆಯಲು ಲಭ್ಯ ವಿರುವ ಕಟ್ಟಡ, ಕಾದಿರಿಸಲಾಗಿರುವ ಜಮೀನು ಇತ್ಯಾದಿ ಮಾಹಿತಿಗಳನ್ನು ಸರಕಾ ರಕ್ಕೆ ಕಳುಹಿಸಲಾಗಿದ್ದು, ಹೊಸ ವ್ಯವಸ್ಥೆಗೆ ಕ್ಷೇತ್ರಗಳನ್ನು ವಿಂಗಡಿಸುವ ನಿಟ್ಟಿನಲ್ಲಿ ಸರ ಕಾರವು ಕಾರ್ಯೋನ್ಮುಖವಾಗಿದೆ.
ಪುತ್ತೂರು ತಾಲೂಕಿನ ಕಡಬ (ಕಡಬ, ಕೋಡಿಂಬಾಳ), ಕುಟ್ರಾಪ್ಪಾಡಿ (ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ), ಐತ್ತೂರು (ಐತ್ತೂರು, ಕೊಣಾಜೆ, ಬಂಟ್ರ, 102 ನೆಕ್ಕಿಲಾಡಿ), ಬಿಳಿನೆಲೆ (ಬಿಳಿನೆಲೆ, ಶಿರಾಡಿ, ಶಿರಿಬಾಗಿಲು, ಕೊಂಬಾರು), ಗೋಳಿತೊಟ್ಟು (ಗೋಳಿತೊಟ್ಟು, ಆಲಂತಾಯ, ಹಳೆನೇರೆಂಕಿ), ಚಾರ್ವಾಕ (ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಕಾಯಿಮಣ, ಕುದ್ಮಾರು), ಸವಣೂರು (ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು), ನೆಲ್ಯಾಡಿ (ನೆಲ್ಯಾಡಿ, ಕೊಣಾಲು), ಕೌಕ್ರಾಡಿ (ಕೌಕ್ರಾಡಿ, ಇಚ್ಲಂಪಾಡಿ, ಬಲ್ಯ), ಆಲಂಕಾರು (ಆಲಂಕಾರು, ಪೆರಾಬೆ, ಕುಂತೂರು), ರಾಮಕುಂಜ (ರಾಮಕುಂಜ, ಕೊೖಲ), ಸುಳ್ಯ ತಾಲೂಕಿನ ಸುಬ್ರಹ್ಮಣ್ಯ (ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಲ್ಪ, ಕೇನ್ಯ) ಹಾಗೂ ಎಣ್ಮೂರು (ಎಣ್ಮೂರು, ಎಡಮಂಗಲ) ಕ್ಷೇತ್ರಗಳು ನೂತನ ಕಡಬ ತಾ.ಪಂ.ನ ವ್ಯಾಪ್ತಿಗೆ ಬರಲಿವೆ.
ಅಗತ್ಯ ಕ್ರಮ
ಹೊಸ ತಾಲೂಕು ಪಂಚಾಯತ್ ಕಚೇರಿ ತೆರೆಯಲು ಲಭ್ಯವಿರುವ ಕಟ್ಟಡ, ಕಾದಿರಿಸಲಾಗಿರುವ ಜಮೀನು ಇತ್ಯಾದಿ ಮಾಹಿತಿಗಳನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದ್ದು, ಹೊಸ ವ್ಯವಸ್ಥೆಗೆ ಕ್ಷೇತ್ರಗಳನ್ನು ವಿಂಗಡಿಸುವ ಸಲುವಾಗಿ ಸರಕಾರವು ಅಗತ್ಯ ಕ್ರಮ ಕೈಗೊಳ್ಳಲಿದೆ.
– ಜಾನ್ಪ್ರಕಾಶ್ ರೋಡ್ರಿಗಸ್, ಕಡಬ ತಹಶೀಲ್ದಾರ್
ಕಡಬ ತಾ.ಪಂ.ಗೆ ಸೇರ್ಪಡೆಯಾಗಲಿರುವ ಕ್ಷೇತ್ರಗಳು
ಪುತ್ತೂರು ತಾಲೂಕಿನ ಕಡಬ (ಕಡಬ, ಕೋಡಿಂಬಾಳ), ಕುಟ್ರಾಪ್ಪಾಡಿ (ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ), ಐತ್ತೂರು (ಐತ್ತೂರು, ಕೊಣಾಜೆ, ಬಂಟ್ರ, 102 ನೆಕ್ಕಿಲಾಡಿ), ಬಿಳಿನೆಲೆ (ಬಿಳಿನೆಲೆ, ಶಿರಾಡಿ, ಶಿರಿಬಾಗಿಲು, ಕೊಂಬಾರು), ಗೋಳಿತೊಟ್ಟು (ಗೋಳಿತೊಟ್ಟು, ಆಲಂತಾಯ, ಹಳೆನೇರೆಂಕಿ), ಚಾರ್ವಾಕ (ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಕಾಯಿಮಣ, ಕುದ್ಮಾರು), ಸವಣೂರು (ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು), ನೆಲ್ಯಾಡಿ (ನೆಲ್ಯಾಡಿ, ಕೊಣಾಲು), ಕೌಕ್ರಾಡಿ (ಕೌಕ್ರಾಡಿ, ಇಚ್ಲಂಪಾಡಿ, ಬಲ್ಯ), ಆಲಂಕಾರು (ಆಲಂಕಾರು, ಪೆರಾಬೆ, ಕುಂತೂರು), ರಾಮಕುಂಜ (ರಾಮಕುಂಜ, ಕೊೖಲ), ಸುಳ್ಯ ತಾಲೂಕಿನ ಸುಬ್ರಹ್ಮಣ್ಯ (ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಲ್ಪ, ಕೇನ್ಯ) ಹಾಗೂ ಎಣ್ಮೂರು (ಎಣ್ಮೂರು, ಎಡಮಂಗಲ) ಕ್ಷೇತ್ರಗಳು ನೂತನ ಕಡಬ ತಾ.ಪಂ.ನ ವ್ಯಾಪ್ತಿಗೆ ಬರಲಿವೆ.
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.