ಕಲ್ಚೆರ್ಪೆ ತ್ಯಾಜ್ಯಘಟಕ, ವಿದ್ಯುತ್ ಬಿಲ್ ಬಾಕಿ
Team Udayavani, Aug 1, 2018, 12:32 PM IST
ಸುಳ್ಯ : ನಗರದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಗರಾಡಳಿತ ಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ಸದಸ್ಯರು ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡ ಘಟನೆ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನ.ಪಂ. ಸಭಾಂಗಣದಲ್ಲಿ ನಡೆಯಿತು.
ಸಭೆ ನಡೆಸಿದರೆ ಸಾಕೆ?
ಕಲ್ಚಪೆì ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ವಿಷಯ ಪ್ರಸ್ತಾವಿಸಿದ ಸದಸ್ಯ ಗೋಕುಲ್‌ದಾಸ್, 10 ವರ್ಷದ ಬಳಿಕ ಶಾಸಕರು ಅಲ್ಲಿಗೆ ಭೇಟಿ ನೀಡಿದ್ದಾರೆ. ನ.ಪಂ.ತ್‌ನಲ್ಲೂ ಸಭೆ ನಡೆಸಿದ್ದಾರೆ. ಅದಾದ ಬಳಿಕ ಏನಾಗಿದೆ ಎಂಬ ಮಾಹಿತಿ ಇಲ್ಲ. ಇದು ಪತ್ರಿಕಾ ಹೇಳಿಕೆಗಷ್ಟೇ ಸೀಮಿತವಾಗಿದೆ ಎಂದು ಟೀಕಿಸಿದರು. ದುಗಲಡ್ಕದಲ್ಲಿ 21 ಎಕ್ರೆ ಜಾಗವಿದೆ ಎಂದು ಈ ಹಿಂದೆ ಮಾಹಿತಿ ನೀಡಿದ್ದಿರಿ. ಆ ಜಾಗ ಏನಾಯಿತು ಎಂದು ಪ್ರೇಮಾ ಟೀಚರ್ ಪ್ರಶ್ನಿಸಿದರು. ಆ ಜಾಗಕ್ಕೆ ಅಂದೇ ಆಕ್ಷೇಪಣೆಗಳು ಬಂದಿವೆ ಎಂದು ಸದಸ್ಯ ಶಿವಕುಮಾರ್ ಹಾಗೂ ಶೀಲಾವತಿ ಹೇಳಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಸಾರ್ವಜನಿಕರು ಸಹಕರಿಸದರೆ ತ್ಯಾಜ್ಯ ವಿಲೇವಾರಿ ಕಷ್ಟದ ಕೆಲಸವಲ್ಲ ಎಂದರು.
ಕಾಡು ಕಡಿದ ಬಿಲ್ ಡಿಸಿ ಅಂಗಳದಲ್ಲಿ!
ಕಂದಡ್ಕ ಸಿ.ಆರ್.ಸಿ. ಕಾಲನಿ ಶ್ಮಶಾನದ ಕಾಡು ಕಡಿದ ಬಗ್ಗೆ ಪಾವತಿಸಿದ ಬಿಲ್ಲಿನ ವಿಚಾರದಲ್ಲಿ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ ವಿಚಾರ ಏನಾಯತು ಎಂದು ಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ, ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಬರೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದರು. ತನಿಖೆಯಲ್ಲಿ ಈ ತನಕ ಯಾವುದೇ ಪ್ರಗತಿಯಾಗಿಲ್ಲ. ಮರು ತನಿಖೆಗೆ ಬರೆಯುವುದು ಉತ್ತಮ ಎಂದು ಗಿರೀಶ್ ಕಲ್ಲಗದ್ದೆ ಹೇಳಿದರೆ, ಈ ಅವ್ಯವಹಾರಕ್ಕೆ ಸಹಕರಿಸಿದವರನ್ನು ತನಿಖೆ ಮಾಡಬೇಕು ಎಂದು ಪ್ರಕಾಶ್ ಹೆಗ್ಡೆ ಆಗ್ರಹಿಸಿದರು.
ಮರು ತನಿಖೆಗೆ ಬರೆಯಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ ಸದಸ್ಯ ಶಿವಕುಮಾರ್ ಕಂದಡ್ಕ, 2016ರಲ್ಲಿ ಪ್ರಕಾಶ್ ಹೆಗ್ಡೆ ಅವರು ಅಧ್ಯಕ್ಷರಾಗಿದ್ದಾಗ ಕಂದಡ್ಕದ ಮುತ್ತುಮಾರಿಯಮ್ಮ ದೇವಸ್ಥಾನದ ಹತ್ತಿರ ಕಾಡು ಕಡಿಯಲಾಗಿದೆ ಎಂದು 8,600 ರೂ. ಡ್ರಾ ಮಾಡಲಾಗಿದೆ. ಅದರ ಬಗ್ಗೆಯೂ ತನಿಖೆ ನಡೆಯಬೇಕು ಒತ್ತಾಯಿಸಿದರು.
ಮೀನು ಮಾರುಕಟ್ಟೆ ಏಲಂ
ನ.ಪಂ.ನ ವಿವಿಧ ಸ್ಟಾಲ್‌ಗಳಿಗೆ ನಡೆದ ನಡೆದ ಬಹಿರಂಗ ಏಲಂ ಮಂಜೂರು ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಮೀನು ಮಾರುಕಟ್ಟೆಯ ಕೇವಲ ಕೆಲವು ಸ್ಟಾಲ್‌ಗಳನ್ನು ಮಾತ್ರ ಏಕೆ ಏಲಂ ಮಾಡಿದ್ದೀರಿ? ಎಲ್ಲವನ್ನು ಏಕಕಾಲದಲ್ಲಿ ಏಕೆ ಮಾಡಿಲ್ಲ ಎಂದು ಗೋಕುಲ್‌ದಾಸ್ ಪ್ರಶ್ನಿಸಿದರು.
ವಿದ್ಯುತ್ ಬಿಲ್ ಬಾಕಿ: ಸುದಿನ ವರದಿ ಚರ್ಚೆ
ನ.ಪಂ.ನಿಂದ ಮೆಸ್ಕಾಂಗೆ ವಿದ್ಯುತ್ ಬಿಲ್ ಕಟ್ಟಲು ಬಾಕಿ ಇದೆ ಎಂಬ ಮಂಗಳವಾರದ ಉದಯವಾಣಿ ಸುದಿನ ವರದಿ ಪ್ರಸ್ತಾವಿಸಿದ ಸದಸ್ಯ ಗೋಕುಲ್‌ದಾಸ್, ಈ ಬಗ್ಗೆ ಉತ್ತರ ನೀಡುವಂತೆ ಆಗ್ರಹಿಸಿದರು. ಎಂಜಿನಿಯರ್ ಶಿವಕುಮಾರ್ ಉತ್ತರಿಸಿ, ಎಸ್‌ಎಫ್‌ಸಿಯಿಂದ ಬಂದ ಅನುದಾನಕ್ಕಿಂತ ವಿದ್ಯುತ್ ಖರ್ಚು ಜಾಸ್ತಿಯಾದ ಕಾರಣ ಪಾವತಿಸಲು ಬಾಕಿ ಇದೆ ಎಂದರು. ಹಲವು ಕಡೆಗಳಲ್ಲಿ ವಿದ್ಯುತ್ ಸೋರಿಕೆಯಾಗುತ್ತಿದೆ. ಸಮಗ್ರ ಸರ್ವೆ ಮಾಡಿಸಿ ಎಂದು ಗೋಕುಲ್ ದಾಸ್ ಆಗ್ರಹಿಸಿದರು. ಮೊದಲು ಎಲ್ಲ ಸದಸ್ಯರ ಮನೆಗೆ ಹೋಗಿ ಸೋರಿಕೆಯಾಗುತ್ತಿದ್ದೆಯೇ ಎಂದು ಪರಿಶೀಲನೆ ಮಾಡಬೇಕು ಎಂದು ಪ್ರಕಾಶ್ ಹೆಗ್ಡೆ ಧ್ವನಿಗೂಡಿಸಿದರು. ಕುಡಿಯುವ ನೀರಿಗೆ ವಿದ್ಯುತ್ ಹೆಚ್ಚು ಬಿಲ್ ಜಾಸ್ತಿ ಬರುತ್ತಿದ್ದು, ನೀರಿನ ಕರ ಸಂಗ್ರಹವಾಗದೆ ಪಂಚಾಯತ್‌ಗೆ ನಷ್ಟವಾಗುತ್ತಿದೆ. ಶುಲ್ಕ ಸಂಗ್ರಹಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.