ಭಯೋತ್ಪಾದನೆಯ ಮೂಲ ಹುಡುಕುವ ಪ್ರಯತ್ನವಾಗಲಿ: ಡಾ| ಪ್ರಭಾಕರ ಭಟ್
Team Udayavani, Nov 22, 2022, 6:45 AM IST
ಬಂಟ್ವಾಳ: ದ.ಕ. ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಭಯೋತ್ಪಾದಕತೆಯ ದೊಡ್ಡ ಜಾಲ ಕೆಲಸ ಮಾಡುತ್ತಿದ್ದು, ಸರಕಾರವು ಇದನ್ನು ಮಟ್ಟ ಹಾಕಲು ಪೂರ್ಣ ಪ್ರಮಾಣದಲ್ಲಿ ತೊಡ ಗಿಸಿಕೊಂಡು ಅದರ ಮೂಲವನ್ನು ಹುಡುಕುವ ಪ್ರಯತ್ನ ಮಾಡಬೇಕು ಎಂದು ಆರೆಸ್ಸೆಸ್ ಮುಂದಾಳು ಡಾ| ಪ್ರಭಾಕರ ಭಟ್ ಕಲ್ಲಡ್ಕ ಆಗ್ರಹಿಸಿದ್ದಾರೆ.
ಸೋಮವಾರ ನಂದಾವರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಭಯೋತ್ಪಾದನೆಯ ಚಿಂತನೆ ಸಮಾಜವನ್ನು ನಾಶ ಮಾಡುವ ಕಾರ್ಯವಾಗಿದ್ದು, ಮಂಗಳೂರು ಬಾಂಬ್ ತಯಾರಿಕಾ ಕೇಂದ್ರವಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಹಿಂದೆ ಮಂಗಳೂರಿನ ವಸತಿಗೃಹವೊಂದರಲ್ಲಿ ಬಾಂಬ್ ತಯಾರಿಯ ಪ್ರಯತ್ನ ನಡೆದಿತ್ತು. ಭಯೋತ್ಪಾದನೆಗೆ ಸಂಬಂಧಿಸಿ ಉಳ್ಳಾಲದಲ್ಲಿ ಮಾಜಿ ಶಾಸಕರ ತಮ್ಮನ ಮಗನ ಬಂಧನ, ದೀಪ್ತಿ ಮರಿಯಮ್ಮ ಪ್ರಕರಣಗಳು ಇವೆಲ್ಲವನ್ನೂ ಸಾಕ್ಷೀಕರಿಸುತ್ತಿವೆ ಎಂದರು.
ಹಿಂದೊಮ್ಮೆ ಪೊಲೀಸರ ಮೇಲೆಯೇ ದಾಳಿ ಮಾಡುವ ಪ್ರಯತ್ನ ನಡೆದಿದ್ದು, ಆಗ ಅವರನ್ನೇ ಶೂಟ್ ಮಾಡಿರುವ ಕುರಿತು ಅಂದಿನ ಕಮಿಷನರ್ ಹರ್ಷ ಅವರನ್ನು ನಾವು ನೆನಪು ಮಾಡಲೇಬೇಕು. ಇಲ್ಲದೇ ಇದ್ದರೆ ಇಡೀ ಜಿಲ್ಲೆ ಬೆಂಕಿಗೆ ಆಹುತಿಯಾಗುತ್ತಿತ್ತು ಎಂದರು.
ದುರ್ದೈವದ ಸಂಗತಿ:
ಹಿಂದೂ ಪದ ಆಶ್ಲೀಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಪದ ಆಶ್ಲೀಲ, ಕೆಟ್ಟದು ಅಂತಹ ಹೇಳುವುದು ದುರ್ದೈವದ ಸಂಗತಿಯಾಗಿದೆ. ರಾಜಕೀಯದ ಕಾರಣಕ್ಕಾಗಿ ಯಾರನ್ನೋ ಮೆಚ್ಚಿಸಲು ಏನೇನೋ ಮಾತನಾಡುವುದೇ ಆಶ್ಲೀಲ; ನಾಲಗೆಯಲ್ಲಿ ಅಂತಹ ಶಬ್ದಗಳೇ ಬರಬಾರದು. ಇಂತಹವರು ಭಯೋತ್ಪಾದನೆ, ಶ್ರದ್ಧಾ ಎಂಬ ಹೆಣ್ಣು ಮಗಳ ಕುರಿತು ಮಾತನಾಡುವುದೇ ಇಲ್ಲ ಎಂದರು.
ಟಿಪ್ಪು ಪ್ರತಿಮೆಯನ್ನು ಸಿದ್ದರಾಮಯ್ಯರೇ ಪೂಜಿಸಬೇಕಷ್ಟೆ! :
ಟಿಪ್ಪುವಿನ ಪ್ರತಿಮೆ ರಚನೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೆಲ್ಲಾ ಟಿಪ್ಪುವನ್ನು ಮುಟ್ಟಿದ್ದಾರೋ ಅವರೆಲ್ಲರೂ ಈಗ ಇಲ್ಲವಾಗಿದ್ದಾರೆ. ಟಿಪ್ಪುವಿನ ಪ್ರತಿಮೆಯನ್ನು ಮುಸಲ್ಮಾನರು ಒಪ್ಪಿಕೊಳ್ಳುತ್ತಾರೆಯೇ? ಮುಂದೆ ಪ್ರತಿಮೆ ಮಾಡುವ ಸಿದ್ದರಾಮಯ್ಯ ಅವರೇ ಪೂಜೆ ಮಾಡಬೇಕಷ್ಟೇ ಎಂದು ಡಾ| ಪ್ರಭಾಕರ ಭಟ್ ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.