ಕರಾಯ ಶಾಲೆ ಪಕ್ಕದ ಮರ ವಾರದೊಳಗೆ ತೆರವು: ಭರವಸೆ
Team Udayavani, Jul 10, 2018, 11:59 AM IST
ಉಪ್ಪಿನಂಗಡಿ: ಹೈಸ್ಕೂಲ್ ತರಗತಿಗಳ ಚಟುವಟಿಕೆ ನಡೆಯುವ ಕೊಠಡಿಗಳಿಗೆ ಕಟ್ಟಡಕ್ಕೆ ತಾಗಿಕೊಂಡಿರುವ ಅಪಾಯಕಾರಿ ಮರವನ್ನು ವಾರದ ಗಡುವಿನೊಳಗೆ ತೆರವುಗೊಳಿಸುವುದಾಗಿ ಉಪ ಅರಣ್ಯಾಧಿಕಾರಿ ವೆಂಕಪ್ಪ ನಾಯ್ಕ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕರಾಯ ಸರಕಾರಿ ಶಾಲೆಯ 8ರಿಂದ 10ನೇ ತರಗತಿಯ ಪ್ರೌಢಶಾಲೆ ವಿಭಾಗಕ್ಕೆ ಭಾರೀ ಗಾತ್ರದ ಮರ ತಾಗಿಕೊಂಡಿದ್ದು, ಉದಯವಾಣಿಯ ‘ಸುದಿನ’ ಸಚಿತ್ರ ವರದಿಯನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಉಪ್ಪಿನಂಗಡಿ ಅರಣ್ಯಾಧಿಕಾರಿ ಸಂಧ್ಯಾ, ತತ್ಕ್ಷಣವೇ ಉಪ ಅರಣ್ಯಾಧಿಕಾರಿ ವೆಂಕಪ್ಪ ನಾಯ್ಕ ಹಾಗೂ ಅರಣ್ಯ ಪಾಲಕ ಸುಧೀರ್ ನಟ್ಟಿಬೈಲು ಅವರನ್ನು ಸ್ಥಳಕ್ಕೆ ಕಳುಹಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅಪಾಯಕಾರಿ ಮರ ಎಂಬುದು ಮನ ವರಿಕೆಯಾಗಿದ್ದು, ವಾರದ ಗಡುವಿನೊಳಗೆ ತೆರವುಗೊಳಿಸುವುದಾಗಿ ಹೈಸ್ಕೂಲ್ ಮುಖ್ಯ ಶಿಕ್ಷಕ ಶಿವಬಾಳು ಅವರಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.