ನೇರ ಹಣಾಹಣಿ: ಗೆಲ್ಲುವ ಜಿದ್ದಿಗೆ ಬಿದ್ದಿರುವ ಬಿಜೆಪಿ-ಕಾಂಗ್ರೆಸ್
Team Udayavani, May 5, 2023, 7:50 AM IST
ಬಂಟ್ವಾಳ: ಬಿಜೆಪಿ-ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಾರಣವಾಗಿರುವ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಮಧ್ಯೆ ನೇರ ಹಣಾಹಣಿ ಈ ಬಾರಿಯೂ ಸ್ಪಷ್ಟ. ಬಿಜೆಪಿಗೆ ಸ್ಥಾನ ಉಳಿಸಿಕೊಳ್ಳುವ ಅನಿವಾರ್ಯತೆ, ಕಾಂಗ್ರೆಸ್‌ಗೆ ಗೆಲ್ಲಲೇಬೇಕೆಂಬ ಪ್ರತಿಷ್ಠೆ. ಇಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸ್ಪರ್ಧಿಸಿದ್ದರೆ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಾಂಗ್ರೆಸ್‌ನ ಅಭ್ಯರ್ಥಿ. ಇದು ಇವರಿಬ್ಬರ ನಡುವಿನ ಮೂರನೇ ಬಾರಿಯ ಮುಖಾಮುಖೀ.
ಎರಡು ಪಕ್ಷದಿಂದಲೂ ಬಿರುಸಿನ ಪ್ರಚಾರ ನಡೆಯುತ್ತಿದೆ. ದೊಡ್ಡ ಮಟ್ಟಿಗೆ ಮತ ಪಡೆಯುವ ಮೂರನೇ ಅಭ್ಯರ್ಥಿ ಇಲ್ಲದೇ ಇರುವುದರಿಂದ ಕಾಂಗ್ರೆಸ್-ಬಿಜೆಪಿ ತಮ್ಮ ವೋಟ್‌ಬ್ಯಾಂಕ್‌ಗಳನ್ನೇ ಗುರಿಯಾಗಿಸಿಕೊಂಡಿವೆ.
ನಾಮಪತ್ರ ಸಲ್ಲಿಕೆಯ ವೇಳೆ ಎರಡೂ ಪಕ್ಷಗಳು ಕೂಡ ದೊಡ್ಡ ಮಟ್ಟಿನ ಶಕ್ತಿ ಪ್ರದರ್ಶನ ತೋರಿದ್ದವು. ಇದರ ಮಧ್ಯೆ ಎಸ್‌ಡಿಪಿಐ ಪಕ್ಷ ಪಡೆಯುವ ಮತಗಳ ಸಂಖ್ಯೆಯಲ್ಲಿ ಬಿಜೆಪಿ-ಕಾಂಗ್ರೆಸ್‌ನ ಮತಗಳ ಗಣಿತವಿದೆ ಎನ್ನಲಾಗುತ್ತಿದೆ. ಆದರೆ 2018ರಲ್ಲಿ ಎಸ್‌ಡಿಪಿಐ ಸ್ಪರ್ಧಿಸದಿದ್ದರೂ 15,971ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿತ್ತು. ಮತ್ತೂಂದು ಲೆಕ್ಕಾಚಾರ ನೋಡಿದರೆ 2013ರಲ್ಲಿ ಎಸ್‌ಡಿಪಿಐ 6113 ಮತಗಳನ್ನು ಗಳಿಸಿದರೂ, ಕಾಂಗ್ರೆಸ್ 17,850 ಮತಗಳಿಂದ ಗೆದ್ದಿತ್ತು. ಇದನ್ನು ಗಮನಿಸಿದರೆ ಕಾಂಗ್ರೆಸ್-ಬಿಜೆಪಿಯ ಸೋಲು-ಗೆಲುವಿನಲ್ಲಿ ಎಸ್‌ಡಿಪಿಐ ಮತಗಳಿಕೆ ನಿರ್ಣಯವಾಗಲಾರದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಬಿಜೆಪಿ ಸರಕಾರದ ಸಾಧನೆ, ತಮ್ಮ ಅವಧಿಯ ಅಭಿವೃದ್ಧಿ ಕಾರ್ಯದ ಜತೆಗೆ ಶಾಂತಿಯ ಬಂಟ್ವಾಳ ನಿರ್ಮಾಣಕ್ಕೆ ಒತ್ತು ನೀಡಿರುವುದಾಗಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮತದಾರರಿಗೆ ವಿವರಿಸುತ್ತಿದ್ದರೆ, ಕಾಂಗ್ರೆಸ್ ತನ್ನ 2013-18ರ ಅವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳ ಜತೆಗೆ ಒಟ್ಟು 9ನೇ ಬಾರಿಗೆ ಸ್ಪರ್ಧಿಸುತ್ತಿರುವ ಬಿ.ರಮಾನಾಥ ರೈ ಅವರಿಗೆ ಕೊನೆಯ ಅವಕಾಶ ನೀಡಿ ಎಂಬುದಾಗಿ ಹೇಳುತ್ತಿದೆ.
ಎರಡೂ ಪಕ್ಷಗಳು ಕೂಡ ಹಳೆ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ವಿಶೇಷ.
ಜಾತಿ ಲೆಕ್ಕಾಚಾರವನ್ನು ಹಾಕಿದರೆ ಮುಸ್ಲಿಂ ಮತಗಳೇ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದು, ಅದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಬಹುದು. ಆದರೆ ಮುಸ್ಲಿಂ ಮತಗಳಿಂದಲೇ ಗೆಲ್ಲುವುದು ಕಷ್ಟ. ಎಸ್‌ಡಿಪಿಐ ಕೂಡ ಕಣದಲ್ಲಿರುವುದರಿಂದ ಅದು ಎಷ್ಟು ಮತಗಳನ್ನು ಪಡೆಯಬಹುದು ಎಂಬುದೂ ಮುಖ್ಯ. ಕಾಂಗ್ರೆಸ್, ಬಿಜೆಪಿಯಲ್ಲಿರುವ ಇತರೆ ಸಮುದಾಯಗಳ ಮತಗಳು ಯಾರ ಕಡೆಗೆ ಹೆಚ್ಚು ಹರಿಯುತ್ತದೋ ಎಂಬುದು ಫಲಿತಾಂಶವನ್ನು ನಿರ್ಧರಿಸಬಹುದು. ಹಾಗಾಗಿ ಇದರತ್ತಲೇ ಎರಡೂ ಪಕ್ಷದ ಅಭ್ಯರ್ಥಿಗಳು ಲೆಕ್ಕಾಚಾರ ಹರಿಸಿದ್ದಾರೆ. ಜತೆಗೆ ರಾಜ್ಯ, ರಾಷ್ಟ್ರಮಟ್ಟದ ನಾಯಕರ ಆಗಮನದಿಂದ ಪಕ್ಷಗಳಿಗೆ ಪ್ಲಸ್ ಆಗಲಿದ್ದು, ಬಿಜೆಪಿಯು ಯುಪಿ ಸಿಎಂ ಯೋಗಿ ಬರುವುದನ್ನು ಖಚಿತಪಡಿಸಿದೆ. ಹಿಂದಿನ ಬಾರಿ ತಮ್ಮ ವಿರುದ್ಧ ಕೆಲವರು ಕೈಗೊಂಡ ಅಪಪ್ರಚಾರ ಸೋಲಿಗೆ ಕಾರಣವಾಯಿತು ಎಂದು ರಮಾನಾಥ ರೈಗಳು ಹೇಳುತ್ತಿದ್ದಾರೆ. ಇದೂ ಅನುಕಂಪದ ಮತಗಳನ್ನಾಗಿ ಪರಿವರ್ತಿಸುತ್ತದೋ ಕಾದು ನೋಡಬೇಕು. ಇದರೊಂದಿಗೆ ಕೊನೆಯ ಅವಕಾಶ ಕೊಡಿ ಎಂಬುದೂ ಕೈ ಹಿಡಿದರೆ ರಮಾನಾಥ ರೈ ಆವರಿಗೆ ಅನುಕೂಲಕರ ವಾತಾವರಣ ನಿರ್ಮಿಸಬಹುದು.
ಕಣದಲ್ಲಿರುವ ಅಭ್ಯರ್ಥಿಗಳು 5
- ರಾಜೇಶ್ ನಾಕ್çಉಳಿಪಾಡಿಗುತ್ತು (ಬಿಜೆಪಿ)
- ಬಿ.ರಮಾನಾಥ ರೈ (ಕಾಂಗ್ರೆಸ್)
- ಪ್ರಕಾಶ್ ರಫಾಯಲ್ ಗೋಮ್ಸ್ (ಜೆಡಿಎಸ್)
- ಪುರುಷೋತ್ತಮ (ಎಎಪಿ)
- ಎಂ.ಇಲ್ಯಾಸ್ (ಎಸ್‌ಡಿಪಿಐ)
ಲೆಕ್ಕಾಚಾರ ಏನು?
ಇಬ್ಬರೂ ಹಳೇ ಹುಲಿಗಳೇ. ಆದರೆ ಒಬ್ಬರು ನಿವೃತ್ತಿಯ ಅಂಚಿ ನಲ್ಲಿರುವವರು. ಹಾಗಾಗಿ ಗೌರವ ವಿದಾಯದ ಮಾತು ಭಾವನಾತ್ಮಕ ರೂಪ ಪಡೆದರೆ ಗೆಲುವಿನ ಅಂಶದಲ್ಲಿ ಪ್ರಮುಖವಾದುದು. ಇಲ್ಲವಾದರೆ ಅಭಿವೃದ್ಧಿಯದ್ದೇ ಮೇಲುಗೈ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.