ಕಾವಳಪಡೂರು: ಕಲ್ಲಿನಕೋರೆಗೆ ವಿರೋಧ
Team Udayavani, Jan 30, 2019, 6:20 AM IST
ಪುಂಜಾಲಕಟ್ಟೆ : ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ, ಬರ್ಕಟ್ಟದಲ್ಲಿ ಕಲ್ಲಿನ ಕೋರೆ ಆರಂ ಭಿಸಿರುವುದನ್ನು ಗ್ರಾಮಸ್ಥರು ವಿರೋಧಿ ಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.
ಕಾವಳಪಡೂರು ಗ್ರಾಮದ ಮಧ್ವ ಪ್ರದೇಶ, ಬರ್ಕಟ ಕಾರಿಂಜ ದರ್ಕಾಸುವಿನ ಪರಿಸರದಲ್ಲಿ ಸರಕಾರಿ ಜಮೀನು ಅತಿಕ್ರಮಣ ಮತ್ತು ಕಲ್ಲಿನ ಕೋರೆಗೆ ಗಣಿ ಇಲಾಖೆ ನೀಡಿದ ಪರವಾನಿಗೆ ವಿರೋಧಿಸಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದು, ಸಂಬಂಧಪಟ್ಟ ಇಲಾಖೆ ಮತ್ತು ಸಚಿವಾಲಯ ಗಳಿಗೆ ಅನೇಕ ಬಾರಿ ದೂರು ನೀಡಿದ್ದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ಕಳೆದ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕರಿಸು ವುದಾಗಿ ಎಚ್ಚರಿಸಿದ್ದರು. ಜ. 27ರಂದು ಪೊಲೀಸ್ ಬಂದೋಬಸ್ತ್ನಲ್ಲಿ ಕೋರೆ ಆರಂಭ ಗೊಂಡಿತ್ತು. ಮತ್ತೆ ಕಲ್ಲಿನ ಕೋರೆ ಆರಂಭಗೊಂಡಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.