ನಿರ್ವಹಣೆ ಇಲ್ಲದೆ ಸೊರಗಿದ ಉಬರಡ್ಕ-ಮಿತ್ತೂರಿನ ಕಿಂಡಿ ಅಣೆಕಟ್ಟು
ಆಡಳಿತದ ನಿರ್ಲಕ್ಷ್ಯ, ಜನರ ಪೇಚಾಟ ,ಶೀಘ್ರ ಕ್ರಮಕ್ಕೆ ಆಗ್ರಹ
Team Udayavani, Mar 12, 2021, 2:40 AM IST
ಸುಳ್ಯ: ಪಶ್ಚಿಮ ವಾಹಿನಿ ಯೋಜನೆಯ ಮೂಲಕ ರಾಜ್ಯಾದ್ಯಂತ ನದಿಗಳಿಗೆ ಕಿಂಡಿ ಅಣೆಕಟ್ಟು ಕಟ್ಟಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿಯೂ 1,348 ಕಿಂಡಿ ಅಣೆಕಟ್ಟೆ ನಿರ್ಮಿಸಲು 3,986 ಕೋಟಿ ರೂ. ಮೀಸಲಿರಿಸಲಾಗಿದೆ. ಆದರೆ ಅತ್ಯಾವಶ್ಯಕವಾದ ಕೆಲವು ಪ್ರಮುಖ ಪ್ರದೇಶಗಳಿಗೆ ಕಿಂಡಿ ಅಣೆಕಟ್ಟು ಭಾಗ್ಯ ದೊರೆತಿಲ್ಲ. ಕಿಂಡಿ ಅಣೆಕಟ್ಟು ಇರುವ ಕೆಲವೆಡೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದಕ್ಕೆ ಉದಾರಣೆ ಉಬರಡ್ಕ-ಮಿತ್ತೂರಿನ ಕಿಂಡಿ ಅಣೆಕಟ್ಟು.
ಸುಳ್ಯ-ಉಬರಡ್ಕ-ಮಿತ್ತೂರು- ದೊಡ್ಡತೋಟ ರಸ್ತೆ ಬದಿ 2 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ 45 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಮೊದಲು ಸೇತುವೆ ಕಟ್ಟುವ ವೇಳೆ ಸ್ವಲ್ಪ ಪ್ರಮಾಣದ ಮರಳು, ಸಿಮೆಂಟ್ ಪಯಸ್ವಿನಿ ಪಾಲಾಗಿತ್ತು. ಮತ್ತೆ ಪುನಃ ಸೇತುವೆ ನಿರ್ಮಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಮೊತ್ತ ಪಾವತಿಯಾಗಿಲ್ಲ ಎಂದು ಗುತ್ತಿಗೆ ಪಡೆದುಕೊಂಡವರು ಕಿಂಡಿ ಅಣೆಕಟ್ಟು ನಿರ್ಮಿಸಲು ಬಳಸುವ ಹಲಗೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಈಗ ಹಲಗೆಗಳ ಗುಣಮಟ್ಟ ಕಡಿಮೆಯಾಗಿದೆ. ನೀರಾವರಿ ಇಲಾಖೆಯಿಂದ ದುಡ್ಡು ಸಿಕ್ಕಿಲ್ಲ ಎಂದು ಜನರಿಗೆ ಉಪಕಾರಿಯಾಗಿರುವ ಹಲಗೆಗಳನ್ನು ಇಟ್ಟು ಗೆದ್ದಲು ಬರಿಸುವುದು ಏಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಕಸ ತೆರವುಗೊಳಿಸಿಲ್ಲ :
ಈಗಲೇ ನೀರಿನ ಅಭಾವದ ಮುನ್ಸೂಚನೆ ಗೋಚರಿಸಿದ್ದು, ಮಳೆಗಾಲದಲ್ಲಿ ಕಿಂಡಿಗಳಲ್ಲಿ ತುಂಬಿದ್ದ ಹೂಳು ಹಾಗೂ ಕಡ್ಡಿಗಳನ್ನು ಇನ್ನೂ ತೆರವುಗೊಳಿಸಿಲ್ಲ. ಆಡಳಿತ ವೈಫಲ್ಯ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸ್ವ ಹಿತಾಸಕ್ತಿಗೆ ಬಲಿಯಾಗಿ ಸಾರ್ವಜನಿಕರು ನೀರಿನ ಬರ ಎದುರಿಸಬೇಕಾದ ದುಸ್ಥಿತಿಯಲ್ಲಿದ್ದಾರೆ. ಈ ರೀತಿ ನಿರ್ಲಕ್ಷ್ಯ ಮುಂದುವರಿದರೆ ಬೇಸಿಗೆ ಅಂತ್ಯದಲ್ಲಿ ನೀರಿನ ಅಭಾವ ಎದುರಾಗಲಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಾರೆ.
ಕ್ರಮಕ್ಕೆ ಮುಂದಾಗಬೇಕು :
ಸ್ಥಳೀಯರು ಈ ನೀರನ್ನೇ ಬಳಸುತ್ತಿರುವುದರಿಂದ ಬೋರ್ ಅಥವಾ ಪರ್ಯಾಯ ಮಾರ್ಗಗಳನ್ನು ಕಂಡು ಕೊಂಡಿಲ್ಲ. ಈಗ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಯನ್ನು ಸರಿಯಾದ ರೀತಿ ನಿರ್ವಹಿಸಿ ಜನರ ಬಳಕೆಗೆ ಲಭ್ಯವಾಗಲು ನೂತನ ಆಡಳಿತ ಕಾರಣ ನೀಡದೇ ಕ್ರಮಕ್ಕೆ ಮುಂದಾಗಬೇಕು ಎಂದು ಉಬರಡ್ಕ-ಮಿತ್ತೂರಿನ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆಯು ಗುತ್ತಿಗೆದಾರರ ಬಿಲ್ ಪರಿಶೀಲಿಸಬೇಕು ಎನ್ನುವುದು ಸಾರ್ವಜನಿಕರ ಸಲಹೆ.
ಕಿಂಡಿ ಅಣೆಕಟ್ಟು ನಿರ್ಮಿಸಲು ಮಾತ್ರವೇ ಟೆಂಡರ್ ನೀಡಿದ್ದರು. ಆದರೆ ಅದಕ್ಕೆ ನೀಡಬೇಕಾದ ಮೊತ್ತವನ್ನೇ ಇಲಾಖೆ ಮಂಜೂರು ಮಾಡಿಲ್ಲ. ಇದರಿಂದ ನಮಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ಮೊತ್ತ ಪಾವತಿಯಾಗುವವರೆಗೆ ಹಲಗೆ ನಮ್ಮಲ್ಲಿ ಇಟ್ಟುಕೊಂಡಿದ್ದೇವೆ. -ಆನಂದ,ಗುತ್ತಿಗೆದಾರ
ಈ ಬಾರಿಯ ಗ್ರಾ.ಪಂ. ಆಡಳಿತ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮೊದಲು ಅಲ್ಲಿನ ಹೂಳನ್ನು ತೆಗೆಸಲಾಗುವುದು. ಹಲಗೆಯ ವ್ಯವಸ್ಥೆ ಆಗಬೇಕು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. -ವಿದ್ಯಾಧರ, ಪಿಡಿಒ, ಉಬರಡ್ಕ-ಮಿತ್ತೂರು
– ಸುದೀಪ್‌ರಾಜ್ ಕೋಟೆಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.