‘ಜ್ಞಾನವನ್ನು ವಿಜ್ಞಾನದ ಸಾಗರಕ್ಕೆ ಸೇರಿಸಿಕೊಳ್ಳಬೇಕು’
Team Udayavani, Jan 19, 2018, 4:33 PM IST
ನೆಹರೂನಗರ: ಪ್ರಾಥಮಿಕವಾಗಿರುವ ನಮ್ಮ ಜ್ಞಾನವನ್ನು ವಿಜ್ಞಾನವೆಂಬ ಮಹಾ ಸಾಗರಕ್ಕೆ ವಿಸ್ತರಿಸಬೇಕು. ಇದಕ್ಕೆ ಆಸಕ್ತಿ ಹಾಗೂ ಸತತ ಪರಿಶ್ರಮದ ಅಗತ್ಯವಿದೆ. ದೇಶದ ಅಭಿವೃದ್ಧಿಗೆ ವಿಜ್ಞಾನದ ಬೆಳವಣಿಗೆ ಅತಿ ಆವಶ್ಯಕ ಎಂದು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು.
ಕಾಲೇಜಿನ ವತಿಯಿಂದ ಪುತ್ತೂರು ಹಾಗೂ ನೆರೆಯ ತಾ| ಗಳನ್ನು ಕೇಂದ್ರವಾಗಿಸಿಕೊಂಡು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮೂರು ದಿನಗಳ ಇನ್ ಡೆಪ್ತ್ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಶ್ರೀಕೃಷ್ಣ ಗಣರಾಜ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ| ಶಿವಪ್ರಸಾದ್ ವಂದಿಸಿದರು. ನಿಶಾ ಭಾನು ಕಾರ್ಯಕ್ರಮ ನಿರ್ವಹಿಸಿದರು.
ಅಜ್ಞಾನದಿಂದ ವಿಜ್ಞಾನದೆಡೆಗೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಅಜ್ಞಾನದಿಂದ ವಿಜ್ಞಾನದೆಡೆಗೆ, ವಿಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮ ಅರಿವು ಹರಿಯಲಿ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶೇಷ ವ್ಯಕ್ತಿತ್ವವಿರುತ್ತದೆ. ಅದು ಗುರಿಯನ್ನು ಆಯ್ದುಕೊಳ್ಳುವಲ್ಲಿ ಸಹಕರಿಸಿದಾಗ ಆಯ್ದ ಗುರಿ ಗೊಂದಲಗಳನ್ನು ನಿವಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.