ಕೊಲ್ಲಮೊಗ್ರು: ಸಮಸ್ಯೆಗಿಲ್ಲ ಸ್ಪಂದನೆ
Team Udayavani, Sep 25, 2021, 3:00 AM IST
ಸುಬ್ರಹ್ಮಣ್ಯ: ಗ್ರಾಮಸ್ಥರ ಸರಕಾರಿ, ವೈಯಕ್ತಿಕ ಕಾರ್ಯ ಚಟು ವಟಿಕೆಗಳ ಕೇಂದ್ರಬಿಂದುವಾಗಿರುವ ಗ್ರಾ.ಪಂ.ನಲ್ಲಿ ಇಂಟರ್‌ನೆಟ್ ಸೇವೆ ವ್ಯತ್ಯಯದಿಂದಾಗಿ ಒಂದು ತಿಂಗಳಿನಿಂದ ಕಚೇರಿ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದು, ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಬಿಎಸ್‌ಎನ್‌ಎಲ್‌ನ ಇಂಟರ್‌ನೆಟ್ ಕೇಬಲ್ ಗುತ್ತಿಗಾರು ಬಳಿ ಕಡಿತ ಗೊಂಡಿದ್ದು, ಪರಿಣಾಮ ಸುಳ್ಯ ತಾಲೂಕಿನ ಕೊನೆ ಗ್ರಾ.ಪಂ. ಕೊಲ್ಲಮೊಗ್ರುಗೆ ಒಂದು ತಿಂಗಳಿನಿಂದ ಅಂತರ್ಜಾಲ ಸೇವೆ ಇಲ್ಲದೆ, ಕೆಲಸ ಕಾರ್ಯಗಳು ಬಹುತೇಕ ಅರ್ಧದಲ್ಲೇ ನಿಂತಿವೆ. ದಿನನಿತ್ಯದ ಕೆಲಸ ಕಾರ್ಯಗಳ ವರದಿ ಸಲ್ಲಿಸಲೂ ಇಲ್ಲಿನ ಅಧಿಕಾರಿಗಳು, ಸಿಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸ್ಪಂದನೆಯಿಲ್ಲ:
ಒಂದು ತಿಂಗಳಿನಿಂದ ಇಂಟರ್‌ನೆಟ್ ಸಂಪರ್ಕದಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಗ್ರಾ.ಪಂ. ಜನಪ್ರತಿನಿಧಿಗಳು ಮೇಲಧಿ ಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಬಿಎಸ್‌ಎನ್‌ಎಲ್ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬದಲಿ ವ್ಯವಸ್ಥೆ ಕಲ್ಪಿಸಲೂ ಮುಂದಾಗಿಲ್ಲ ಎನ್ನಲಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲಸ ಕಾರ್ಯಕ್ಕೆ ಅಡ್ಡಿ:
ಗ್ರಾಮಸ್ಥರಿಗೆ ಇಲಾಖೆ, ಅಧಿ ಕಾರಿಗಳ ಆದೇಶ, ಸುತ್ತೋಲೆ, ವರದಿ ಗಳಿಗೆ ಪ್ರತಿಕ್ರಿಯಿಸಲು ಸದ್ಯ ಇಲ್ಲಿ ಸಾಧ್ಯವಾಗುತ್ತಿಲ್ಲ. ಇಂಟರ್‌ನೆಟ್ ಇಲ್ಲದೆ ಸಿಬಂದಿ ಕೆಲಸ ಕಾರ್ಯಗಳಿಗೆ ಪರಾದಾಡುತ್ತಿದ್ದಾರೆ. ಸುಬ್ರಹ್ಮಣ್ಯ ಹಾಗೂ ಹರಿಹರ ಪಲ್ಲತ್ತಡ್ಕ ಗ್ರಾ.ಪಂ.ಗಳಲ್ಲಿ ಸಮಸ್ಯೆಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕೊಲ್ಲಮೊಗ್ರುವಿಗೆ ಯಾವುದೇ ಇತರ ಸಮರ್ಪಕ ವ್ಯವಸ್ಥೆ ಇಲ್ಲದೇ ಸಮಸ್ಯೆ ಜೀವಂತವಾಗಿ ಉಳಿದಿದೆ.
ಗ್ರಾಮಸ್ಥರ ಆಕ್ರೋಶ:
ಸರಕಾರಿ ಕೆಲಸ ಕಾರ್ಯನಡೆಸುವ ಸರಕಾರಿ ಕಚೇರಿಗೆ ಉಂಟಾಗಿರುವ ಸಮಸ್ಯೆಗೆ ಸ್ಪಂದಿಸದೆ ಇರುವ ಸಂಬಂಧಿಸಿದವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಅಭಿವೃದ್ಧಿಯ ಬಗ್ಗೆ ಕೆಲಸ ನಿರ್ವಹಿಸುವ ಕೇಂದ್ರದ ಸಮಸ್ಯೆಗೆ ಸ್ಪಂದಿಸದೇ ಇರುವುದು ದುರಂತ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೊಲ್ಲಮೊಗ್ರುವಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದವರಲ್ಲಿ ಮಾಹಿತಿ ಪಡೆಯುತ್ತೇನೆ. –ಡಾ| ಕುಮಾರ್,ಸಿಇಒ ಜಿ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.