“ಸ್ವಾಭಿಮಾನದ ಕಿಚ್ಚು ಹಚ್ಚಿದ ವೀರರು’
ಅಮರ್ ಬೊಳ್ಳಿಲು ಕೋಟಿ ಚೆನ್ನಯ ವಿಚಾರ ಮಂಡನೆ
Team Udayavani, Sep 27, 2021, 5:37 AM IST
ಬೆಳ್ತಂಗಡಿ: ಸಮಾಜದಲ್ಲಿ ಧೈರ್ಯ, ಸ್ವಾಭಿಮಾನವನ್ನು ತೋರಿಸಿ ವೀರ ಶೂರ ಧೀರ ಘನತೆಯನ್ನು ಉಳಿಸಿಕೊಂಡವರು ಕೋಟಿ ಚೆನ್ನಯರು. ಅವರನ್ನು ತಿಳಿದು ಅರ್ಥೈಸಿಕೊಳ್ಳಬೇಕಾದ ಅಗತ್ಯ ಇಂದಿನ ಸಮುದಾಯಕ್ಕಿದೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬೆಳ್ತಂಗಡಿ ಮತ್ತು ಯುವವಾಹಿನಿ, ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ, ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಬೆಳ್ತಂಗಡಿ ತಾಲೂಕು ಸಹಕಾರದೊಂದಿಗೆ ರವಿವಾರ ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲ್ಯಾನ್ ಸಭಾಂಗಣದಲ್ಲಿ ನಡೆದ ಅಮರ್ ಬೊಳ್ಳಿಲು ಕೋಟಿ ಚೆನ್ನಯ ವಿಚಾರ ಮಂಡನೆ ಮತ್ತು ಸಂವಾದ ಉದ್ಘಾಟಿಸಿ ಮಾತನಾಡಿದರು.
ವಿಚಾರ ಮಂಡನೆಯ ಸಮನ್ವ ಯಕಾರ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕಾರಾಮ ಪೂಜಾರಿ ಮಾತನಾಡಿ, ಕೋಟಿ ಚೆನ್ನಯರದ್ದು ಅನ್ಯಾಯದ ವಿರುದ್ಧ ಹೋರಾಟವಾಗಿದೆ. ನಮ್ಮೊಳಗಿನ ಜಿಜ್ಞಾಸೆ ಯಿಂದ ಕೋಟಿ ಚೆನ್ನಯರಿಗೆ ಅವಮಾನ ವಾಗಬಾರದು. ನಾರಾಯಣ ಗುರುಗಳು ಹೇಳಿದ ಶಿಕ್ಷಣದ ಮೂಲಕ ಚಿಂತನ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿದ್ದರು.ಪತ್ರಕರ್ತ ಚೆಲುವರಾಜ್ ಪೆರಂಪಳ್ಳಿ ದೇಯಿ ಬೈದತಿಯ ಹುಟ್ಟಿನಿಂದ ಸಾವಿನವರೆಗಿನ ವಿಚಾರವನ್ನು, ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬೈದ್ಯಶ್ರೀ ಆದಿ ಉಡುಪಿ ಇದರ ಅಧ್ಯಕ್ಷ ದಾಮೋದರ ಕಲ್ಮಾಡಿ ಕೋಟಿ ಚೆನ್ನಯರ ಹುಟ್ಟಿನಿಂದ ಸಾವು, ಹಿರಿಯ ಸಾಹಿತಿ ದಾಮೋದರ ವಿ.ಸಾಲ್ಯಾನ್ ಗರಡಿಗಳ ಆಚರಣೆ ಮತ್ತು ಕಟ್ಟು ಕಟ್ಟಲೆ ಬಗ್ಗೆ ವಿಚಾರ ಮಂಡಿಸಿದರು.
ಇದನ್ನೂ ಓದಿ:ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು
ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಎಚ್.ಡಿ., ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಪ್ರಧಾನ ಸಂಚಾಲಕಿ ವನಿತಾ ಜನಾರ್ದನ್ ಮತ್ತಿತರರಿದ್ದರು.
ಯುವವಾಹಿನಿ ಬೆಳ್ತಂಗಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಎಂ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ಸ್ವಾಗತಿಸಿದರು. ಸ್ಮಿತೇಶ್ ಬಾರ್ಯ ನಿರೂಪಿಸಿದರು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ನಾರಾಯಣ ಸುವರ್ಣ ವಂದಿಸಿದರು.
ಗೊಂದಲ ಇರಬಾರದು
ಕೋಟಿ ಚೆನ್ನಯರ ಸಾಂಸ್ಕೃತಿಕ ಕುರುಹು ಎಲ್ಲೇ ಇರಲಿ ಅದನ್ನು ಉಳಿಸುವ ಕಡೆಗೆ ನಾವು ಮನಸ್ಸು ಮಾಡಬೇಕು. ಆ ಸ್ಥಳ ಈ ಸ್ಥಳ ಎಂಬ ಗೊಂದಲ ನಮ್ಮೊಳಗೆ ಬರಬಾರದು. ಕೋಟಿ ಚೆನ್ನಯರ ಮಾತಿನಂತೆ ನಮ್ಮೊಳಗಿನ ಜ್ಞಾನವೇ ಸ್ಥಾನಕ್ಕೆ ಮೂಲವಾಗಬೇಕು.
-ಡಾ| ತುಕಾರಾಮ ಪೂಜಾರಿ,
ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.