ನೂತನ ಸೇತುವೆ ನಿರ್ಮಾಣಕ್ಕಾಗಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ: ರೋಹಿದಾಸ
Team Udayavani, Jul 7, 2018, 1:49 PM IST
ಈಶ್ವರಮಂಗಲ: ಪಂಚೋಡಿ- ಗಾಳಿಮುಖ ಜಿಲ್ಲಾ ಪಂಚಾಯತ್ ರಸ್ತೆಯ ಕೋಟಿಗದ್ದೆ ಎಂಬಲ್ಲಿರುವ ಕುಸಿಯುವ ಭೀತಿಯಲ್ಲಿರುವ ಸೇತುವೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ರವಿ ಅವರ ಸೂಚನೆಯಂತೆ ಪುತ್ತೂರು ವಿಭಾಗದ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರೋಹಿದಾಸ್ ಶುಕ್ರವಾರ ಪರಿಶೀಲಿಸಿ, ನೀರಿನ ಹರಿವು ಇರುವುದರಿಂದ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗುವುದು. ನೂತನ ಸೇತುವೆ ನಿರ್ಮಾಣ ಮಾಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಕೋಟಿಗದ್ದೆ ಹಾಗೂ ಕರ್ನೂರು ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಜು. 4ರಂದು ಸುದಿನ ವಿಶೇಷ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು. ಶುಕ್ರವಾರ ಜಿ.ಪಂ. ಸಿಇಒ ಡಾ| ರವಿ ಅವರೇ ಸೇತುವೆ ಪರಿಶೀಲನೆಗೆ ಬರುವವರಿದ್ದರು. ಆದರೆ, ಸುಳ್ಯದ ಸಭೆಯಲ್ಲಿ ಭಾಗವಹಿಸುವ ಅನಿವಾರ್ಯತೆ ಇರುವ ಕಾರಣ ಪುತ್ತೂರು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರೋಹಿದಾಸ್ ಅವರನ್ನು ಕಳುಹಿಸಿದ್ದರು. ರೋಹಿದಾಸ್ ಅವರು ಸೇತುವೆಯನ್ನು ಪರಿಶೀಲಿಸಿದ್ದು, ಜಿ.ಪಂ. ಸಿಇಒಗೆ ವರದಿ ನೀಡಲಿದ್ದಾರೆ. ಜಿ.ಪಂ.ನ ಅನುದಾನ ಮತ್ತು ಜಿಲ್ಲಾಡಳಿತದ ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸಿಇಒ ಭರವಸೆ ನೀಡಿದ್ದಾರೆ ಎಂದು ಜಿ.ಪಂ. ಸ್ಥಾಯೀ ಸಮಿತಿಯ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾಹಿತಿ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಎಂಜಿನಿಯರ್ ಗೋವರ್ಧನ್, ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಸದಸ್ಯ ಅಬ್ದುಲ್ಲ ಕೆ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.