ಕೋವಿಡ್ ಭವಿಷ್ಯ ನಿಜವಾಯಿತು ; ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು
Team Udayavani, Jun 5, 2020, 11:12 AM IST
108 ಮಹಾಸಾಗರ ಮುನಿ ಮಹಾರಾಜರು ಮಂಗಲ ಪ್ರವಚನ ನೀಡಿದರು.
ಬೆಳ್ತಂಗಡಿ: ಕೋವಿಡ್ ಭೀತಿಯ ಬಗ್ಗೆ ಏಳು ವರ್ಷಗಳ ಹಿಂದೆಯೇ ನಾನು ಭವಿಷ್ಯ ಹೇಳಿದ್ದು, ಅದು ನಿಜವಾಗಿದೆ. ಕೋವಿಡ್ ವೈರಸ್ ಶೀಘ್ರದಲ್ಲಿ ಪೂರ್ಣ ನಿರ್ಮೂಲನೆ ಆಗಲಿದೆ ಎಂದು ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು ಹೇಳಿದರು. ಧರ್ಮಸ್ಥಳದ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಗುರುವಾರ ಮಂಗಲ ಪ್ರವಚನ ನೀಡಿದ ಅವರು, ದೇವರ ಮೇಲೆ ಭಕ್ತಿ-ಶ್ರದ್ಧೆ, ಧರ್ಮಾನುಷ್ಠಾನ, ಶಿಸ್ತು ಬದ್ಧ ಜೀವನ ಶೈಲಿ ಮತ್ತು ಹಿತ-ಮಿತ ಆಹಾರ ಸೇವನೆಯಿಂದ ಕೊರೊನಾ ನಿರ್ಮೂಲನೆ ಮಾಡಿ ಆರೋಗ್ಯ ಭಾಗ್ಯ ಹೊಂದಬಹುದು ಎಂದರು.
ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖೀ ಸಮಾಜಸೇವೆ ಹಾಗೂ ಧರ್ಮ ಪ್ರಭಾವನ ಕಾರ್ಯಗಳು ವಿಶ್ವಕ್ಕೆ ಮಾದರಿಯಾಗಿವೆ. ಆತ್ಮಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ ಎಂದರು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದರು.
ಶಿರಸಿಯತ್ತ ವಿಹಾರ
ಮಹಾರಾಷ್ಟ್ರದಲ್ಲಿ 1943ರಲ್ಲಿ ಜನಿಸಿದ ಮುನಿ ಮಹಾರಾಜರು 19ನೇ ವರ್ಷದಲ್ಲಿ ಕ್ಷುಲ್ಲಕ ದೀಕ್ಷೆ ಪಡೆದರು. ಅವರು ಜೂ. 5ರಂದು ಧರ್ಮಸ್ಥಳದಿಂದ ಉಜಿರೆ, ವೇಣೂರು, ಮೂಡುಬಿದಿರೆಯಾಗಿ ಶಿರಸಿಯತ್ತ ವಿಹಾರಗೈಯಲಿದ್ದಾರೆ.
ಭಾರತಕ್ಕೆ ಉಜ್ವಲ ಭವಿಷ್ಯ
2022 ಮತ್ತು 2028ನೇ ವರ್ಷ ಅತ್ಯಂತ ಕಠಿನವಾಗಿದ್ದು, ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 2030ರ ಬಳಿಕ ಭಾರತಕ್ಕೆ ಉಜ್ವಲ ಭವಿಷ್ಯವಿದೆ.
– ಶ್ರೀ 108 ಮಹಾಸಾಗರ ಮುನಿ ಮಹಾರಾಜರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.