ನರಿಮೊಗರು : ಸಾಂದೀಪನಿ ವಿಹಾರದಲ್ಲಿ ಶ್ರೀಕೃಷ್ಣ ಲೀಲೋತ್ಸವ
Team Udayavani, Aug 25, 2019, 8:38 AM IST
ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣ ಲೀಲೋತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಕೃಷ್ಣ ರಾಧಾ ವೇಷಧಾರಿ ಪುಟಾಣಿಗಳ ಕಲರವ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಏರ್ಪಡಿಸಲಾದ ವಿವಿಧ ಕ್ರೀಡಾಕೂಟಗಳು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಾರ್ಯಕ್ರಮ ಮೆರುಗು ಪಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳಿಂದ ಶ್ರೀಕೃಷ್ಣನ ಮೂರ್ತಿಯೊಂದಿಗೆ ಮೆರವಣಿಗೆ, ಮೆರವಣಿಯಲ್ಲಿ ಹುಲಿ ವೇಷ, ಘೋಷ್ ತಂಡ, ಕೀಲು ಕುದುರೆ, ಬಣ್ಣದ ಕೊಡೆಗಳು, ವಿದ್ಯಾರ್ಥಿಗಳ ಭಜನೆ ಮೆರವಣಿಗೆಗೆ ಮೆರುಗು ನೀಡಿತು, ಅತಿಥಿಗಳು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು, ಶಿಕ್ಷಕ ವೃಂದ, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಮೆರವಣಿಗೆಯ ಬಳಿಕ ವಿದ್ಯಾರ್ಥಿಗಳಿಂದ ಹುಲಿಕುಣಿತ,ಬಯಲು ರಂಗಮಂದಿರದಲ್ಲಿ ಶ್ರೀಕೃಷ್ಣ ಸ್ತುತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದೆಡೆಗಳ ಅಂಗನವಾಡಿಗಳ ಪುಆಟಣಿ ಕೃಷ್ಣ ರಾಧಾ ವೇಷಧಾರಿಗಳು,ಸಂಸ್ಥೆಯ ಪುಟಾಣಿಗಳು ಪಾಲ್ಗೊಂಡಿದ್ದರು. ಎಲ್ಲಾ ವೇಷಧಾರಿಗಳಿಗೂ ಬಹುಮಾನ ಸ್ಮರಣಿಕೆ ನೀಡಿ ಗೌರವಿಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆ
ಕಾರ್ಯಕ್ರಮದ ಅಂಗವಾಗಿ ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಉದ್ಘಾಟಿಸಿ ಮಾತನಾಡಿ, ಧರ್ಮ ಸಂಸ್ಥಾಪಕ ಶ್ರೀಕೃಷ್ಣನ ಜೀವನ ಎಂದಿಗೂ ಪ್ರಸ್ತುತ. ಪ್ರತೀ ವರ್ಷ ವಿಶಿಷ್ಟವಾಗಿ ಕೃಷ್ಣ ಲೀಲೋತ್ಸವ ಆಚರಿಸುತ್ತಿರುವ ಸಾಂದೀಪನಿ ವಿದ್ಯಾಸಂಸ್ಥೆಯು ಉತ್ತಮ ಹಾಗೂ ಧರ್ಮ ಬೋಧನೆಯ ಕಾರ್ಯ ಮಾಡುತ್ತಿದೆ ಎಂದರು.
ಭಕ್ತಕೋಡಿ ಎಸ್.ಜಿ.ಎಂ.ಪ್ರೌಢಶಾಲಾ ಮುಖ್ಯಗುರು ಶ್ರೀನಿವಾಸ ಎಚ್.ಬಿ ಮಾತನಾಡಿ, ಮಕ್ಕಳಿಗೆ ವಿನಯ, ವಿವೇಕ, ಸಂಸ್ಕಾರವನ್ನು ಕಲಿಸುವ ಕೆಲಸ ಸಾಂದೀಪನಿ ವಿದ್ಯಾ ಸಂಸ್ಥೆಗಳಿಂದ ಆಗುತ್ತಿದೆ.ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಸಾಂದೀಪನಿ ದಾರಿದೀಪವಾಗಿದೆ ಎಂದರು.
ಪ್ರಗತಿಪರ ಕೃಷಿಕ ರವಿಕುಮಾರ್ ದೊಡ್ಡಬಳ್ಳಾಪುರ,ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆದ್ಕಾರು, ಶಾಲಾ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ಶುಭ ಹಾರೈಸಿದರು. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನೆ
ವಿದ್ಯಾಭಾರತಿ ನಡೆಸಿದ ಜಿಲ್ಲಾ ಮಟ್ಟದ ಖೋ ಖೋ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ವಲಯ ಮಟ್ಟದ ಕಬಡ್ಡಿ, ಹಾಗೂ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಿಗೆ ಪದಕ ನೀಡಿ ಗೌರವಿಸಲಾಯಿತು.ಈ ದಿನ ಹುಟ್ಟು ಹಬ್ಬ ಆಚರಿಸಿದ ವಿದ್ಯಾರ್ಥಿ ಅನುದೀಪ್ ರೈ ಅವರಿಗೆ ಉಡುಗೊರೆ ಶುಭಾಶಯ ಸಲ್ಲಿಸಿದರು.
ನಾಗೇಶ್ ಕೆಡೆಂಜಿ,ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ,ದೈ.ಶಿ.ಶಿ. ಪ್ರಸಾದ್ ಅತಿಥಿಗಳನ್ನು ಗೌರವಿಸಿದರು. ಮುಖ್ಯಶಿಕ್ಷಕಿ ಜಯಮಾಲಾ ವಿ.ಎನ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು..ಶಿಕ್ಷಕಿ ಸುಕನ್ಯಾ ವಂದಿಸಿದರು.ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.