Kukke Subramanya: ಚಂಪಾಷಷ್ಠಿ ಮಹೋತ್ಸವ ಬೀದಿ ಉರುಳು ಸೇವೆ ಆರಂಭ
Team Udayavani, Dec 14, 2023, 12:52 AM IST
ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟ ಸೇವೆಯಲ್ಲೊಂದಾದ ಬೀದಿ ಉರುಳು ಸೇವೆ ಮಂಗಳವಾರ ರಾತ್ರಿ ಲಕ್ಷದೀಪೋತ್ಸವ ರಥೋತ್ಸವ ಬಳಿಕ ಆರಂಭವಾಯಿತು.
ಕ್ಷೇತ್ರದಲ್ಲಿ ಚಂಪಾಷಷ್ಠಿಯ ಲಕ್ಷದೀಪೋತ್ಸವದ ರಥೋತ್ಸವ ಬಳಿಕ ಆರಂಭಗೊಳ್ಳುವ ಬೀದಿ ಉರುಳು ಸೇವೆಯು ಮಹೋರಥೋತ್ಸವದ ತನಕ ನಡೆಯುತ್ತದೆ. ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಈ ಸೇವೆ ನೆರವೇರುತ್ತದೆ.
ಭಕ್ತರು ಕುಮಾರಧಾರೆಯಲ್ಲಿ ಮಿಂದು ರಾಜ ರಸ್ತೆ, ರಥಬೀದಿಯಲ್ಲಿ ಉರುಳುತ್ತಾ ಬಂದು ದೇವಸ್ಥಾನದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸೇವೆಗೆ ಯಾವುದೇ ರಶೀದಿ ಇಲ್ಲ.
ಭಕ್ತರಿಗೆ ಬೀದಿ ಉರುಳು ಸೇವೆಗೆ ಪೂರಕವಾಗುವಂತೆ ದೇವಸ್ಥಾನದ ವತಿಯಿಂದ ಪ್ರತ್ಯೇಕ ಪಥ ಸೇರಿದಂತೆ ವಿವಿಧ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾಂಕ್ರೀಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾಗಿರುವುದರಿಂದ ಸಂಜೆ ಅಥವಾ ಮುಂಜಾನೆ ವೇಳೆ ಸೇವೆ ಆರಂಭವಿಸುವಂತೆ ಮನವಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba: ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರಷ್ಟೇ ಸಾಧನೆ ಸಾಧ್ಯ ಎಂಬುದು ಭ್ರಮೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.