ಹದಗೆಟ್ಟ ಆನೆ ಆರೋಗ್ಯ: ಇಂದು ತಾಂಬೂಲ ಪ್ರಶ್ನೆ
Team Udayavani, Aug 21, 2019, 5:55 AM IST
ಸುಬ್ರಹ್ಮಣ್ಯ: ಅನಾರೋಗ್ಯ ದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಯಶಸ್ವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ಆನೆ ಸ್ಪಂದಿಸುತ್ತಿದ್ದರೂ ನಿರೀಕ್ಷಿತ ಚೇತರಿಕೆ ಕಂಡುಬಂದಿಲ್ಲ. ಆನೆಯ ಮೂತ್ರಕೋಶದಲ್ಲಿ ಸಣ್ಣ ಮಟ್ಟಿನ ದೋಷ ಕಾಣಿಸಿಕೊಂಡಿದೆ.
ಇಂಜಾಡಿ ಸಮೀಪದ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆನೆ ಯಶಸ್ವಿಗೆ ಗುತ್ತಿಗಾರು ಪಶುವೈದ್ಯ ಕೇಂದ್ರದ ಡಾ| ವೆಂಕಟಾಚಲಪತಿ ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ಆಹಾರ ಸೇವಿಸದೇ ಇರುವುದು ಮತ್ತು ಪೂರ್ಣ ಪ್ರಮಾಣದ ಲದ್ದಿಯನ್ನು ಹಾಕದೇ ಇರುವುದು ಆನೆಯ ಆರೋಗ್ಯದ ಬಗ್ಗೆ ಆತಂಕ ಉಳಿಸಿದೆ. ದೇಹಾರೋಗ್ಯ ಸಮತೋಲನ ಕಾಯ್ದುಕೊಳ್ಳಲು ಗ್ಲೂಕೋಸ್, ಕ್ಯಾಲ್ಸಿಯಂ, ಎಳನೀರು, ಗರಿಕೆ ಹುಲ್ಲು ನಿರಂತರ ನೀಡಲಾಗುತ್ತಿದೆ. ಜೀರ್ಣ ಪ್ರಕ್ರಿಯೆ ಸುಧಾರಿಸಲು ಚಿಕಿತ್ಸೆ ನೀಡಲಾಗುತ್ತಿದೆ. ಆನೆಯ ಮೂತ್ರಕೋಶ ದಲ್ಲಿ ದೋಷವಿರುವುದು ತಪಾಸಣೆ ವೇಳೆ ವೈದ್ಯರ ಗಮನಕ್ಕೆ ಬಂದಿದ್ದು, ಅದಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆನೆಯು ನಿತ್ರಾಣ ಹಾಗೂ ಬಳಲಿಕೆಯಿಂದ ಕೂಡಿದೆ.
ಆನೆಯ ಆರೋಗ್ಯ ಸುಧಾರಣೆಗಾಗಿ ಪ್ರಶ್ನೆ ಇರಿಸುವಂತೆ ಭಕ್ತರು ಮನವಿ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿರುವ ದೇಗುಲದ ಆಡಳಿತ ಮಂಡಳಿ ಬುಧವಾರ ತಾಂಬೂಲ ಪ್ರಶ್ನೆ ಚಿಂತನೆ ನಡೆಸಲು ತೀರ್ಮಾನಿಸಿದೆ.
ತೀವ್ರ ನಿಗಾ
ಆನೆಯ ಆರೋಗ್ಯದ ಕುರಿತಂತೆ ದೇವಸ್ಥಾನದ ಆಡಳಿತ ಮಂಡಳಿ ತೀವ್ರ ನಿಗಾ ವಹಿಸಿದ್ದು, ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನಿತ್ಯವೂ 2 ಬಾರಿ ಭೇಟಿ ನೀಡಿ ಆನೆಯ ಆರೋಗ್ಯ ವಿಚಾರಿಸಿ, ಅಗತ್ಯಗಳ ಪೂರೈಕೆಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಮಂಗಳವಾರ ಸಂಜೆ ಮೈಸೂರಿನ ಪಶು ವೈದ್ಯ ಡಾ| ಶ್ರೀನಿವಾಸ್ ಆಗಮಿಸಿ ಚಿಕಿತ್ಸೆ ನೀಡಿ ದರು. ಶೆಡ್‌ನಿಂದ ಹೊರಗಡೆ ಓಡಾಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.