ಕುಂಬ್ಲಾಡಿ: ಭಕ್ತರೇ ಬೆಳೆದ ಪೈರು ದೇವರಿಗೆ ಅರ್ಪಣೆ
ಗದ್ದೆಯಲ್ಲಿ ಶ್ರಮದಾನ ಮಾಡಿ ಬೆಳೆಸಿದ ಪೈರಿಗೆ ಗಣೇಶ ಚತುರ್ಥಿಯಂದು ತೆನೆಪೂಜೆ
Team Udayavani, Sep 5, 2019, 5:37 AM IST
ಕಾಣಿಯೂರು ಸೆ. 4: ಕುಂಬ್ಲಾಡಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಹೋಮ, ಅನಂತರ ದೇವಾಲಯದ ಗದ್ದೆಗೆ ಹೋಗಿ ಅರ್ಚಕರು ತೆನೆ ಪೂಜೆ ಮಾಡಿ ಅರ್ಚಕರು ತೆನೆಯ ಬುಟ್ಟಿಯನ್ನು ಹೊತ್ತು ತಂದು ದೇವರ ಪೂಜೆ ಮಾಡಿ ದೇವಾಲಯಕ್ಕೆ ತೆನೆ ಕಟ್ಟಿದರು. ಬಳಿಕ ಊರಿನವರಿಗೆ ವಿತರಿಸಲಾಯಿತು.
ಮಧ್ಯಾಹ್ನ ಗಣಪತಿಗೆ ಚೌತಿ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಇಲ್ಲಿ ತೆನೆ ಪೂಜೆಗಾಗಿ ಬಳಸುವ ಗದ್ದೆ ನಾಟಿಯನ್ನು ಭಕ್ತರೇ ಸೇರಿ ಮಾಡಿದ್ದು ವಿಶೇಷವಾಗಿದೆ. ಕಳೆದ 19 ವರ್ಷಗಳಿಂದ ಭಕ್ತರ ಶ್ರಮದಾನದ ಮೂಲಕ ವ್ಯವಸ್ಥಿತವಾಗಿ ಗದ್ದೆ ಬೆಸಾಯ ಮಾಡಿಕೊಂಡು ಬಂದು ಇತರರಿಗೆ ಮಾದರಿಯಾಗಿದ್ದಾರೆ. 2000ನೇ ಇಸವಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಿ| ಸಿ.ಪಿ. ಜಯರಾಮ ಗೌಡರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆದ ಬಳಿಕ ದೇವಸ್ಥಾನದ ಹತ್ತಿರದ ಗದ್ದೆಯೊಂದನ್ನು ದೇವಸ್ಥಾನಕ್ಕಾಗಿ ಖರೀದಿ ಮಾಡಿ ಮುಖ್ಯವಾಗಿ ತೆನೆ ಹಬ್ಬ (ಕೊರಲ್ ಪರ್ಬ) ಕೊರಲ್ ಕಟ್ಟುವ ಉದ್ದೇಶಕ್ಕಾಗಿಯೇ ಬೇಸಾಯ ಮಾಡುತ್ತಾ ಬರಲಾಗಿದೆ.
ದೇವಸ್ಥಾನಕ್ಕೆ ಸಮರ್ಪಣೆ
ಇಂದಿನ ದಿನಗಳಲ್ಲಿ ಗದ್ದೆ ಬೇಸಾಯಗಳು ಇಲ್ಲದೆ, ಕೊರಲ್ ಕಟ್ಟುವ, ಮನೆ ತುಂಬಿಸಿಕೊಳ್ಳು ವ ಹಾಗೂ ಹೊಸಕ್ಕಿ ಊಟ (ಪುದ್ವಾರ್) ಮರೆಯಾಗುತ್ತಿವೆ. ಕೊರಲ್ ಕಟ್ಟುವ ಕಾರ್ಯವೂ ನಡೆಯುತ್ತಿಲ್ಲ. ಆದರೆ ಕುಂಬ್ಲಾಡಿ ದೇವಸ್ಥಾನದ ಭಕ್ತರಿಗೆ ಈ ಸಮಸ್ಯೆ ಇಲ್ಲ. ಕುಂಬ್ಲಾಡಿ, ಖಂಡಿಗ, ಮಾಚಿಲ, ಅಂಬುಲ, ಅರ್ವ, ಕಂಪ ಕರಂದ್ಲಾಜೆ, ಅಗತ್ತಬೈಲು, ಗೌಡ ಮನೆ, ನಾಣಿಲ, ಉಳವ, ಕೊಪ್ಪ ಮುಂತಾದ ಬೈಲಿನ ಭಕ್ತರಿಗೆ ಇಲ್ಲಿ ಭರಪೂರ ಪೈರು ದೊರೆಯುತ್ತದೆ. ಇಲ್ಲಿಂದ ವಿವಿಧೆಡೆ ಪೈರನ್ನು ಒಯ್ಯುತ್ತಾರೆ. ಗದ್ದೆಯಲ್ಲಿ ಆದ ಭತ್ತ ಹಾಗೂ ಬೈಹುಲ್ಲನ್ನು ಮಾರಾಟ ಮಾಡಿ ದೇವಸ್ಥಾನಕ್ಕೆ ಸಮರ್ಪಿಸಲಾಗುತ್ತದೆ. ಈ ಗದ್ದೆಯನ್ನು ದೇವಸ್ಥಾನದ ಜಾತ್ರೆ ಸಂದರ್ಭ ಅನ್ನಛತ್ರವಾಗಿ ಬಳಸಿಕೊಳ್ಳಲಾಗುತ್ತದೆ.
ಪಂಗಡಗಳ ರಚನೆ
ದೇವಸ್ಥಾನದಲ್ಲಿ ಒಂದು ವರ್ಷದ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ನಾಲ್ಕು ಬೈಲಿನ ಮೂರು ಪಂಗಡಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ಪಂಗಡದಲ್ಲೂ 100 ಮನೆಗಳಿವೆ. ದೇವಸ್ಥಾನದ ಜಾತ್ರೆಯಿಂದ ಹಿಡಿದು ಗದ್ದೆ ಬೇಸಾಯ, ಇತರ ಕೆಲಗಳನ್ನು ಒಂದು ವರ್ಷದ ಮಟ್ಟಿಗೆ ಒಂದು ಪಂಗಡಕ್ಕೆ ವಹಿಸಿಕೊಡಲಾಗುತ್ತದೆ. ಇಲ್ಲಿ ಜನವರಿಯಲ್ಲಿ ಜಾತ್ರೆ ಮುಗಿಯುತ್ತದೆ. ಫೆಬ್ರವರಿಯ ಸಂಕ್ರಮಣದಂದು ಎಲ್ಲ ಲೆಕ್ಕಾಚಾರಗಳು ಮುಗಿದ ಬಳಿಕ ಮುಂದಿನ ಜನವರಿಯ ತನಕ ಇನ್ನೊಂದು ಪಂಗಡಕ್ಕೆ ಜವಾಬ್ದಾರಿಯನ್ನು ಹಂಚಲಾಗುತ್ತದೆ. ಆ ತಂಡ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾರ್ಗದರ್ಶನದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತದೆ. ಈ ವೇಳೆ ದೇವಸ್ಥಾನದಿಂದ ಊಟ, ತಿಂಡಿಯ ಖರ್ಚು ಭರಿಸಲಾಗುತ್ತದೆ. ಆದರೆ ಅಡುಗೆ ಇನ್ನಿತರ ತಯಾರಿ ಭಕ್ತರದ್ದೇ ಆಗಿರುತ್ತದೆ. ಈ ಬಾರಿಯ ಜವಾಬ್ದಾರಿ ಕಂಪಕರಂದ್ಲಾಜೆ, ನಾಣಿಲ 1, 2, ಉಳವ ಬೈಲಿನ ಮನೆಗಳ ಮೂರನೇ ಪಂಗಡಕ್ಕೆ ವಹಿಸಲಾಗಿತ್ತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಉಳವ ಸಹಿತ ಸಮಿತಿ ಪದಾಧಿಕಾರಿಗಳು, ಪಂಗಡದ ಮುಖ್ಯಸ್ಥರಾದ ವಿಶ್ವನಾಥ ಕಂಪ ಹಾಗೂ ಕೇಶವ ಗೌಡ ಖಂಡಿಗ ಅವರ ಮಾರ್ಗದರ್ಶನದಲ್ಲಿ ಬೇಸಾಯ ಕಾರ್ಯ ಯಶಸ್ವಿಯಾಗಿ ನಡೆದಿತ್ತು.
ಪ್ರತೀ ವರ್ಷ ಭತ್ತದ ಬಿತ್ತನೆ ಮಾಡಿ ನೇಜಿ ತಯಾರಿ ಮಾಡಲಾಗುತ್ತದೆ. ಜೂನ್ ತಿಂಗಳಲ್ಲೇ ನಾಟಿ ಮಾಡಲಾಗುತ್ತದೆ. ಅದು ಗಣೇಶ ಚೌತಿ ಸಂದರ್ಭ ಪೈರಾಗಿ ಕೊರಲ್ ಹಬ್ಬಕ್ಕೆ ತಯಾರಾಗಬೇಕು ಎನ್ನುವ ಉದ್ದೇಶದಿಂದ ಜೂನ್‌ನಲ್ಲಿ ನೇಜಿ ನಾಟಿ ಮಾಡಲಾಗಿದೆ. ಚೌತಿಯಂದು ಅರ್ಚಕರು ಗದ್ದೆಗೆ ಹಾಲು ಇಡುವ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ 300 ಮನೆಯ ಭಕ್ತರು ಪೈರನ್ನು ಮನೆಗೆ ಕೊಂಡೊಯ್ದು ಮನೆ ತುಂಬಿಸುವ ಕಾರ್ಯವನ್ನು ಮಾಡಿದರು.
ಕೊರಲ್ ಹಬ್ಬಕ್ಕೆ ತಯಾರಿ
ಪ್ರತೀ ವರ್ಷ ಭತ್ತದ ಬಿತ್ತನೆ ಮಾಡಿ ನೇಜಿ ತಯಾರಿ ಮಾಡಲಾಗುತ್ತದೆ. ಜೂನ್ ತಿಂಗಳಲ್ಲೇ ನಾಟಿ ಮಾಡಲಾಗುತ್ತದೆ. ಅದು ಗಣೇಶ ಚೌತಿ ಸಂದರ್ಭ ಪೈರಾಗಿ ಕೊರಲ್ ಹಬ್ಬಕ್ಕೆ ತಯಾರಾಗಬೇಕು ಎನ್ನುವ ಉದ್ದೇಶದಿಂದ ಜೂನ್‌ನಲ್ಲಿ ನೇಜಿ ನಾಟಿ ಮಾಡಲಾಗಿದೆ. ಚೌತಿಯಂದು ಅರ್ಚಕರು ಗದ್ದೆಗೆ ಹಾಲು ಇಡುವ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ 300 ಮನೆಯ ಭಕ್ತರು ಪೈರನ್ನು ಮನೆಗೆ ಕೊಂಡೊಯ್ದು ಮನೆ ತುಂಬಿಸುವ ಕಾರ್ಯವನ್ನು ಮಾಡಿದರು.
ಹಿರಿಯರ ಸಂಪ್ರದಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.