ಯಶಸ್ಸಿನ ಹಿಂದೆ ಶ್ರಮವಿದೆ: ಶಿವಧ್ವಜ್
Team Udayavani, Mar 24, 2018, 4:59 PM IST
ಸುಳ್ಯ : ಜೀವನದಲ್ಲಿ ಕಷ್ಟಪಟ್ಟು ಮುನ್ನಡೆಯುವ ಹೊತ್ತಿನಲ್ಲಿ ಚಪ್ಪಾಳೆ ತಟ್ಟುವವರು ಇರಲಾರರು. ಆದರೆ ಯಶಸ್ಸು ಸಿಕ್ಕ ಅನಂತರ ಚಪ್ಪಾಳೆ ತಟ್ಟಿಯೇ ತಟ್ಟುತ್ತಾರೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಟ ಶಿವಧ್ವಜ್ ಹೇಳಿದರು. ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಡೆಂಟಲ್ ಪ್ರೀಮಿಯರ್ ಲೀಗ್-2018 ಆವೃತ್ತಿ-8 ಕ್ರಿಕೆಟ್ ಪಂದ್ಯಾವಳಿಯನ್ನು ಶುಕ್ರವಾರ ಕೆವಿಜಿ ಪ್ಲೇ ಮೈದಾನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ಶ್ರಮ ಇರುತ್ತದೆ. ಶ್ರಮ ಕಠಿನವೆನಿಸಿದರೂ ಅನಂತರ ಅದರಿಂದ ಸುಖ ಇದೆ. ಕ್ರೀಡಾ
ಕೂಟವು ನಮ್ಮ ಬದುಕಿಗೆ ಇನ್ನಷ್ಟು ಹುರುಪು ತುಂಬಲಿ ಎಂದರು.
ಕುರುಂಜಿ ಅವರಿಂದ ಪ್ರೇರಣೆ
ನಾನು ಕೆವಿಜಿ ಸಂಸ್ಥೆಯಲ್ಲೇ ವಿದ್ಯಾರ್ಥಿ ಜೀವನ ಪೂರ್ಣಗೊಳಿಸಿದ್ದೆ. ಸಂಸ್ಥೆಯ ಸಂಸ್ಥಾಪಕ ಡಾ| ಕುರುಂಜಿ ವೆಂಕಟರಮಣ ಗೌಡ ಅವರ ಬದುಕಿನ ಗುಣಗಳು, ಸಾಧನೆ ನನ್ನ ಬದುಕಿಗೆ ಪ್ರೇರಣೆ ನೀಡಿತ್ತು. 23 ವರ್ಷದ ಅನಂತರ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕುವ ಅವಕಾಶ ನೀಡಿದ ದಂತ ಮಹಾವಿದ್ಯಾಲಯಕ್ಕೆ ಕೃತಜ್ಞತೆ ಅರ್ಪಿಸುವುದಾಗಿ ಶಿವಧ್ವಜ್ ನುಡಿದರು.
ಹಿರಿಯ ಸಾಮಾಜಿಕ ಧುರೀಣ ಪಡ್ಡಂಬೈಲು ವೆಂಕಟರಮಣ ಗೌಡ ಮಾತನಾಡಿ, ಕೆವಿಜಿ ದಂತ ಮಹಾ ವಿದ್ಯಾಲಯಕ್ಕೆ
ಕರ್ನಾಟಕ ರಾಜ್ಯದಲ್ಲಿಯೇ ವಿಶೇಷ ಸ್ಥಾನವಿದೆ. ಅಂತಹ ವಿದ್ಯಾಸಂಸ್ಥೆಯಲ್ಲಿ ಕಲಿಕೆಗೆ ಅವಕಾಶ ಸಿಕ್ಕ ವಿದ್ಯಾರ್ಥಿಗಳು
ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ ಜೀವನದಲ್ಲಿ ಸಾಧನೆ ತೋರಬೇಕು ಎಂದು ಆಶಿಸಿದರು.
ಸಭಾಧ್ಯಕ್ಷತೆ ವಹಿಸಿದ ಎಎಲ್ ಒಇ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್ ಕೆ.ವಿ. ಕ್ರಿಕೆಟ್ ಅಂಕಣ ಉದ್ಘಾಟಿಸಿದರು. ಕೆವಿಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ| ಮೋಕ್ಷಾ ನಾಯಕ್, ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಜ್ಞಾನೇಶ್, ಹೇಮನಾಥ ಕೆ.ವಿ. ಉಪಸ್ಥಿತರಿದ್ದರು. ಶಿವಧ್ವಜ್ ಅವರನ್ನು ಗೌರವಿಸಲಾಯಿತು.
ಕ್ರೀಡಾ ಸಲಹೆಗಾರರಾದ ಡಾ| ರೇವತಿ ಸೂಂತೋಡು ಸ್ವಾಗತಿಸಿ, ಡಾ| ನವೀನ್ ವಂದಿಸಿದರು. ಕೆವಿಜಿ ದಂತ ಮಹಾ
ವಿದ್ಯಾಲಯದ ಹ್ಯಾನೀಟ್ ಮತ್ತು ಮರಿಯಾ ಕಾರ್ಯಕ್ರಮ ನಿರೂಪಿಸಿದರು.
ಗಮನ ಸೆಳೆದ ಮೈದಾನ
ಕ್ರಿಕೆಟ್ ಅಂಕಣವನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿತ್ತು. ಬಣ್ಣದ ಬಲೂನ್ ಗಳನ್ನು ಹಾರಿಬಿಡುವ ಮೂಲಕ ಕೂಟಕ್ಕೆ ಮೆರುಗು ನೀಡಲಾಯಿತು. ಚಿತ್ರನಟ ಶಿವಧ್ವಜ್ ಮತ್ತು ಎಎಲ್ ಒಇ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್ ಕೆ.ವಿ. ಬ್ಯಾಟ್ ಮತ್ತು ಬಾಲ್ ಮುಖಾಂತರ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಅತಿಥಿಗಳು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.