ಕೆವಿಜಿ: ತ್ರಿಡಿ ಪ್ರಿಂಟಿಂಗ್ ಟೆಕ್ನಾಲಜಿ ಕಾರ್ಯಾಗಾರ
Team Udayavani, May 9, 2018, 3:24 PM IST
ಸುಳ್ಯ : ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗವು ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನವಾದ ರ‍್ಯಾಪಿಡ್ ಪ್ರೋಟೋಟೈಪಿಂಗ್, ತ್ರಿಡಿ ಪ್ರಿಂಟಿಂಗ್ ಟೆಕ್ನಾಲಜಿ ಕಾರ್ಯಾಗಾರ ನಡೆಯಿತು. ಪ್ರೋಟೋಟೈಪಿಂಗ್ ಮತ್ತು ತ್ರಿಡಿ ಪ್ರಿಂಟಿಂಗ್ ಟೆಕ್ನಾಲಜಿ ವಿಷಯದಲ್ಲಿ 2 ದಿನಗಳ ಕಾರ್ಯಾಗಾರ ನಡೆಸಿತು.
ಮೈಸೂರು ಎಎಸ್‌ಪಿ ಡಿಸೈನ್ ಸೊಲ್ಯುಶನ್ ಇದರ ಸಹಭಾಗಿತ್ವದಲ್ಲಿ ಈ ಕಾರ್ಯಾಗಾರ ನಡೆಯಿತು. ಎಎಸ್‌ಪಿ ಡಿಸೈನ್ ಸೊಲ್ಯುಶನ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಎಸ್.ಪಿ. ಆಗಮಿಸಿ, ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ತೇಜೇಶ್ ಸಿ.ಕೆ. ಮತ್ತು ಭರತ್ ಪಿ. ಕಾರ್ಯ ನಿರ್ವಹಿಸಿದರು. ತ್ರಿಡಿ ಪ್ರಿಂಟಿಂಗ್ ಒಂದು ಆಧುನಿಕ ಮ್ಯಾನುಫ್ಯಾಕ್ಚರಿಂಗ್ ತಂತ್ರಜ್ಞಾನವಾಗಿದ್ದು, ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಇದರ ವಿವರ ತಿಳಿದುಕೊಳ್ಳುವ ಜತೆಗೆ ಪ್ರಾತ್ಯಕ್ಷಿಕೆಯನ್ನು ತ್ರಿಡಿ ಪ್ರಿಂಟಿಂಗ್ ಯಂತ್ರದ ಮೂಲಕ ವಿವರಿಸಲಾಯಿತು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ| ಉಮಾಶಂಕರ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಸೋಸಿಯೇಶನ್ ನ ಸಂಯೋಜಕ ಪ್ರೊ| ಗೋಕುಲ್‌ದಾಸ್ ಮತ್ತು ಪ್ರೊ| ಪ್ರಶಾಂತ್ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.