ಸೌಕರ್ಯ ವಂಚಿತ ಗ್ರಾಮ; ಹೆಸರಿನಲ್ಲಷ್ಟೇ ಸಿರಿ
Team Udayavani, Aug 20, 2021, 3:20 AM IST
ಕೊಂಬಾರು ಗ್ರಾ.ಪಂ.ನ ವ್ಯಾಪ್ತಿಯಲ್ಲಿರುವ ಸಿರಿಬಾಗಿಲು ಗ್ರಾಮದ ಬಹುಪಾಲು ಅರಣ್ಯ ವ್ಯಾಪಿಸಿಕೊಂಡಿದೆ. ಗ್ರಾಮ ಹಲವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಇಲ್ಲಿನ ಚಿತ್ರಣ ಒಂದು ಊರು-ಹಲವು ದೂರು ಸರಣಿಯಲ್ಲಿ.
ಕಡಬ: ಕೊಂಬಾರು ಗ್ರಾ.ಪಂ.ನ ವ್ಯಾಪ್ತಿಯಲ್ಲಿರುವ ಸಿರಿಬಾಗಿಲು ಗ್ರಾಮ ಭೌಗೋಳಿಕವಾಗಿ ವಿಶಾಲವಾಗಿದ್ದರೂ ಇಲ್ಲಿ ಜನವಸತಿ ಬಲು ಕಡಿಮೆ. ಗ್ರಾಮದ ಬಹುಪಾಲು ಅರಣ್ಯ ವ್ಯಾಪಿಸಿಕೊಂಡಿದೆ. ಹೆಸರಿಗೆ ಮಾತ್ರ ಇದು ಸಿರಿ ಬಾಗಿಲು. ಇಲ್ಲಿ ಮೂಲ ಸೌಕರ್ಯ ಕೊರತೆಯೇ ಬಲುದೊಡ್ಡ ಸಮಸ್ಯೆ
ಪುಷ್ಪಗಿರಿ ಅರಣ್ಯಧಾಮದ ವ್ಯಾಪ್ತಿಗೆ ಬರುತ್ತದೆ ಎನ್ನುವ ಆತಂಕದಲ್ಲಿರುವ ಈ ಪ್ರದೇಶವು ಕೆಲವು ವರ್ಷಗಳ ಹಿಂದೆ ನಕ್ಸಲರು ಕಾಣಿಸಿಕೊಡಿದ್ದರೆಂಬ ಕಾರಣದಿಂದಾಗಿ ನಕ್ಸಲ್ ಬಾಧಿತ ಪ್ರದೇಶ ಎನ್ನುವ ಹಣೆಪಟ್ಟಿ ಹೊತ್ತಿದೆ. ಚುನಾವಣೆಗಳ ಸಂದರ್ಭದಲ್ಲಿ ಇಲ್ಲಿನ ಮತಗಟ್ಟೆಗಳಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗುತ್ತಿದೆ. ಸಿರಿಬಾಗಿಲು ಗ್ರಾಮವು ಉಪ್ಪಿನಂಗಡಿ ಹೋಬಳಿ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಶಾಲೆಗಳಿಗೆ ಮಕ್ಕಳು ಕಾಡುದಾರಿಯಲ್ಲಿ ನಡೆದು ಹೋಗಬೇಕಿರುವುದರಿಂದ ಬೆಳಗ್ಗೆ ಮತ್ತು ಸಂಜೆ ಹೆತ್ತವರೇ ಜತೆಗಿರಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಪಿಲಿಕಜೆ ಗುಂಡ್ಯ ಸರಕಾರಿ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗುಂಡ್ಯತೋಟ, ಬಾರ್ಯ, ರೆಂಜಾಳ ಭಾಗದ ಮಕ್ಕಳಿಗೆ ಅನುಕೂಲವಾಗುವಂತೆ ಅಂಗನವಾಡಿ ತೆರೆಯಬೇಕೆನ್ನುವ ಬೇಡಿಕೆಯೂ ಇದೆ.
ಹಿಡುವಳಿ ಕಾಡುಪ್ರಾಣಿಗಳ ಪಾಲು :
ಗ್ರಾಮದ ಕೃಷಿ ತೋಟಗಳಿಗೆ ಪಕ್ಕದ ಕಾಡಿನಿಂದ ಆಹಾರ ಅರಸಿಕೊಂಡು ಬರುವ ಕಾಡಾನೆಗಳಿಗೆ ದಿನನಿತ್ಯ ಅಪಾರ ಪ್ರಮಾಣದ ಕೃಷಿ ಆಹುತಿಯಾಗುತ್ತಿರುವುದರಿಂದ ರೈತರು ಹೈರಾಣಾಗಿದ್ದಾರೆ. ದೇರಣೆ, ಗುಂಡ್ಯ, ಬಾರ್ಯ, ರೆಂಜಾಳ, ಕೊಂಬಾರು ಗ್ರಾಮದ ಕಾಪಾರು, ಮಿತ್ತಬೈಲು, ಕಮರ್ಕಜೆ, ಮರುವಂಜಿ, ಬೊಟ್ಟಡ್ಕ ಪ್ರದೇಶಗಳಿಗೆ ನಿತ್ಯ ಆನೆಗಳು ದಾಳಿ ಇಡುತ್ತವೆ. ಅರಣ್ಯ ಇಲಾಖೆಯವರು ಕೃಷಿ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಿ ಸರಕಾರದ ಮಾರ್ಗಸೂಚಿ ಪ್ರಕಾರ ಸಿಗುವ ಪರಿಹಾರ ಏನೇನೂ ಸಾಲದು. ಕಾಡುಪ್ರಾಣಿಗಳು ಸಾಕುಪ್ರಾಣಿಗಳನ್ನು ಬೇಟೆಯಾಡಿ ಬಲಿ ಪಡೆಯುತ್ತಿರುವುದರಿಂದ ಸ್ಥಳೀಯರು ಹಗಲಿನಲ್ಲಿಯೂ ಭಯದಿಂದಲೇ ಓಡಾಡುವಂತಾಗಿದೆ.ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ರಕ್ಷಣೆಗಾಗಿ ವಿಶೇಷ ನೆಲೆಯಲ್ಲಿ ಬಂದೂಕು ಪರವಾನಿಗೆ ನೀಡಲು ಮುಂದಾಗಬೇಕು ಎನ್ನುವುದು ಸ್ಥಳೀಯರ ಬೇಡಿಕೆ. ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂಪರ್ಕಿಸುವ ರಾಜ್ಯಹೆದ್ದಾರಿಯು ಗ್ರಾಮದಲ್ಲಿ ಹಾದುಹೋಗುತ್ತಿದ್ದು, ಇಲ್ಲಿ ಬೀದಿ ದೀಪಗಳನ್ನು ಅಳವಡಿಸಿದರೆ ಅನುಕೂಲವಾಗಲಿದೆ.
ಗ್ರಾಮದ ಬಹುತೇಕ ಎಲ್ಲ ರಸ್ತೆಗಳು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿ ಯಾಗಬೇಕಿದೆ. ಇರುವ ಕಚ್ಛಾ ರಸ್ತೆಗಳು ಮಳೆಗಾಲದಲ್ಲಿ ತೋಡಿ ನಂತಾಗುತ್ತವೆ. ನದಿ, ತೊರೆಗಳಿದ್ದು ಸೇತುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಗ್ರಾಮಕ್ಕೆ ಸಂಬಂಧಿಸಿದ ಸರಕಾರಿ ಆಸ್ಪತ್ರೆ ಸುಮಾರು 10 ಕಿ.ಮೀ. ದೂರದ ಶಿರಾಡಿಯಲ್ಲಿದೆ. ಸೂಕ್ತ ರಸ್ತೆ ಸಂಪರ್ಕ ಇಲ್ಲದೇ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಸಹಾಯವಾಗುವಂತೆ ಸಿರಿಬಾಗಿಲು ಗ್ರಾಮಕ್ಕೆ ಪ್ರತ್ಯೇಕ ಆರೋಗ್ಯ ಉಪಕೇಂದ್ರ ತೆರೆಯಬೇಕಿದೆ.
ಕಾಡುವ ವಿದ್ಯುತ್ ಸಮಸ್ಯೆ :
ಅರಣ್ಯದ ನಡುವೆ ವಿದ್ಯುತ್ ಮಾರ್ಗ ಹಾದುಹೋಗುತ್ತಿರುವುದರಿಂದ ಮರದ ಕೊಬೆಗಳು ವಿದ್ಯುತ್ ಲೈನ್‌ನ ಮೇಲೆ ಮುರಿದುಬಿದ್ದು ಇಲ್ಲಿ ಪದೇ ಪದೆ ವಿದ್ಯುತ್ ಸಮಸ್ಯೆ ಕಾಡುತ್ತಿರುತ್ತದೆ.
ನೆಟ್‌ವರ್ಕ್ ಸಮಸ್ಯೆ :
ಈ ಗ್ರಾಮದಲ್ಲಿ ಮೊಬೈಲ್‌ಗಳು ಸದಾ ನಾಟ್‌ರೀಚಬಲ್. ಇದರಿಂದಾಗಿ ಮಕ್ಕಳು ಆನ್‌ಲೈನ್ ತರಗತಿಗಳಿಂದಲೂ ವಂಚಿತರಾಗಿದ್ದಾರೆ. ಮಾತ್ರವಲ್ಲ ಆರೋಗ್ಯ ಸಮಸ್ಯೆ ಸೇರಿದಂತೆ ಯಾವು ದೇ ತುರ್ತು ಸಂದರ್ಭಗಳಲ್ಲಿ ಹೊರ ಪ್ರಪಂಚವನ್ನು ಸಂಪರ್ಕಿಸಲು ಇಲ್ಲಿನ ಜನರಿಗೆ ಸಾಧ್ಯವಾಗುತ್ತಿಲ್ಲ. ನೆಟ್‌ವರ್ಕ್ ಇಲ್ಲದ ಕಾರಣದಿಂದಾಗಿ ಕೋವಿಡ್ ನಿರೋಧಕ ಲಸಿಕೆ ಕ್ಯಾಂಪ್, ಆಧಾರ್ ಕ್ಯಾಂಪ್ ಮುಂತಾದವುಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸುವುದಾಗಿ ಸಚಿವ ಎಸ್.ಅಂಗಾರ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ನೆಟ್‌ವರ್ಕ್ ವಿಚಾರದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದ ಸ್ಥಳೀಯರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿಯೂ ಚರ್ಚೆ :
ಕೆಲವು ತಿಂಗಳ ಹಿಂದೆ ದ.ಕ.ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲಾಧಿಕಾರಿ ನೇತೃ ತ್ವದಲ್ಲಿ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಜರಗಿದ ಗ್ರಾಮ ವಾಸ್ತವ್ಯದಲ್ಲಿಯೂ ಸ್ಥಳೀಯ ಸಮಸ್ಯೆಗಳನ್ನು ಜನರು ಸರಕಾರದ ಮುಂದಿ ರಿಸಿದ್ದಾರೆ. ಪ್ರಮುಖ ಸಮಸ್ಯೆಗಳನ್ನು ಮನದಟ್ಟು ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳು ಬಗೆ ಹರಿದಿದ್ದರೂ ಪ್ರಮುಖ ಬೇಡಿಕೆಗಳು ಇನ್ನಷ್ಟೇ ಬಗೆಹರಿಯಬೇಕಿದೆ.
ಭೂಮಿಯ ಹಕ್ಕುಪತ್ರ ಪಡೆಯಲೂ ಸಮಸ್ಯೆ :
94 ಸಿ ಹಾಗೂ ಅಕ್ರಮ ಸಕ್ರಮ ಮೂಲಕ ಭೂಮಿಯ ಹಕ್ಕುಪತ್ರ ಪಡೆಯುವ ಅವಕಾಶದಿಂದಲೂ ಹೆಚ್ಚಿನ ಜನರು ವಂಚಿತರಾಗಿದ್ದಾರೆ. ಅರಣ್ಯ ಇಲಾಖೆಯ ಆಕ್ಷೇಪ ಣೆಯಿಂದಾಗಿ ಬಹುತೇಕ ಕಡತಗಳು ವಿಲೇವಾರಿಯಾಗದೆ ಕಂದಾಯ ಕಚೇರಿಯಲ್ಲಿಯೇ ಬಾಕಿಯಾಗಿವೆ.
ಇತರ ಸಮಸ್ಯೆಗಳು :
- ಸಾರ್ವಜನಿಕ ರುದ್ರಭೂಮಿ ಇಲ್ಲದಿರುವುದು
- ಘನ ತ್ಯಾಜ್ಯ ವಿಲೇವಾರಿ ಘಟಕ ಇಲ್ಲ
- ಅನುಷ್ಠಾನವಾಗದ ಶಾಶ್ವತ ಕುಡಿಯುವ ನೀರಿನ ಯೋಜನೆ
- ಗ್ರಾಮೀಣ ರಸ್ತೆಗಳಲ್ಲಿ ವಾಹನ ಸೌಕರ್ಯ ಇಲ್ಲದಿರುವುದು
-ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.