ದೇಶದ ಭವಿಷ್ಯದ ಅಭಿವೃದ್ಧಿಗೆ ತಂತ್ರಜ್ಞಾನ ಪೂರಕವಾಗಲಿ
ಇಂದು ರಾಷ್ಟೀಯ ತಂತ್ರಜ್ಞಾನ ದಿನಾಚರಣೆ
Team Udayavani, May 11, 2019, 9:17 AM IST
ಮೇ 11ರಂದು ಭಾರತ ದೇಶದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತದೆ. 1998ರ ಮೇ 11ರಂದು ಅತಿ ಮುಖ್ಯವಾದ ಪೋಖ್ರಾನ್‌ನಲ್ಲಿ ಅಣುಬಾಂಬ್‌ನ ಯಶಸ್ವಿ ಪರೀಕ್ಷೆಯ ಸ್ಮರಣಾರ್ಥವಾಗಿ ದೇಶದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
ಅಭಿವೃದ್ಧಿಶೀಲ ಭಾರತ ದೇಶದಲ್ಲಿ ವಿಜ್ಞಾನ- ತಂತ್ರಜ್ಞಾನವೂ ದೇಶದ ಅಭಿವೃದ್ಧಿಗೆ ಪೂರಕ ವಾಗಿ ಬೆಳ ವಣಿಗೆಯಾಗುತ್ತಿದೆ. ದಿನಕ್ಕೊಂದು ನವನವೀನ ಆವಿಷ್ಕಾರ ನಡೆಯುತ್ತಿರುವುದರಿಂದಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸುವುದು ಯೋಗ್ಯ ಎನಿಸುತ್ತದೆ.
ಈ ದಿನದಂದು ದೇಶದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಸಂವಾದಗಳನ್ನು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಶಕ್ತಿ ಪ್ರದರ್ಶನ ದಿನ
ಭಾರತವೂ ವಿಜ್ಞಾನ-ತಂತ್ರಜ್ಞಾನಕ್ಕೆ ಪೂರಕವಾದ ಅಭಿವೃದ್ಧಿ ಅಂಶಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ಜೀವ ವೈವಿಧ್ಯ, ಭೌತ, ರಸಾಯನ, ಖಗೋಲಕ್ಕೆ ಸಂಬಂಧಿಸಿದ ಸಂಶೋಧನೆ, ಆವಿಷ್ಕಾರದ ಮೂಲಕ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ಪರಿಚಯಿಸುತ್ತ ಬಂದಿದೆ. ಆದರೆ ಅಣು ಪರೀಕ್ಷೆಯ ಕ್ಷೇತ್ರದಲ್ಲಿ ಮಾತ್ರ ಹಲವಾರು ರೀತಿಯಲ್ಲಿ ಪ್ರಯತ್ನ ಮಾಡಿದ್ದರೂ ಕೂಡ ಯಶಸ್ವಿಯಾಗಿರಲಿಲ್ಲ. 1974ರಲ್ಲಿ ಮೊದಲ ಬಾರಿಗೆ ಪೋಖ್ರಾನ್‌ನಲ್ಲಿ ಸ್ಮೈಲಿಂಗ್ ಬುದ್ಧ ಎಂಬ ರಹಸ್ಯ ಸೂಚಕ ಹೆಸರಿನ ಮೇಲೆ ಅಣುಬಾಂಬ್ ಪರೀಕ್ಷೆಯನ್ನು ಮಾಡಲಾಗಿತ್ತು. ಆದರೆ ಜಗತ್ತಿಗೆ ಭಾರತ ಅಣ್ವಸ್ತ್ರ ದೇಶ ಎಂದು ಬಿಂಬಿತವಾಗಿರಲಿಲ್ಲ. ಮುಂದೆ ಇದೇ ಆಧಾರದಲ್ಲಿ ಮೇಲೆ 1998, ಮೇ 11ರಂದು ರಾಜಸ್ಥಾನದ ಪೋಖ್ರಾನ್‌ನಲ್ಲಿ ಆಪರೇಶನ್ ಶಕ್ತಿ ಎಂಬ ರಹಸ್ಯ ಸೂಚಕ ಹೆಸರಿನ ಮೇಲೆ ಎರಡನೇ ಬಾರಿಗೆ ಯಶಸ್ವಿಯಾಗಿ ಅಣ್ವಸ್ತ್ರವನ್ನು ಪ್ರಯೋಗಿಸಲಾಯಿತು. ಈ ಮೂಲಕ ಜಗತ್ತಿನ ಅಣ್ವಸ್ತ್ರ ಪರೀಕ್ಷೆ ನಡೆಸಿದ ಆರನೇ ದೇಶವಾಗಿ ಭಾರತ ಗುರುತಿಸಿಕೊಂಡಿತು. ಈಅಣ್ವಸ್ತ್ರ ಪರೀಕ್ಷೆಯಲ್ಲಿ ಪ್ರಯೋಗಿಸಿದ ಐದು ಅಣುಬಾಂಬ್‌ಗಳು ಯಶಸ್ವಿಯಾಗಿದ್ದವು. ಈ ಅಣ್ವಸ್ತ್ರ ಪ್ರಯೋಗದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ಅವರ ಪರಿಶ್ರಮಕ್ಕೆ ಸಂದ ಜಯವಾಗಿತ್ತು. ಈ ದಿನದ ಸ್ಮರಣಾರ್ಥವಾಗಿ ದೇಶದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಕೇಂದ್ರ ವಿಜ್ಞಾನ-ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ಆಚರಿಸಲಾಗುತ್ತದೆ.
2019ರ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಸರಕಾರ, ಸರಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಚರಿಸಲಾಗುತ್ತಿದ್ದು, ಈ ದಿನ ತಂತ್ರಜ್ಞಾನ ಕ್ಷೇತ್ರದ ಕೊಡುಗೆ, ಸಾಧಕರನ್ನು ಸ್ಮರಿಸಲಾಗುತ್ತದೆ. ಅಂತೆಯೇ 2018ರ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಸೈನ್ಸ್ ಆ್ಯಂಡ್ ಟೆಕ್ನಾಲಜಿ ಫಾರ್ ಎ ಸಸ್ಟೇನೇಬಲ್ ಫ್ಯೂಚರ್ (ಸುಸ್ಥಿರ ಭವಿಷ್ಯಕ್ಕೆ ವಿಜ್ಞಾನ-ತಂತ್ರಜ್ಞಾನ) ಎಂಬ ವಿಶೇಷವಾದ ಸಂದೇಶದೊಂದಿಗೆ ಆಚರಿಸಲಾಗಿತ್ತು. ಪ್ರಸಕ್ತ ವರ್ಷದ ಆಚರಣೆಯನ್ನು ಸಾಂಕೇತಿಕವಾಗಿ
ಆಚರಿಸಲಾಗುತ್ತಿದೆ.
ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನವೂ ಇಂದು ಪಾರಮ್ಯ ಸಾಧಿಸಿದೆ. ಈ ಬಗ್ಗೆ ಸಾಧಕ-ಬಾಧಕವಾದ ಚರ್ಚೆ ಕೂಡ ಸಕಾಲಿಕವಾದುದು. ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಅಭಿವೃದ್ಧಿಗೆ ಪೂರಕವಾಗಿ ತಂತ್ರಜ್ಞಾನ ಅಳವಡಿಕೆ ಅಭಿವೃದ್ಧಿಶೀಲ ಭಾರತ ದೇಶಕ್ಕೆ ಅಗತ್ಯ ಎಂಬುದು ತಿಳಿಯಬಹುದು.
ತಂತ್ರಜ್ಞಾನ ಬಳಕೆ ಅಗತ್ಯ
ಇಂದು ತಂತ್ರಜ್ಞಾನವೂ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಇದರಿಂದ ಅಭಿವೃದ್ಧಿಗೆ
ಸಹಕಾರಿಯಾಗಿದೆ ಎಂದು ಹೇಳಬಹುದು. ಕೃಷಿ ಸಹಿತ ಇನ್ನು ಹಲವಾರು ಕ್ಷೇತ್ರಗಳಲ್ಲಿ
ಕೂಡ ತಂತ್ರಜ್ಞಾನದ ಬಳಕೆ ಸೂಕ್ತವಾದುದು. ದೇಶವೂ ಸುಸ್ಥಿರ ಭವಿಷ್ಯವನ್ನು ಇಟ್ಟುಕೊಂಡು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಇದು ಅಭಿವೃದ್ಧಿಗೆ ಪೂರಕವಾಗಲಿದೆ.
•ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.