“ಕಂಬಳ ದೇಶವ್ಯಾಪಿ ಪಸರಿಸುವಂತಾಗಲಿ’
ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಉದ್ಘಾಟನೆ
Team Udayavani, Mar 1, 2020, 4:44 AM IST
ಉಪ್ಪಿನಂಗಡಿ: ಜಾನಪದ ಕ್ರೀಡೆ ಜನಪ್ರಿಯ ಕಂಬಳ ಕರಾವಳಿಯಿಂದ ದೇಶವಿದೇಶದಲ್ಲಿ ಪಸರಿಸುವಂತಾಗಲಿ ಎಂದು ಐಎಎಸ್ ಅಧಿಕಾರಿ, ಪುತ್ತೂರು ತಹಶೀಲ್ದಾರ್ ರಾಹುಲ್ ಶಿಂಧೆ ಹೇಳಿದರು.
ಅವರು ಇಲ್ಲಿನ ಹಳೆಗೇಟು ಬಳಿಯ ದಡ್ಡು ನೇತ್ರಾವತಿ ನದಿ ಕಿನಾರೆ ಪಕ್ಕದಲ್ಲಿ ನಡೆಯುವ 35ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು.
ಕಂಬಳ ಕ್ರೀಡೆ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ. ಕಳೆದ 8 ತಿಂಗಳಿನಿಂದ ದ.ಕ. ಜಿಲ್ಲೆಯಲ್ಲಿ ಇದ್ದು, 3 ಕಂಬಳ ನೋಡುವ ಅವಕಾಶ ದೊರೆತಿದೆ. ನಾನು ತಿಳಿದುಕೊಂಡ ಪ್ರಕಾರ ಇದೊಂದು ಅದ್ಭುತ ಮನೋರಂಜನ ಕ್ರೀಡೆಯಾಗಿದ್ದು, ಇದಕ್ಕೆ ವಿಶ್ವ ಮಾನ್ಯತೆ ದೊರಕುವಂತಾಗಬೇಕು ಎಂದರು.
ಹಕ್ಕೊತ್ತಾಯ ಮಂಡಿಸೋಣ
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಕಂಬಳ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸುವ ಮೂಲಕ ಮಂಗಳೂರಿನಲ್ಲಿ ಸಂಘಟಿತರಾಗಿ ಸೇರಿ ಹಕ್ಕೊತ್ತಾಯ ಮಂಡನೆ ಮಾಡಬೇಕಾಗಿದೆ. ಜತೆಗೆ ಅಕಾಡೆಮಿ ಸ್ಥಾಪನೆ ಬಗ್ಗೆಯೂ ಸರಕಾರಕ್ಕೆ ಒತ್ತಡ ತರಬೇಕಾಗಿದೆ ಎಂದರು.
ಸರಕಾರದ ಮಾನ್ಯತೆ ಸಿಗಲಿ
ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ ಮಾತನಾಡಿ, ಜಾನಪದ ಕ್ರೀಡೆಯಾದ ಕಂಬಳವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯ ಇಲ್ಲ. ರೈತರ ಮೆಚ್ಚಿನ ಕ್ರೀಡೆ ಕಂಬಳಕ್ಕೆ ಸರಕಾರದ ಮಾನ್ಯತೆ ದೊರಕುವಂತಾಗಲಿ ಎಂದರು.
ತಾಲೂಕು ಪಂಚಾಯತ್ ಸದಸ್ಯೆ ಸುಜಾತಾಕೃಷ್ಣ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಗುಣಪಾಲ ಜೈನ್ ಕಡಂಬ, ಕಂಬಳ ಜಿಲ್ಲಾ ಸಮಿತಿ ತೀರ್ಪುಗಾರ ಎಡೂ¤ರು ರಾಜೀವ ರೈ, ಕದಿಕ್ಕಾರು ಬೀಡು ಪ್ರವೀಣ್ ಕುಮಾರ್, ಮಠಂತಬೆಟ್ಟು ಮಹಿಷ ಮರ್ದಿನಿ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಸಂಕಪ್ಪ ಶೆಟ್ಟಿ, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಮಹಾಲಿಂಗ ಕಜೆಕ್ಕಾರು, ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಧನ್ಯಕುಮಾರ್ ರೈ, ಲಕ್ಷ್ಮಣ ಮಣಿಯಾಣಿ, ಏಕವಿದ್ಯಾಧರ ಜೈನ್, ವಿಟuಲ ಶೆಟ್ಟಿ ಕೊಲ್ಲೊಟ್ಟು, ಸದಾಶಿವ ಸಾಮಾನಿ ಸಂಪಿಗೆದಡಿ, ಉದ್ಯಮಿಗಳಾದ ಯು. ರಾಮ, ಚಂದಪ್ಪ ಮೂಲ್ಯ, ರಾಜೇಶ್ ರೈ, ಸುಮಾ ಅಶೋಕ್ ಕುಮಾರ್ ರೈ, ಶಿವರಾಮ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿಟuಲ ಶೆಟ್ಟಿ ಕರಾಯ, ದಾಸಪ್ಪ ಗೌಡ, ಜಯವಿಕ್ರಮ್ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ನೆಕ್ಕರೆ ಸ್ವಾಗತಿಸಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಪದಾಧಿಕಾರಿಗಳಾದ ಚಂದ್ರಶೇಖರ ಮಡಿವಾಳ, ಯೋಗೀಶ್ ಸಾಮಾನಿ ಸಂಪಿಗೆದಡಿ, ಆದರ್ಶ ಕಜೆಕ್ಕಾರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಅಕಾಡೆಮಿ ಅಗತ್ಯ
ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಕಂಬಳಕ್ಕೆ ಅಕಾಡೆಮಿ ಸ್ಥಾಪನೆ ಆಗಬೇಕು, ಈ ನಿಟ್ಟಿನಲ್ಲಿ ಪ್ರಯತ್ನ ಅಗತ್ಯ ಎಂದ ಅವರು ಅಕಾಡೆಮಿ ಆದರೆ ಸರಕಾರದಿಂದ ಅನುದಾನ ಪಡೆಯಬಹುದಾಗಿದೆ. ಆ ಮೂಲಕ ಕಂಬಳವನ್ನು ಮತ್ತಷ್ಟು ಮೆರುಗಿನಿಂದ ಮಾಡಬಹುದಾಗಿದೆ ಎಂದರು.
ನಿಲ್ಲಿಸುವ ಪ್ರಶ್ನೆಯೇ ಇಲ್ಲ
ವಿಜಯ-ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಸ್ತಾವಿಕವಾಗಿ ಮಾತನಾಡಿ, ವೀರ ಕ್ರೀಡೆ ಕಂಬಳ ನಿಲ್ಲಬಾರದು ಎಂಬ ಉದ್ದೇಶದಿಂದ ಮುಂದುವರಿಸಿಕೊಂಡು ಬಂದಿದ್ದೇನೆ. ಸರ್ವರ ಸಹಕಾರದಿಂದ ಮುನ್ನಡೆಯುತ್ತಿದೆ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.