ಬಿ.ಸಿ.ರೋಡು ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿ ಸಂಚಾರ ನಿಷೇಧ ಆದೇಶಕ್ಕೆ ಡಿಸಿಗೆ ಪತ್ರ
Team Udayavani, Jun 23, 2020, 5:48 PM IST
ಬಂಟ್ವಾಳ: ಕೆಸರುಮಯಗೊಂಡಿರುವ ಬಿ.ಸಿ.ರೋಡು ಜಕ್ರಿಬೆಟ್ಟು ಹೆದ್ದಾರಿಯ ಕಾಮಗಾರಿಯ ಹಿನ್ನೆಲೆಯಲ್ಲಿ 20 ದಿನಗಳ ಕಾಲ ಸಂಚಾರ ನಿಷೇಧಕ್ಕೆ ಆದೇಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ದ.ಕ.ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಇ ಜಿ.ಎನ್.ಹೆಗ್ಡೆ ಹಾಗೂ ಎಇಇ ಎಚ್.ಪಿ.ರಮೇಶ್ ಅವರ ನಿಯೋಗ ಹೆದ್ದಾರಿಯನ್ನು ಪರಿಶೀಲನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಹೆದ್ದಾರಿಯ ಒಂದುಯ ಬದಿ 7 ಮೀ. ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕ್ಯೂರಿಂಗ್‌ಗಾಗಿ 20 ದಿನಗಳ ಸಮಯಾವಕಾಶ ಬೇಕಿರುವುದರಿಂದ ಸಂಚಾರ ನಿಷೇಧಕ್ಕೆ ಮನವಿ ಮಾಡಿದೆ.
ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಬಿ.ಸಿ.ರೋಡುನಿಂದ ಬೆಳ್ತಂಗಡಿಗೆ ಸಾಗುವ ಘನ ವಾಹನಗಳು ಬಿ.ಸಿ.ರೋಡು ಉಪ್ಪಿನಂಗಡಿ ಗುರುವಾಯನಕರೆ ಹೆದ್ದಾರಿಯಲ್ಲಿ ಸಂಚರಿಸಬೇಕು. ಲಘು ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಾಗುವುದಕ್ಕೆ ಕ್ರಮಕೈಗೊಳ್ಳಲು ಎಸ್‌ಪಿಗೆ ಸೂಚಿಸಲು ಪತ್ರದಲ್ಲಿ ತಿಳಿಸಲಾಗಿದೆ.
ಎಂಆರ್‌ಪಿಎಲ್ ಪೈಪುಲೈನ್ ಕಾಮಗಾರಿಯನ್ನು ಕೂಡ ವೇಗವಾಗಿ ನಡೆಸುವಂತೆ ಅಽಕಾರಿಗಳು ಸೂಚಿಸಿದ್ದು, ಜತೆಗೆ ಹೆದ್ದಾರಿಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಸೂಚಿಸಿದ್ದಾರೆ. ರಾ.ಹೆ.ಇಲಾಖೆಯ ಜೆಇ ಕೇಶವಮೂರ್ತಿ, ಎಇ ಕೀರ್ತಿ ಅಮೀನ್, ಗುತ್ತಿಗೆಯ ಸಂಸ್ಥೆಯ ಶರಣ್ ಗೌಡ, ದಾಮೋದರ್ ಎಂ.ಕೆ. ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.