ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವ: ಎಲ್‌ಐಸಿಯಿಂದ 300 ವಿಮಾ ಗ್ರಾಮಗಳ ಘೋಷಣೆ
Team Udayavani, Apr 13, 2023, 6:20 AM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಂತೆ ಗ್ರಾಮಾಭಿವೃದ್ಧಿ ಯೋಜನೆಯು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅವರ ಕುಟುಂಬಗಳಿಗೆ ವಿಮಾ ಭದ್ರತೆ ನೀಡುವ ಕೆಲಸವನ್ನು ಕಳೆದ ಎರಡು ದಶಕಗಳಿಂದ ಮಾಡುತ್ತ ಬಂದಿದ್ದು, ರಾಜ್ಯದ ಸುಮಾರು 20,09,650 ರಷ್ಟು ಮಂದಿ ಇದರ ಪ್ರಯೋಜನೆ ಪಡೆದಿದ್ದಾರೆ ಎಂದು ಸಿಇಒ ಡಾ| ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.
ಯೋಜನೆಯ ಸಂಘಗಳ ಸದಸ್ಯರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ 2007ರಿಂದ ಗ್ರಾಮಾಭಿವೃದ್ಧಿ ಯೋಜ ನೆಯು ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಡಿಮೆ ಪ್ರೀಮಿಯಂನ ವಿಶೇಷ ಪಾಲಿಸಿಗಳನ್ನು ಪರಿ ಚಯಿಸಲಾಗುತ್ತಿದೆ. ಪ್ರಸ್ತುತ ಮೈಕ್ರೋಬಚತ್ ಮತ್ತು ಭಿಮಾ ಜ್ಯೋತಿ ಪಾಲಿಸಿಗಳ ಪ್ರಯೋಜನ ವನ್ನು ಸದಸ್ಯರು ಪಡೆಯುತ್ತಿದ್ದಾರೆ.
ಮೈಕ್ರೋಬಚತ್ ಪಾಲಿಸಿಯಡಿ ವಿಮಾಗ್ರಾಮ ಗುರುತಿಸುವ ವಿಶೇಷ ಕಾರ್ಯ ಭಾರತೀಯ ಜೀವ ವಿಮಾ ನಿಗಮವು ಮಾಡುತ್ತಿದೆ. ಈಗಾಗಲೇ ರಾಜ್ಯದಾದ್ಯಂತ 11,93,000 ಮಂದಿ ಮೈಕ್ರೋಬಚತ್ ಪಾಲಿಸಿ ಮಾಡಿಸಿರುತ್ತಾರೆ.
ಏನಿದು ವಿಮಾಗ್ರಾಮ ?
ಪ್ರತಿ ಗ್ರಾಮದ ಜನಸಂಖ್ಯೆ ಮತ್ತು ಅಲ್ಲಿ ಮಾಡಲಾದ ಮೈಕ್ರೋಬಚತ್ ಪಾಲಿಸಿಯ ಆಧಾರದಲ್ಲಿ ವಿಮಾ ಗ್ರಾಮ ಗುರುತಿಸುವ ಕೆಲಸ ಭಾರತೀಯಜೀವ ವಿಮಾ ನಿಗಮವು ಮಾಡುತ್ತದೆ. ಈಗಾಗಲೇ 2019ರಿಂದ ರಾಜ್ಯದಾದ್ಯಂತ 300 ವಿಮಾ ಗ್ರಾಮ ಗುರುತಿಸಲಾಗಿದೆ. ಆಯ್ಕೆಯಾದ ಗ್ರಾಮಗಳಿಗೆ ಒಂದು ಘಟಕಕ್ಕೆ 35,000 ರೂ. ವೆಚ್ಚದಲ್ಲಿ ಈ ಕೆಳಗಿನ ಯಾವುದಾದರೂ ಒಂದು ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಶಾಲೆ, ಗ್ರಾ.ಪಂ., ದೇವಸ್ಥಾನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ (ನೀರಿನ ಟ್ಯಾಂಕ್, ಶುದ್ಧಕುಡಿಯುವ ನೀರಿನ ಘಟಕ), ಶಾಲೆಗಳಿಗೆ ಶೌಚಾಲಯ, ಸೋಲಾರ್ ದಾರಿದೀಪ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಒಳಗೊಂಡಿರುತ್ತದೆ.
ಈಗಾಗಲೇ ಗ್ರಾಮಾಭಿವೃದ್ಧಿ ಯೋಜ ನೆಯ ಸಹಕಾರದಲ್ಲಿ ರಾಜ್ಯ ದಾದ್ಯಂತ 300 ವಿಮಾ ಗ್ರಾಮಗಳನ್ನು ಗುರುತಿಸಿ 1,02,90,000 ರೂ. ವೆಚ್ಚದ ಸೌಲಭ್ಯ ಒದಗಿಸಲಾಗಿದೆ. ದಾವಣ ಗೆರೆ ಪ್ರೌಢ ಶಾಲೆಯಲ್ಲಿ 168 ವಿದ್ಯಾರ್ಥಿ ಗಳಿದ್ದು, ಇದುವರೆಗೆ ತಮ್ಮ ಮನೆಗಳಿಂದ ಕುಡಿಯುವ ನೀರು ತರುತ್ತಿದ್ದರು. ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಯಿಂದಾಗಿ ಎಲ್ಲರಿಗೂ ಕುಡಿಯಲು ಶುದ್ಧ ನೀರು ದೊರಕುತ್ತಿದ್ದು ತುಂಬಾ ಪ್ರಯೋಜನವಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಸೌಲಭ್ಯಕ್ಕೆ ಮಾನದಂಡಗಳು
2000 ಜನರಿರುವ ಗ್ರಾಮದಲ್ಲಿ ಕನಿಷ್ಠ 75 ಮಂದಿ ಹಾಗೂ 5000 ಮಂದಿ ಇರುವಲ್ಲಿ ಕನಿಷ್ಠ 100 ಮಂದಿ ವಿಮಾ ಯೋಜನೆಗೆ ನೊಂದಾಯಿಸಿರಬೇಕು. ಜನಸಂಖ್ಯೆ 5001 ರಿಂದ 10,000 ಇರುವಲ್ಲಿ ಕನಿಷ್ಠ 150 ವಿಮೆ ನೊಂದಾಯಿಸಿರಬೇಕು. ಗ್ರಾ.ಪಂ. ವತಿಯಿಂದ ಗ್ರಾಮದ ಜನಸಂಖ್ಯೆ ಕುರಿತು ದೃಢೀಕರಣ ನೀಡುವುದು ಕಡ್ಡಾಯವಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.