‘ಸರಕಾರಿ ಶಾಲೆಗಳಿಂದ ಜೀವನೋತ್ಸಾಹ’
Team Udayavani, May 30, 2019, 6:00 AM IST
ಪುತ್ತೂರು: ನಮ್ಮ ಹಿರಿಯ ತಲೆಮಾರುಗಳು ತಮ್ಮ ಜೀವನದ ಎಲ್ಲ ಸವಾಲುಗಳನ್ನೂ ಯಶಸ್ವಿಯಾಗಿ ಎದುರಿಸಿ ಗಟ್ಟಿತನವನ್ನು ಕಾಯ್ದುಕೊಳ್ಳಲು ಸರಕಾರಿ ಶಾಲೆಗಳೇ ಕಾರಣವಾಗಿದೆ. ಹೀಗಾಗಿ ಸರಕಾರಿ ಶಾಲೆಗಳು ವಿದ್ಯಾರ್ಥಿಗೆ ಜೀವನೋ ತ್ಸಾಹವನ್ನು ಕಲಿಸುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಬುಧವಾರ ತಾಲೂಕಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿ.ಪ್ರಾ. ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಾಲೆಗಳು ವೃತ್ತಿಪರತೆಯನ್ನು ಕಲಿಸಿದರೆ, ಸರಕಾರಿ ಶಾಲೆಗಳಿಂದ ಬದುಕುವ ಕಲೆಯನ್ನು ಕಲಿಯಬಹುದಾಗಿದೆ. ಸರಕಾರಿ ಶಾಲೆಗಳು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಹೊಂದಿದ್ದು, ಅವುಗಳನ್ನು ಮುಚ್ಚುವುದು ಸುಲಭದ ಮಾತಲ್ಲ. ಮುಚ್ಚುವ ಹಂತದಲ್ಲೇ ಸಾಕಷ್ಟು ಶಾಲೆಗಳು ಎದ್ದು ನಿಂತು, ಮಾದರಿ ಶಾಲೆಗಳಾಗಿ ಬೆಳೆದಿವೆ. ಶಾಲೆಯ ಆರಂಭದ ಉತ್ಸವ ವರ್ಷದ ಎಲ್ಲ ದಿನವೂ ಮುಂದುವರಿಯಬೇಕು. ಹಾರಾಡಿ ಶಾಲೆಯು ಪ್ರಸ್ತುತ ಎಲ್ಲ ಶಾಲೆಗಳಿಗೂ ಮಾದರಿಯಾಗಿ ಬೆಳೆದಿದೆ ಎಂದರು.
ಸರಕಾರಿ ಶಾಲೆ: ಗುಣಮಟ್ಟ ಹೆಚ್ಚಿದೆ
ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದಲ್ಲಿ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ. ಹೀಗಾಗಿ ಪೋಷಕರು ಸರಕಾರಿ ಶಾಲೆಗಳ ಕುರಿತ ತಾತ್ಸಾರ ಭಾವನೆಯನ್ನು ಬಿಡಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ಪ್ರಸ್ತಾವನೆಗೈದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಪ್ರತಿಮಾ ಯು. ರೈ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕ ಮುದರ ಸ್ವಾಗತಿಸಿದರು. ಶಿಕ್ಷಕಿ ಶುಭಲತಾ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಗಾರತಿ ಬೆಳಗಿದರು
ಪ್ರಾರಂಭದಲ್ಲಿ ಶಾಲೆಗೆ ಹೊಸದಾಗಿ ಸೆರ್ಪಡೆಗೊಂಡ ವಿದ್ಯಾರ್ಥಿಗಳನ್ನು ಶಾಸಕರ ನೇತೃತ್ವದಲ್ಲಿ ಆರತಿ ಬೆಳಗಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಹಾರಾಡಿ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 409 ವಿದ್ಯಾರ್ಥಿಗಳು ಕಲಿತಿದ್ದು, ಈ ವರ್ಷ 113 ಮಕ್ಕಳು ದಾಖಲಾಗಿದ್ದಾರೆ. ಇವರಲ್ಲಿ 71 ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಇಒ ತಿಳಿಸಿದರು.
ದೇಶದ ಮೊದಲ ಪ್ರಧಾನಿ ನೆಹರೂ ಅವರು ಮಕ್ಕಳ ಮೇಲೆ ವಿಶೇಷ ಮಮತೆ ಹೊಂದಿದ್ದು, ಹೀಗಾಗಿ ಅವರ ಜನ್ಮ ದಿನ ಮಕ್ಕಳ ದಿನಾಚರಣೆ ಹಾಗೂ ಶಿಕ್ಷಕರ ಮೇಲೆ ಅಪಾರ ಭರವಸೆಯನ್ನಿಟ್ಟಿದ್ದ ಪ್ರಥಮ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇಂತಹ ಮಹಾ ತ್ಮರ ದೂರದೃಷ್ಟಿಯನ್ನು ಇಂದಿನ ಯುವ ಜನತೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಶಾಸಕರು ವಿವರಿಸಿದರು.
ಹಾರಾಡಿ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 409 ವಿದ್ಯಾರ್ಥಿಗಳು ಕಲಿತಿದ್ದು, ಈ ವರ್ಷ 113 ಮಕ್ಕಳು ದಾಖಲಾಗಿದ್ದಾರೆ. ಇವರಲ್ಲಿ 71 ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಇಒ ತಿಳಿಸಿದರು.
ಮಕ್ಕಳ-ಶಿಕ್ಷಕರ ದಿನ