ಪ್ರವಾಹ ಹಾನಿ ಸಂಭವಿಸಿದಲ್ಲಿ ತಾತ್ಕಾಲಿಕ ಪರಿಹಾರಕ್ಕೆ ಸೀಮಿತ
ಹರಿಹರ ಪಲ್ಲತ್ತಡ್ಕ: ಇನ್ನೂ ನಡೆದಿಲ್ಲ ಶಾಶ್ವತ ಪರಿಹಾರ ಕಾಮಗಾರಿ
Team Udayavani, Apr 14, 2023, 4:06 PM IST
ಸುಳ್ಯ: ಕಳೆದ ಮಳೆಗಾಲದಲ್ಲಿ ಭಾರೀ ನೆರೆಗೆ ಹಾನಿಗೊಳಗಾದ ಹರಿಹರ ಪಲ್ಲತ್ತಡ್ಕದಲ್ಲಿ ಕೇವಲ ತಾತ್ಕಾಲಿಕ ಕಾಮಗಾರಿ ನಡೆಸಿದ್ದು ಬಿಟ್ಟರೆ ಶಾಶ್ವತ ಕಾಮಗಾರಿ ಇನ್ನೂ ನಡೆದಿಲ್ಲ. ಇದು ಹಾಗೆಯೇ ಮುಂದುವರಿದರೆ ಈ ಮಳೆಗಾಲದಲ್ಲಿ ಹರಿಹರ ಪಲ್ಲತ್ತಡ್ಕದಲ್ಲಿ ಮತ್ತೆ ಹಾನಿಯಾಗುವ ಭೀತಿ ಎದುರಾಗಿದೆ.
2022ರ ಅಗಸ್ಟ್ ಮೊದಲಲ್ಲಿ ಭಾರೀ ಮಳೆಗೆ ಸುಳ್ಯ ತಾಲೂಕಿನ ಹಲವೆಡೆ ಹಾನಿ ಸಂಭವಿಸಿತ್ತು. ಹೊಳೆಯಲ್ಲಿ ಭಾರೀ ಪ್ರಮಾಣದ ನೆರೆ ನೀರು ಬಂದು ಹರಿಹರ ಪಲ್ಲತ್ತಡ್ಕ ಪೇಟೆ ನೆರೆ ನೀರಿನಿಂದ ಆವೃತಗೊಂಡಿತ್ತು. ಪೇಟೆಯ ಎರಡು ಅಂಗಡಿಗಳು ನೀರು ಪಾಲಾಗಿತ್ತು. ಬಾಳುಗೋಡು ಸಂಪರ್ಕದ ಸೇತುವೆಯಲ್ಲಿ ಮರ, ರೆಂಬೆ ಇತ್ಯಾದಿ ಸಿಲುಕಿಕೊಂಡು ಸಂಚಾರಕ್ಕೆ ಅಡ್ಡಿಯಾಗಿತ್ತು. ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಕುಸಿತ ಉಂಟಾಗಿತ್ತು.
ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ ಹಾನಿ ಸಂಭವಿಸಿದ್ದರೂ, ಅಂದು ಅತೀ ಜರೂರಾಗಿ ತಾತ್ಕಾಲಿಕ ಪರಿಹಾರ ಕಾರ್ಯ ಮಾಡಲಾಗಿತ್ತು. ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಉಂಟಾಗಿದ್ದ ಕುಸಿತದ ಭಾಗಕ್ಕೆ ಗೋಣಿ ಚೀಲಕ್ಕೆ ಮರಳು ತುಂಬಿಸಿ ತಡೆ ಗೋಡೆ ನಿರ್ಮಿಸಲಾಗಿತ್ತು. ಶಾಶ್ವತ ಕಾರ್ಯ ನಡೆಯಲೇ ಇಲ್ಲ. ಅಳವಡಿಸಿದ ಗೋಣಿ ಚಿಲವೂ ಹರಿಯಲಾರಂಭಿಸಿದೆ.
ಹೇಳಿಕೆ ಕಾರ್ಯಗತ ಗೊಂಡಿಲ್ಲ
ತಾತ್ಕಾಲಿಕ ಪರಿಹಾರ ಕಾರ್ಯ ನಡೆಸಿದ ಬಳಿಕ ಮುಂದೆ ಅನುದಾನದಲ್ಲಿ ಶಾಶ್ವತ ಕೆಲಸ ಮಾಡುವ ಬಗ್ಗೆ ಅಂದು ಸಂಬಂಧಿಸಿದವರು ಮಾಹಿತಿ ನೀಡಿದ್ದರೂ ಅದು ಯಾವುದೂ ಕಾರ್ಯಗತ ಗೊಂಡಿಲ್ಲ. ಶೀಘ್ರ ಮಳೆಗಾಲ ಆರಂಭವಾಗಲಿದೆ. ಮಳೆಗಾಲದಲ್ಲಿ ಮತ್ತೆ ಹೊಳೆಯಲ್ಲಿ ನೀರು ಹರಿದು ಬಂದಾಗ ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಕುಸಿತ ಸಂಭವಿಸಿ ಆ ಭಾಗದ ಸಂಪರ್ಕವೇ ಕಡಿತಗೊಳ್ಳುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಬಾಳುಗೋಡು ಸಂಪರ್ಕ ಸೇತುವೆ ಬ್ರಿಟಿಷರ ಕಾಲದ ಸೇತುವೆಯಾಗಿದ್ದು, ಅದೂ ಶಿಥಿಲವಾಗಿದೆ ಎನ್ನಲಾಗಿದೆ. ಹರಿಹರ ಪಲ್ಲತ್ತಡ್ಕ ಪೇಟೆಗೆ ಹೊಂದಿಕೊಂಡು ಹರಿಯುತ್ತಿರುವ ಹೊಳೆ ಬದಿಗೆ ತಡೆಗೋಡೆ ನಿರ್ಮಾಣವಾಗಬೇಕಿದೆ. ಕುಸಿತಗೊಂಡಿದ್ದ ಸಂಪರ್ಕ ರಸ್ತೆಯಲ್ಲಿ ಗೋಣಿಚೀಲ ಇರಿಸಲಾದ ಸ್ಥಳದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣವಾಗಬೇಕಿದೆ. ಚುನಾವಣೆಯ ಹೆಸರಿನಲ್ಲಿ ಕಾಮಗಾರಿ ಬಾಕಿಯಿರಿಸಿದರೆ ಅಪಾಯ ನಿಶ್ಚಿತ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady: ಶಂಕಿತ ಲವ್‌ಜೆಹಾದ್: ಬೀದಿಯಲ್ಲೇ ಪತಿಗೆ ಹಲ್ಲೆ!
Kadaba: ಹಳೆಸ್ಟೇಶನ್ ಬಳಿಯ ಬಂಕ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಪರಾರಿ!
Bantwala: ಬ್ರಹ್ಮರಕೂಟ್ಲು ಟೋಲ್: ಜಗಳದ ವೀಡಿಯೋ ವೈರಲ್
Missing: ಸುಳ್ಯದಿಂದ ಬೆಂಗಳೂರಿಗೆ ತೆರಳಿದ್ದ ಯುವಕ ನಾಪತ್ತೆ
Belthangady: ಕಾಜೂರು ದರ್ಗಾ ಶರೀಫ್‌ನಲ್ಲಿ ಜ.24ರಿಂದ ಫೆ.2ವರೆಗೆ ಉರೂಸ್ ಸಂಭ್ರಮ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್