ಜಾಗೃತಿ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಕೆ: ನಳಿನ್
ಎರಡು ಸಾವಿರಕ್ಕೂ ಮಿಕ್ಕಿದ ದಿನಸಿ ಕಿಟ್ ವಿತರಣೆ
Team Udayavani, Apr 20, 2020, 5:48 AM IST
ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಸಂಜೀವ ಮಠಂದೂರು ಅವರ ವಾರ್‌ರೂಂ ಮೂಲಕ ಸಂಗ್ರಹಿಸಲಾದ ಸುಮಾರು 2 ಸಾವಿರಕ್ಕೂ ಅಧಿಕ ಆಹಾರದ ಕಿಟ್‌ಗಳನ್ನು ರವಿವಾರ ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ವಿತರಣೆ ಮಾಡಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ ಲಾಕ್‌ಡೌನ್ ಮತ್ತು ಅದಕ್ಕೆ ಜನರು ನೀಡಿದ ಸಹಕಾರಗಳಿಂದಾಗಿ ಸಂಪೂರ್ಣ ನಿಯಂತ್ರ ಣದಲ್ಲಿದೆ. ಜಾಗೃತಿಯ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಸಲಾಗಿದೆ ಎಂದರು.
1.70 ಸಾವಿರ ಕೋ. ರೂ. ಅನುದಾನ
ಕೇಂದ್ರ ಸರಕಾರವು 1.70 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟು ಅದರಲ್ಲಿ ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ರೇಷನ್ ಕಾರ್ಡ್‌ನಲ್ಲಿ ಉಚಿತ ಅಕ್ಕಿ ವಿತರಣೆ, ಕಿಸಾನ್ ಕಾರ್ಡ್‌ದಾರರಿಗೆ ಹಣಕಾಸು ನೆರವು, ಕಟ್ಟಡ ಕಾರ್ಮಿಕರಿಗೆ ನೆರವು, ಬ್ಯಾಂಕ್ ಸಾಲಗಾರರಿಗೆ ಬಡ್ಡಿ ವಿನಾಯಿತಿ ಯೋಜನೆ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯ ಸರಕಾರವೂ ರೈತರ ಹಾಲು ಖರೀದಿ, ರೇಷನ್ ವಿತರಣೆ, ಬಾಡಿಗೆ ಕೇಳದಂತೆ ಮನವಿ, ವಿದ್ಯುತ್ ಬಿಲ್ ಅವಧಿ ವಿಸ್ತರಣೆ, ರೈತರಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಿದೆ ಎಂದರು.
ಜಿಲ್ಲೆಯಲ್ಲಿ 16,500 ಮಂದಿಗೆ ಊಟ
ಪಕ್ಷದ ವತಿಯಿಂದ ಜಿಲ್ಲೆಯಲ್ಲಿ 16,500 ಮಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸಹಕಾರದಲ್ಲಿ ಪ್ರತಿದಿನ ಊಟವನ್ನು ನೀಡಲಾಗುತ್ತಿದೆ. ಅಲ್ಲದೆ ಮನೆ ಮನೆಗಳಿಗೆ ಉಚಿತ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದರು.
7,200 ಕುಟುಂಬಗಳಿಗೆ ಊಟದ ವ್ಯವಸ್ಥೆ
ಶಾಸಕ ಸಂಜೀವ ಮಠಂದೂರು ಮಾತ ನಾಡಿ, ಎಲ್ಲರಿಗೂ ಮೂರು ಹೊತ್ತಿನ ಅನ್ನ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ನೀಡಬೇಕು ಎಂಬ ಪ್ರಧಾನ ಮಂತ್ರಿಗಳ ಸಂದೇಶಕ್ಕೆ ಪೂರಕ ವಾಗಿ ವಾರ್‌ರೂಂ ಮೂಲಕ ಕಿಟ್ ವಿತರಣೆ ಮಾಡಲಾಗುತ್ತಿದೆ. ಈ ತನಕ ಪುತ್ತೂರು ವಿಧಾನಸಭೆ ಕ್ಷೇತ್ರದ 7,200 ಕುಟುಂಬಗಳಿಗೆ ಮಾನದಂಡದ ಅಡಿಯಲ್ಲಿ ಊಟವನ್ನು ಒದಗಿ ಸಲಾಗಿದೆ. ಆಶಾ, ಅಂಗನವಾಡಿ, ಸ.ಆಸ್ಪತ್ರೆ, ಪ್ರಾ., ಸಮುದಾಯ ಆರೋಗ್ಯ ಕೇಂದ್ರದ 400ಕ್ಕೂ ಅಧಿಕ ಕಾರ್ಯಕರ್ತರು, ಸಿಬಂದಿಗೆ ಈಗಾಗಲೇ ಅಕ್ಕಿ, ಇತರ ಆಹಾರ, ತರಕಾರಿಗಳನ್ನು ಒಳಗೊಂಡ ಕಿಟ್‌ಗಳ ವಿತರಣೆ ಮಾಡಲಾಗಿದೆ. ಪುತ್ತೂರು, ಉಪ್ಪಿನಂಗಡಿ ದೇಗುಲ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾ ಲಯ ಇವುಗಳ ಸಹಯೋಗದಲ್ಲಿ 2 ಲಕ್ಷ ರೂ.ಗೂ ಅಧಿಕ ಮೊತ್ತದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.