ಮದ್ಯ ದೊರೆಯದೆೆ ಕುಟುಂಬಗಳಲ್ಲಿ ಹೆಚ್ಚಿದ ನೆಮ್ಮದಿ! ಅಪಘಾತ, ಅಪರಾಧ ಪ್ರಕರಣಗಳು ಇಳಿಮುಖ
Team Udayavani, Apr 13, 2020, 6:14 AM IST
ಸುಳ್ಯ: ಮದ್ಯ ಸಿಗದೆ ಎಣ್ಣೆ ಪ್ರಿಯರು ಕಂಗಲಾಗಿದ್ದರೆ, ಅವರ ಮನೆಗಳಲ್ಲಿ ನೆಮ್ಮದಿಯ ವಾತಾವರಣ ಹೆಚ್ಚುತ್ತಿದೆ!
ಮದ್ಯ ಮಾರಾಟ ಸ್ಥಗಿತಗೊಂಡ ಅನಂತರದ ಹತ್ತು ದಿನಗಳಲ್ಲಿ ಅಪರಾಧ, ಅಪಘಾತ ಪ್ರಕರಣ ಸಂಖ್ಯೆಯಲ್ಲಿನ ಇಳಿಕೆ ಅಂಶ ಇದನ್ನು ದೃಢಿಕರಿಸುತ್ತಿದೆ.
ಮನೆಗಳಲ್ಲಿ ನೆಮ್ಮದಿ ಹೆಚ್ಚು
ಮದ್ಯ ಸೇವನೆಯಿಂದ ಕೌಟುಂಬಿಕ ಕಲಹ ಗಳು ಹೆಚ್ಚಾಗಿದ್ದ ಕುಟುಂಬಗಳಲ್ಲಿ ಈಗ ನೆಮ್ಮದಿ ಮೂಡಿದೆ. ಪತಿ-ಪತ್ನಿ, ಮಕ್ಕಳ ನಡುವಿನ ಸಂಘರ್ಷ ಕಡಿಮೆಯಾಗಿದೆ.
ನನ್ನ ಪತಿ ಗಾರೆ ಕೆಲಸಕ್ಕೆ ಹೋಗುತ್ತಾರೆ. ಸಂಜೆ ಕೆಲಸ ಬಿಟ್ಟ ಮೇಲೆ ಮದ್ಯ ಸೇವಿಸಿ ಬರುತ್ತಿದ್ದರು. ಪ್ರತಿ ದಿನವೂ ಜಗಳ. ಇದರಿಂದ ಮಕ್ಕಳ ಓದಿನ ಮೇಲೂ ಪರಿಣಾಮ ಬೀರಿತ್ತು. ಈಗ ಮದ್ಯ ಸಿಗದೆ ಪತಿ ಮೌನವಾಗಿದ್ದಾರೆ. ಮನೆಯಲ್ಲೂ ನೆಮ್ಮದಿ ಇದೆ ಎನ್ನುತ್ತಾರೆ ಬೆಳ್ಳಾರೆ ಸಮೀಪದ ಮಹಿಳೆ. ವಾರದಲ್ಲಿ ಎರಡು ದಿನ ಕೆಲಸಕ್ಕೆ ಹೋಗಿ ಉಳಿದ ನಾಲ್ಕು ದಿನ ಮದ್ಯದಂಗಡಿಯಲ್ಲೇ ಕಾಲ ಕಳೆಯುತ್ತಿದ್ದರು. ನೆರೆಹೊರೆಯವರೊಂದಿಗೂ ಜಗಳವಾಗುತ್ತಿತ್ತು. ಈಗ ಅದಕ್ಕೆ ಕಡಿವಾಣ ಬಿದ್ದಿದೆ ಅನ್ನುತ್ತಾರೆ ಗುತ್ತಿಗಾರಿನ 55 ವರ್ಷದ ಕೂಲಿ ಕಾರ್ಮಿಕೆ.
ಮದ್ಯ ಸೇವನೆ ಚಟವಾಗಿಬಿಟ್ಟಿತ್ತು. ಇದ ರಿಂದ ದೂರ ಸರಿಯಲು ಹಲವು ಬಾರಿ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಈಗ ಮದ್ಯ ಸಿಗದೆ ಇರುವ ಕಾರಣ ತಾನಾಗಿಯೇ ದೂರ ಹೋಗಲು ಅವಕಾಶ ಸಿಕ್ಕಿತ್ತು. ಮೊದಲು ಎರಡು ದಿನ ಕಷ್ಟವಾಯಿತು. ಈಗ ಪರವಾಗಿಲ್ಲ ಅನ್ನುತ್ತಾರೆ ಊರಿನ ಹೆಸರು ಹೇಳದ ಶಂಕರ.
ಅಪರಾಧ ಪ್ರಮಾಣ ಇಳಿಕೆ
ಅವಿಭಜಿತ ಜಿಲ್ಲೆಯಲ್ಲಿನ ಠಾಣೆಗಳಲ್ಲಿ ಪ್ರತಿ ದಿನ ಪ್ರಕರಣ ದಾಖಲಾಗುತ್ತಿತ್ತು. ಪತಿ, ಪತ್ನಿ ಜಗಳ, ನೆರೆ ಹೊರೆ ಜಗಳ ಹೀಗೆ ನಾನಾ ಪ್ರಕರಣಗಳು ಕಂಡು ಬರುತಿದ್ದವು. ಇದರಲ್ಲಿ ಮದ್ಯ ಸೇವನೆಯಿಂದಲೂ ಇಂತಹ ಅಪರಾಧ ಕಂಡು ಬಂದ ದೃಷ್ಟಾಂತಗಳಿವೆ. ಈಗ ಆ ಪ್ರಮಾಣ ಶೂನ್ಯದತ್ತ ಸಾಗಿದೆ. ಅಕ್ರಮ ಮದ್ಯ ತಯಾರಿ ಹೊರತುಪಡಿಸಿ ಉಳಿದಂತೆ ಮದ್ಯಸೇವನೆ ಪರಿಣಾಮದ ಅಪರಾಧ ಪ್ರಕರಣ ಗಳು ನಿಯಂತ್ರಣಕ್ಕೆ ಬಂದಿದೆ ಎನ್ನುತ್ತವೆ ಪೊಲೀಸ್ ಇಲಾಖೆಯ ಅಂಕಿ ಅಂಶಗಳು.
ಅಪಘಾತ ಇಳಿಕೆ
ಮಾಣಿ-ಮೈಸೂರು ರಸ್ತೆಯಲ್ಲೇ 3 ತಿಂಗಳಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದರು. ಇದರಲ್ಲಿ ಶೇ.25ರಿಂದ 30ರಷ್ಟು ಮದ್ಯ ಸೇವಿಸಿದ ಚಾಲನೆಯಿಂದ ಆಗಿದೆ. ಉಳಿದಂತೆ ಅತಿ ವೇಗ, ಅಜಾಗರೂಕತೆಗಳಿಂದ ಅಪಘಾತಗಳು ಸಂಭವಿಸಿವೆ. ಕಳೆದ 10 ದಿನಗಳಿಂದ ಇದು ಪೂರ್ಣ ನಿಯಂತ್ರಣದಲ್ಲಿದೆ. ಜತೆಗೆ ವಾಹನ ಸಂಚಾರ ನಿರ್ಬಂಧದ ಹಿನ್ನೆಲೆ ಕೂಡ ಉಳಿದ ಅಪಘಾತ ಪ್ರಕರಣಗಳು ಕೂಡ ಇಳಿಕೆ ಕಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.