ಲೋಕಸಭೆ ಚುನಾವಣೆ ಬೆನ್ನಲ್ಲೇ ಗ್ರಾ.ಪಂ. ನೀತಿ ಸಂಹಿತೆ!
ಕಬಕ-34ನೇ ನೆಕ್ಕಿಲಾಡಿ ಗ್ರಾ.ಪಂ.ಗಳ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ
Team Udayavani, May 10, 2019, 6:26 AM IST
ಪುತ್ತೂರು: ಪ್ರಸ್ತುತ ಎಲ್ಲಡೆ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿದ್ದು, ಮೇ 23ಕ್ಕೆ ಫಲಿತಾಂಶದ ಬಳಿಕ ನೀತಿ ಸಂಹಿತೆ ತೆರವಾದರೂ ಪುತ್ತೂರು ತಾಲೂಕಿನ ಎರಡು ಗ್ರಾ.ಪಂ.ಗಳ ತಲಾ ಒಂದು ವಾರ್ಡ್‌ನಲ್ಲಿ ನೀತಿ ಸಂಹಿತೆ ಮತ್ತೆ ಮುಂದುವರಿಯಲಿದೆ. ಕಾರಣ ಇಲ್ಲಿ ಮೇ 29ರಂದು ಉಪಚುನಾವಣೆ ಘೋಷಣೆಯಾಗಿದೆ!
ಲೋಕಸಭಾ ಚುನಾವಣೆಯ ಬೆನ್ನಲ್ಲೇ ನಗರ ಸ್ಥಳೀಯಾಡಳಿತ ಹಾಗೂ ಗ್ರಾ.ಪಂ.ಗಳ ತೆರವಾದ ಸದಸ್ಯ ಸ್ಥಾನಗಳಿಗೆ ಚುನಾವಣಾ ಆಯೋಗವು ಮೇ 29ರಂದು ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಪುತ್ತೂರು ತಾಲೂಕಿನ ಕಬಕ ಗ್ರಾ.ಪಂ.ನ 1ನೇ ವಾರ್ಡ್ ಹಾಗೂ 34ನೇ ನೆಕ್ಕಿಲಾಡಿ ಗ್ರಾ.ಪಂ.ನ 2ನೇ ವಾರ್ಡ್‌ನ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಹುತೇಕ ಕೆಲಸ ಕಾರ್ಯಗಳು ನಿಂತು ಹೋಗಿ ಒಮ್ಮೆ ನೀತಿಸಂಹಿತೆ ಮುಗಿದರೆ ಸಾಕು ಎನ್ನುತ್ತಿದ್ದು, ಈ ಭಾಗದ ಮಂದಿ ಮತ್ತೆ ನೀತಿಸಂಹಿತೆ ವ್ಯಾಪ್ತಿಗೆ ಬರಲಿದ್ದಾರೆ.
ಕಬಕ ಗ್ರಾ.ಪಂ.ನ ವಾರ್ಡ್ 1ರ ಸದಸ್ಯ ವಿಟ್ಟಲ ಗೌಡ ಬನ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 26ರಿಂದ ಆ ಸ್ಥಾನ ತೆರವಾಗಿತ್ತು. 34ನೇ ನೆಕ್ಕಿಲಾಡಿ ಗ್ರಾ.ಪಂ.2ನೇ ವಾರ್ಡ್ ಸದಸ್ಯೆ ದೇವಕಿ ಅವರು ಅಂಗನವಾಡಿ ಸಹಾಯಕಿಯಾಗಿ ನೇಮಕವಾದ ಹಿನ್ನೆಲೆ ರಾಜೀನಾಮೆ ಕೊಟ್ಟ ಪರಿಣಾಮ ಕಳೆದ ಡಿಸೆಂಬರ್ 27ರಿಂದ ಸ್ಥಾನ ತೆರವಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಗ್ರಾ.ಪಂ.ನಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಿ ಭರ್ತಿ ಮಾಡುವಂತೆ ಸಲ್ಲಿಸಿರುವ ವರದಿಯನ್ವಯ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.
ಕಬಕ ಗ್ರಾ.ಪಂ. 1ನೇ ವಾರ್ಡ್ ಚುನಾವಣೆಯಲ್ಲಿ ಪುತ್ತೂರು ನಗರಸಭೆಯ ಕಮ್ಯುನಿಟಿ ಅಫೆಕ್ಸ್ ಆಫೀಸರ್ ಚಂದ್ರಕುಮಾರ್ ಎ. ಚುನಾವಣಾಧಿಕಾರಿ ಹಾಗೂ ಗ್ರಾ.ಪಂ.ನ ಪಿಡಿಒ ಆಶಾ ಇ. ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
34ನೇ ನೆಕ್ಕಿಲಾಡಿ ಗ್ರಾ.ಪಂ.ನ 2ನೇ ವಾರ್ಡ್‌ಗೆ ಪುತ್ತೂರು ತಾ.ಪಂ. ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ನವೀನ ಭಂಡಾರಿ ಅವರು ಚುನಾವಣಾಧಿಕಾರಿ ಹಾಗೂ ಗ್ರಾ.ಪಂ.ಪಿಡಿಒ ಜಯಪ್ರಕಾಶ್ ಎಂ. ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮತದಾರರೆಷ್ಟು?
ಕಬಕ ಗ್ರಾ.ಪಂ.ನ 1ನೇ ವಾರ್ಡ್‌ನ್ನು 2 ಬೂತ್‌ಗಳಾಗಿ ವಿಭಾಜಿಸಲಾಗಿದೆ. ಒಂದು ವಾರ್ಡ್‌ನಲ್ಲಿ 1,300ಕ್ಕಿಂತ ಅಧಿಕ ಮತದಾರರಿದ್ದರೆ ಅದನ್ನು ಎರಡು ಬೂತ್‌ಗಳಾಗಿ ವಿಭಾಗಿಸಲಾಗುತ್ತದೆ. ಒಂದರಲ್ಲಿ 427 ಪುರುಷರು ಹಾಗೂ 395 ಮಹಿಳೆಯರು ಸೇರಿ ಒಟ್ಟು 822 ಮತದಾರರಿದ್ದಾರೆ. ಮತ್ತೂಂದರಲ್ಲಿ 363 ಪುರುಷರು ಹಾಗೂ 365 ಮಹಿಳೆಯರು ಸೇರಿ 728 ಮತದಾರರಿದ್ದಾರೆ. ಹೀಗಾಗಿ ಈ ಒಂದು ವಾರ್ಡ್‌ನಲ್ಲಿ 1,550 ಮತದಾರರಿದ್ದಾರೆ. ನೆಕ್ಕಿಲಾಡಿ ಗ್ರಾ.ಪಂ.ನ 2ನೇ ವಾರ್ಡ್‌ನಲ್ಲಿ 495 ಪುರುಷರು ಹಾಗೂ 477 ಮಹಿಳೆಯರು ಸೇರಿ ಒಟ್ಟು 972 ಮತದಾರರಿದ್ದಾರೆ.
ವಾರ್ಡ್‌ಗಳಿಗೆ ಮಾತ್ರ ಅನ್ವಯ
ಲೋಕಸಭಾ ಚುನಾವಣಾ ಫಲಿತಾಂಶ ಮೇ 23ಕ್ಕೆ ಪ್ರಕಟಗೊಂಡರೂ ಮೇ 27ರ ವರೆಗೆ ನೀತಿಸಂಹಿತೆ ಇರುತ್ತದೆ. ಬಳಿಕ ಉಪಚುನಾವಣೆ ನಡೆಯುವ ಗ್ರಾ.ಪಂ.ನ ವಾರ್ಡ್‌ಗಳಿಗೆ ಮಾತ್ರ ನೀತಿಸಂಹಿತೆ ಅನ್ವಯವಾಗುತ್ತದೆ. ಹೀಗಾಗಿ ಆ ಸಂದರ್ಭ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುವಂತಿಲ್ಲ.
– ಡಾ| ಪ್ರದೀಪಕುಮಾರ್, ತಹಶೀಲ್ದಾರ್, ಪುತ್ತೂರು
ಚುನಾವಣಾ ವೇಳಾಪಟ್ಟಿ
ಮೇ 13 ದ.ಕ. ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟ.
ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.
ಮೇ 17 ನಾಮಪತ್ರ ಪರಿಶೀಲನೆ
ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಮೇ 29 ಬೆಳಗ್ಗ 7ರಿಂದ ಸಂಜೆ 5ರ ವರೆಗೆ ಮತದಾನ
ಮೇ 30 ಅಗತ್ಯವಿದ್ದರೆ ಮರುಮತದಾನ
ಮೇ 31 ಮತ ಎಣಿಕೆ ಹಾಗೂ ಚುನಾವಣಾ ಪ್ರಕ್ರಿಯೆ ಮುಕ್ತಾಯ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.