ಜು. 2ರೊಳಗೆ ವರದಿ ಕೇಳಿದ ಲೋಕಾಯುಕ್ತ
Team Udayavani, Jun 19, 2018, 2:01 PM IST
ಸುಳ್ಯ: ಕರ್ನಾಟಕ-ಕೇರಳ ಸಂಪರ್ಕ ಕಲ್ಪಿಸುವ ಕಾಂತಮಂಗಲ ಸೇತುವೆ ದುರಸ್ತಿಗೆ ಸಂಬಂಧಿಸಿ ಪಂಚಾಯತ್‌ರಾಜ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಜು. 2ರೊಳಗೆ ವರದಿ ನೀಡುವಂತೆ ಲೋಕಾಯುಕ್ತ ಸಂಸ್ಥೆ ಲಿಖಿತ ಸೂಚನೆ ನೀಡಿದೆ.
ಈ ಕುರಿತು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್‌ಟಿಐ ಅಡಿ ಈ ಮಾಹಿತಿ ನೀಡಿದ್ದಾರೆ. ಸುಳ್ಯ-ಅಜ್ಜಾವರ-ಮಂಡೆಕೋಲು ರಸ್ತೆಯ ಈ ಸೇತುವೆ ದುಸ್ಥಿತಿ ಬಗ್ಗೆ ಲೋಕಾಯುಕ್ತರಿಗೆ 2017 ನ. 11ರಂದು ಡಿ.ಎಂ. ಶಾರೀಕ್ ದೂರು ಸಲ್ಲಿಸಿದ್ದರು. ಈ ಬಗ್ಗೆ ಲೋಕಾಯುಕ್ತರು ತುರ್ತು ದುರಸ್ತಿಗೆ ಸೂಚನೆ ನೀಡಿದ್ದರು. ಅದರಂತೆ ಪಂಚಾಯತ್‌ರಾಜ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ತಂಡದ ಸಹಕಾರದೊಂದಿಗೆ ಗುಣಮಟ್ಟ ಪರಿಶೀಲನೆ ನಡೆಸಿದ್ದರು. ಸೇತುವೆ ಮೇಲ್ಪದರ, ಕಬ್ಬಿಣದ ಪ್ಲೇಟು ಮರು ಅಳವಡಿಸಿದರೆ, ದುರಸ್ತಿ ಸಾಧ್ಯವಿದ್ದು, 5 ಲಕ್ಷ ರೂ. ಅಂದಾಜು ವೆಚ್ಚ ತಗಲಬಹುದು ಎಂದು ಉತ್ತರ ಸಲ್ಲಿಸಲಾಗಿತ್ತು.
ಬಾರದ ಅನುದಾನ
ಪಂಚಾಯತ್‌ರಾಜ್ ಎಂಜಿನಿಯರ್ ಇಲಾಖೆ 5 ಲಕ್ಷ ರೂ.ವೆಚ್ಚ ಅಂದಾಜು ಪಟ್ಟಿ ತಯಾರಿಸಿ, ಜಿಲ್ಲಾಧಿಕಾರಿ ಅವರಿಗೆ ಅನುದಾನ ಬಿಡುಗಡೆ ಕೋರಿ ಪತ್ರ ಬರೆದಿತ್ತು. ಅನುದಾನ ಕೋರಿ ಬರೆದ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ. ಇದಕ್ಕೆ ಇಲಾಖಾ ಎಂಜಿನಿಯರ್ ತಿಳಿಸಿದ್ದಾರೆ. ಹೀಗಾಗಿ ಮತ್ತೆ ಲೋಕಾಯುಕ್ತ ಸಂಸ್ಥೆಗೆ ಕಾರ್ಯ ವಿಳಂಬದ ಬಗ್ಗೆ ಸಾರ್ವಜನಿಕರ ವತಿಯಿಂದ ಗಮನ ಸೆಳೆಯಲಾಗಿತ್ತು. ಹೀಗಾಗಿ ಪಂಚಾಯತ್ ರಾಜ್ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಲೋಕಾಯುಕ್ತ ವರದಿ ಕೇಳಿದೆ.
ಇಲಾಖೆ ಕೆಲಸ ಮಾಡಬೇಕು: ಶಾಸಕರಿಂದ ತರಾಟೆ
ತಾ.ಪಂ.ನಲ್ಲಿ ಸೋಮವಾರ ನಡೆದ ಪಾಕೃತಿಕ ವಿಕೋಪ ಕುರಿತಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ನವೀನ್ ರೈ ಮೇನಾಲ ವಿಷಯ ಪ್ರಸ್ತಾವಿಸಿದರು. ಕಾಂತಮಂಗಲ ಸೇತುವೆ ಶಿಥಿಲವಾಗಿದ್ದು, ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸುಬೋಧ್ ಶೆಟ್ಟಿ ಮೇನಾಲ ಅವರು ಧ್ವನಿಗೂಡಿಸಿದರು.
ಪಂಚಾಯತ್‌ರಾಜ್ ಇಲಾಧಿಕಾರಿ ಚೆನ್ನಪ್ಪ ಮೊಲಿ, ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಈ ಬಗ್ಗೆ ನಮ್ಮಲ್ಲಿ ವರದಿ ಕೇಳಿತ್ತು. ಲೋಕಯುಕ್ತರ ಸೂಚನೆ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ, 5 ಲಕ್ಷ ರೂ. ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ಅನುದಾನ ಬಂದಿಲ್ಲ ಎಂದರು.ಶಾಸಕ ಎಸ್. ಅಂಗಾರ ಪ್ರತಿಕ್ರಿಯಿಸಿ, ಲೋಕಾಯುಕ್ತ ವರದಿ ಕೇಳಬಹುದಷ್ಟೆ. ಕೆಲಸ ಮಾಡಲು ಸಾಧ್ಯವಿಲ್ಲ. ಅದನ್ನು ನೀವು ಮಾಡಬೇಕು. ಅನುದಾನ ಇಲ್ಲದಿದ್ದರೆ, ಬೇರೆ ಮೂಲದಿಂದ ಭರಿಸಬೇಕು. ಪತ್ರಿಕೆಗಳಲ್ಲಿ ಬಂದ ಮೇಲೆ ಎಚ್ಚೆತ್ತುಕೊಳ್ಳುವುದಲ್ಲ. ನಿಮ್ಮ ನಿರ್ಲಕ್ಷ್ಯದಿಂದ ನಮಗೆ ಕೆಟ್ಟ ಹೆಸರು ಬರುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ತಾ.ಪಂ. ಇಒ ಮಧು ಕುಮಾರ್ ಮಾತನಾಡಿ, ಈ ಬಾರಿ ಜಿಲ್ಲಾಡಳಿತಕ್ಕೆ ಪಾಕೃತಿಕ ವಿಕೋಪ ನಿರ್ವಹಣೆಗೆ ಬೇಕಾದಷ್ಟು ಅನುದಾನ ಬಂದಿದೆ. ಮಳೆಗಾಲದಲ್ಲಿ ಅಪಾಯ ಉಂಟಾಗುವ ರಸ್ತೆ, ಸೇತುವೆಗಳ ಪಟ್ಟಿ ತಯಾರಿಸಿ, ಕಳುಹಿಸಿದರೆ ಅನುದಾನ ದೊರಯಬಹುದು ಎಂದು ಸಲಹೆ ನೀಡಿದರು. ಅನುದಾನಕ್ಕೆ ಎಸ್ಟಿಮೇಟ್ ತಯಾರಿಸಿ, ಡಿಸಿ ಅವರಿಗೆ ಕಳುಹಿಸುವುದಾಗಿ ಅಧಿಕಾರಿ ಭರವಸೆ ನೀಡಿದರು. ತತ್ ಕ್ಷಣವೇ ಸೇತುವೆ ದುರಸ್ತಿಗೆ ಶಾಸಕ ಅಂಗಾರ ಅವರು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.