Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
ಮೊದಲ ಹಂತ 18 ಲ.ರೂ.ನಲ್ಲಿ ಗುರುವಾಯನಕೆರೆಯಿಂದ ಕೆಲಸ ಆರಂಭ
Team Udayavani, Nov 20, 2024, 8:29 AM IST
ಮಡಂತ್ಯಾರು: ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯು ಪುತ್ತೂರು ಮತ್ತು ಬೆಳ್ತಂಗಡಿ ಪಟ್ಟಣಗಳನ್ನು ಬೆಸೆಯುವ ಪ್ರಮುಖ ರಸ್ತೆಯಾಗಿದೆ.
ಇದು ನಿತ್ಯ ನೂರಾರು ಜನ ಸಂಚರಿಸುವ, ಹಲವಾರು ವಾಹನಗಳು ಓಡಾಡುವ ರಸ್ತೆಯಾಗಿದ್ದರೂ ಸಂಪೂರ್ಣ ಹದಗೆಟ್ಟು ಗುಂಡಿಗಳು ಸೃಷ್ಟಿಯಾಗಿ ಸಂಚಾರ ದುಸ್ತರ ಎನಿಸಿತ್ತು. ಅಂತಹ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಇದೀಗ ಆರಂಭವಾಗಿದ್ದು ಮೊದಲ ಹಂತದಲ್ಲಿ ಸುಮಾರು 18 ಲಕ್ಷ ರೂ. ಮಂಜೂರಾಗಿದೆ ಎಂದು ಹೇಳಲಾಗಿದೆ. ಕಾಮಗಾರಿ ಆರಂಭವಾಗಿರುವುದರಿಂದ ಪ್ರಯಾಣಿಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಈ ರಸ್ತೆ ಅವ್ಯವಸ್ಥೆ ಬಗ್ಗೆ ಅ.16ರಂದು ಸುದಿನ ದಲ್ಲಿ ಇಲ್ಲಿ ಎಲ್ಲಿಂದ ಹೋದರೂ ಹೊಂಡಕ್ಕೆ ಬೀಳಬೇಕು… ಎಂಬ ಶೀರ್ಷಿಕೆಯಡಿ ಸಚಿತ್ರ ಸುದ್ದಿ ಪ್ರಕಟಿಸಿ ಆಡಳಿತವನ್ನು ಎಚ್ಚರಿಸಲಾಗಿತ್ತು. ಇದೀಗ ಮಳೆ ಕಡಿಮೆ ಆಗುತ್ತಿದ್ದಂತೆ ರಸ್ತೆಗೆ ತೇಪು ಕಾರ್ಯ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.