ಮಡಪ್ಪಾಡಿ: ನಿರೀಕ್ಷೆಗಳ ತವರೂರು

ರಸ್ತೆ ಅವ್ಯವಸ್ಥೆ, ನೆಟ್‌ವರ್ಕ್‌ ಸಮಸ್ಯೆ; ಹಳದಿ ರೋಗ, ನಕ್ಸಲ್‌ ಬಾಧಿತ ಗ್ರಾಮ

Team Udayavani, Dec 18, 2019, 4:07 AM IST

cv-29

ಸುಳ್ಯ: ತಾಲೂಕಿನ ಎರಡನೇ ಅತಿ ದೊಡ್ಡ ಗ್ರಾಮ ಮಡಪ್ಪಾಡಿ ತನ್ನ ವ್ಯಾಪ್ತಿಯಷ್ಟೇ ವಿಸ್ತಾರವಾದ ಸಮಸ್ಯೆಗಳನ್ನು ಕೂಡ ಮಡಿಲೊಳಗೆ ತುಂಬಿಕೊಂಡಿದೆ. ರಸ್ತೆ ಅವ್ಯವಸ್ಥೆ, ನೆಟ್‌ವರ್ಕ್‌ ಸಮಸ್ಯೆ, ಅಡಿಕೆಗೆ ಹಳದಿ ರೋಗ, ನಕ್ಸಲ್‌ ಬಾಧಿತ ಹೀಗೆ ಹತ್ತಾರು ಸವಾಲುಗಳೊಂದಿಗೆ ದಿನದೂಡುವ ಸ್ಥಿತಿ ಇಲ್ಲಿನವರದ್ದು. 1987ರಲ್ಲಿ ಕುಗ್ರಾಮ ಎಂಬ ಹಣೆಪಟ್ಟಿ ಹೊಂದಿದ್ದ ಈ ಊರು ಕಾಲ ಕ್ರಮೇಣ ಅಭಿವೃದ್ಧಿಗೆ ಒಗ್ಗಿಕೊಂಡರೂ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ ಅನ್ನುವುದಕ್ಕೆ ಗ್ರಾಮದ ಸಮಸ್ಯೆಗಳ ಪಟ್ಟಿಯೇ ಸಾಕ್ಷಿ.

ಮಡಪ್ಪಾಡಿ ಗ್ರಾಮ
ಶೇ. 83.43ರಷ್ಟು ಹಸುರು ಸಂಪತ್ತು ಆವೃತವಾಗಿರುವ ಈ ಗ್ರಾಮ ತಾಲೂಕಿನ ಎರಡನೆ ಅತಿ ದೊಡ್ಡ ಗ್ರಾಮ ಎಂಬ ಹೆಗ್ಗಳಿಕೆ ಹೊಂದಿದೆ. 5559.39 ಹೆಕ್ಟೇರ್‌ ವಿಸ್ತೀರ್ಣದ ಗ್ರಾಮದಲ್ಲಿ 4648.70 ಹೆಕ್ಟೇರ್‌ ಅರಣ್ಯವೇ ತುಂಬಿಕೊಂಡಿದೆ. ದೇವಚಳ್ಳ, ಮರ್ಕಂಜ, ಕೊಲ್ಲಮೊಗ್ರು ಗ್ರಾಮ ಸುತ್ತಲಿಂದ ಆವರಿಸಿಕೊಂಡಿವೆ. 2011ರ ಜನಗಣತಿ ಪ್ರಕಾರ ಇಲ್ಲಿ 1,757 ಜನಸಂಖ್ಯೆ ಇದೆ. ಮಡಪ್ಪಾಡಿ, ಬಲ್ಕಜೆ, ಹಾಡಿಕಲ್ಲಿನಲ್ಲಿ ಪ್ರಾಥಮಿಕ ಶಾಲೆ, ಎರಡು ಅಂಗನವಾಡಿ ಕೇಂದ್ರಗಳಿವೆ. ಗ್ರಾ.ಪಂ. ಕಚೇರಿ, ಸಹಕಾರಿ ಸಂಘ ಮೊದಲಾದ ಕೇಂದ್ರಗಳು ಇಲ್ಲಿವೆ. ಮಾಯಿಲಕೋಟೆ ಎಂಬ ಚಾರಣ ಸ್ಥಳವೂ ಇಲ್ಲಿದೆ. ಅಡಿಕೆ ಕೃಷಿ ಇಲ್ಲಿನ ಜನರ ಪ್ರಮುಖ ಆರ್ಥಿಕ ಬೆನ್ನೆಲುಬು. ದೇವಸ್ಥಾನ ಇಲ್ಲದಿದ್ದರೂ ದೈವಸ್ಥಾನವೇ ಇಲ್ಲಿನ ಭಕ್ತಿಯ ಕೇಂದ್ರ.

ರಸ್ತೆ, ನೆಟ್ ವರ್ಕ್ ಸಮಸ್ಯೆ
ಮುಖ್ಯವಾಗಿ ಇಲ್ಲಿ ದೂರವಾಣಿ ಮತ್ತು ಇಂಟರ್‌ನೆಟ್‌ ನೆಟ್ ವರ್ಕ್ ಸಮಸ್ಯೆ ಇದೆ. ಬಿಎಸ್ಸೆನ್ನೆಲ್‌ ಟವರ್‌ ಇದೆಯಾದರೂ ವಿದ್ಯುತ್‌ ಕೈ-ಕೊಟ್ಟರೆ ಅದು ಸ್ತಬ್ಧವಾಗುತ್ತದೆ. ಹೀಗಾಗಿ ದೂರವಾಣಿ ಜತೆಗೆ ಇಂಟರ್‌ನೆಟ್‌ ಸೌಲಭ್ಯಕ್ಕೆ ಇಲ್ಲಿ ನಿತ್ಯವೂ ಪರದಾಟವಿದೆ. ಗ್ರಾ.ಪಂ. ಕಚೇರಿ, ಪಡಿತರ ಅಂಗಡಿ, ಶಾಲೆಗಳಲ್ಲಿ ಇಂಟರ್‌ನೆಟ್‌ ಸಿಗದೆ ಜನರಿಗೆ ಅಗತ್ಯ ಕೆಲಸಗಳು ಆಗುತ್ತಿಲ್ಲ. ಅಲ್ಲದೆ ಗ್ರಾಮದಿಂದ ಹೊರಗಿರುವ ಜನರಿಗೆ ಅಗತ್ಯ ಸಂದರ್ಭ ಮನೆ ಮಂದಿಯನ್ನು ಸಂಪರ್ಕಿಸಲು ನೆಟ್ ವರ್ಕ್ ಅಡ್ಡಿ ಆಗುತ್ತಿದೆ.

ಗ್ರಾಮದ ಹಲವೆಡೆ ಸರ್ವಋತು ಸಂಪರ್ಕ ರಸ್ತೆಯ ಬೇಡಿಕೆ ಇದೆ. ತೀರಾ ದುರ್ಗಮ ರಸ್ತೆ ಆಗಿರುವ ಕೋಟೆಗುಡ್ಡೆ ಸಹಿತ ಹಲವೆಡೆ ಸಂಚಾರ ತ್ರಾಸದ ಸಂಗತಿ. ಕೆಲವೆಡೆ ಜೀಪು ಬಿಟ್ಟರೆ ಬೇರೆ ವಾಹನ ಸಂಚರಿಸದಷ್ಟು ರಸ್ತೆ ಹದಗೆಟ್ಟಿದೆ. ಮಲೆಕುಡಿಯ ಕುಟುಂಬಗಳು ಹೆಚ್ಚಾಗಿರುವ ಎಳುವೆ ಎಂಬ ಪ್ರದೇಶ ಸಂಪರ್ಕಕಕ್ಕೆ ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಇಲ್ಲಿ ದ್ವೀಪದಂತಹ ಸ್ಥಿತಿ ಉಂಟಾಗುತ್ತದೆ. ಕಳೆದ ವರ್ಷ ನಕ್ಸಲ್‌ ತಂಡವೊಂದು ಭೇಟಿ ನೀಡಿದ್ದಕ್ಕೆ ಊರು ಸುದ್ದಿ ಪಡೆದಿತ್ತು. ಇಂತಹ ಹತ್ತಾರು ಸಮಸ್ಯೆಗಳು ಗ್ರಾಮದಲ್ಲಿವೆ. ಮುಖ್ಯವಾಗಿ ಇಲ್ಲಿನ ರಸ್ತೆ, ಸೇತುವೆ, ಹಕ್ಕುಪತ್ರ ಕಲ್ಪಿಸಲು ಅರಣ್ಯ ಪ್ರದೇಶ ತೊಡಕಾಗಿದೆ. ಅರಣ್ಯ ಕಾಯಿದೆ ಪ್ರಕಾರ ಅರಣ್ಯ ಭೂಮಿಯಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳುವುದು ಸಲಿಸಲ್ಲ ಅನ್ನುತ್ತಾರೆ ಗ್ರಾಮದ ಕೆಲವು ನಿವಾಸಿಗಳು.

ಹಳದಿ ರೋಗದ ಭಾದೆ
ಅಡಿಕೆ ಕೃಷಿಯೇ ಇಲ್ಲಿನ ಜನರಿಗೆ ಆಧಾರ. ಈ ಕೃಷಿಗೆ ಕೆಲವು ವರ್ಷಗಳ ಹಿಂದೆ ಹಳದಿ ರೋಗ ವಕ್ಕರಿಸಿ ಜನರು ಪರ್ಯಾಯ ಉದ್ಯೋಗದತ್ತ ದೃಷ್ಟಿ ಹರಿಸಬೇಕಾದ ಸ್ಥಿತಿ ಉಂಟಾಗಿದೆ. ದಟ್ಟ ಕಾಡಿನಿಂದ ಕೃಷಿ ತೋಟಕ್ಕೆ ಆನೆ, ಮಂಗಗಳ ಕಾಟವೂ ಇದೆ. ವರ್ಷದ ಒಟ್ಟು ಫಸಲಿನಲ್ಲಿ ಹೆಚ್ಚಿನ ಪಾಲು ಕಾಡು ಪ್ರಾಣಿಗಳ ಪಾಲಾಗುತ್ತಿರುವ ಕಾರಣ ರೈತರ ಜೀವನಾಧರಕ್ಕೆ ಆತಂಕ ತಂದೊಡ್ಡಿದೆ.

ನಿರೀಕ್ಷೆ ಇದೆ
ದ.ಕ. ಜಿಲ್ಲೆ ಮತ್ತು ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಜತೆಗೂಡಿ ಡಿ. 25ರಂದು ಈ ಊರಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದಾರೆ. ಜನರೊಂದಿಗೆ ಸಂವಾದವು ಇದೆ. ಹೀಗಾಗಿ ಹಲವು ದಶಕಗಳ ಜಟಿಲ ಸಮಸ್ಯೆಗಳನ್ನು ಮುಂದಿಡಲು ಒಂದು ವೇದಿಕೆ ದೊರೆತಿದೆ. ಸಮಸ್ಯೆ ಬಗೆಹರಿಯುವ ಆಶಾವಾದವನ್ನು ಹೊಂದಿದ್ದೇವೆ.
-ಎಂ.ಡಿ. ವಿಜಯಕುಮಾರ್‌ಪ್ರಗತಿಪರ ಕೃಷಿಕ

ರಸ್ತೆ, ಸೇತುವೆ ಸಮಸ್ಯೆ
ಸೇವಾಜೆ – ಮಡಪ್ಪಾಡಿ – ಗುರುಪುರ ರಸ್ತೆ.
ಮಡಪ್ಪಾಡಿ- ಹಾಡಿಕಲ್ಲು ರಸ್ತೆ.
ಹಾಡಿಕಲ್ಲು- ನೂಜಾಲ- ಗಬಲಡ್ಕ ರಸ್ತೆ.
ಕೊಲ್ಲಮೊಗ್ರು ಜನವಸತಿ, ಆರೋಗ್ಯ ಕೇಂದ್ರ ಸಂಪರ್ಕ ರಸ್ತೆ
ಕೇವಳ – ಬಾಳೆಗುಡ್ಡೆ – ಶೀರಡ್ಕ ಸಂಪರ್ಕ ರಸ್ತೆ.
ಜೇಡಿಗುಂಡಿ – ಕಡ್ಯ – ಕೋಟೆಗುಡ್ಡೆ ರಸ್ತೆ.
ಮಡಪ್ಪಾಡಿ – ಶೀರಾಡಿ ರಸ್ತೆ.
ಹಾಡಿಕಲ್ಲು ಪ. ಪಂ. ಕಾಲನಿ ರಸ್ತೆ.
ಎಳುವೆ ಬಳಿ ಹೊಸ ಸೇತುವೆ.
ಪೂಂಬಾಡಿ, ಕಡ್ಯದ ಕುಧ್ಕುಳಿ, ದೋಣಿಪಳ್ಳ ತುಪ್ಪಟ ಸೇತುವೆ ದುರಸ್ತಿ.
ಕಂದಾಯ, ಆರೋಗ್ಯ ಸಮಸ್ಯೆ
ಕಾಡು ಆವರಿತ ಪ್ರದೇಶವಾಗಿರುವ ಕಾರಣ ಬಂದೂಕು ಡೆಪಾಸಿಟ್‌ನಿಂದ ವಿನಾಯಿತಿ ನೀಡುವುದು.
ಹಾಡಿಕಲ್ಲು ಶಾಲೆಗೆ ಪಹಣಿ ಪತ್ರ ಒದಗಿಸುವುದು.
 ಅಕ್ರಮ ಸಕ್ರಮ ಮತ್ತು 94ಸಿ ತ್ವರಿತ ವಿಲೇವಾರಿ.
ಸಂಚಾರ ಆರೋಗ್ಯ ಸೇವೆ ಒದಗಿಸುವುದು.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.