ಮಾಡಾವು ಸಬ್‌ಸ್ಟೇಷನ್‌ ಫೆಬ್ರವರಿಗೆ ಆರಂಭ?

ದಶಕದಿಂದ ಆಮೆಗತಿಯಲ್ಲೇ ಸಾಗುತ್ತಿರುವ ಕಾಮಗಾರಿ, ಈ ಬಾರಿ ಪೂರ್ಣಗೊಳ್ಳುವ ವಿಶ್ವಾಸ

Team Udayavani, Jan 23, 2020, 12:22 AM IST

led-23

ಪುತ್ತೂರು: ಸುಮಾರು 12 ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಾಡಾವು 110/11 ಕೆ.ವಿ. ವಿದ್ಯುತ್‌ ಸಬ್‌ ಸ್ಟೇಷನ್‌ ಫೆಬ್ರವರಿ ತಿಂಗಳಲ್ಲಿ ಕಾರ್ಯಾ ರಂಭಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಜನರು ಮಾತ್ರ ಇದನ್ನು ನಂಬಲು ಸಿದ್ಧರಿಲ್ಲ.

ಮೆಸ್ಕಾಂ ಪುತ್ತೂರು ವಿಭಾಗದ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿನ ವಿದ್ಯುತ್‌ ಪೂರೈಕೆ ಸಂಬಂಧಿ ಒತ್ತಡ ನಿವಾರಣೆ ಮಾಡಿ ಸಮಸ್ಯೆಗಳನ್ನು ದೂರ ಮಾಡುವ ನಿರೀಕ್ಷೆ ಈ ಸಬ್‌ಸ್ಟೇಷನ್‌ ಮೇಲಿದೆ. ದಶಕಗಳ ಹಿಂದಿನ ನಿರೀಕ್ಷೆ ಇದಾದರೂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾದ ಸುದೀರ್ಘ‌ ವಿಳಂಬ ಜನರು ನಂಬದಂತೆ ಮಾಡಿದೆ.

ವಿಳಂಬ ಏಕೆ?
ವಿದ್ಯುತ್‌ ಟವರ್‌ ಮತ್ತು ತಂತಿ ಹಾದು ಹೋಗುವಲ್ಲಿ ಪಟ್ಟಾ ಭೂಮಿ, ಅರಣ್ಯ ಪ್ರದೇಶಗಳು ಒಳಪಟ್ಟಿತ್ತು. ಈ ಕಾರಣದಿಂದ ಪರಿಹಾರದ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಹಲವು ಮಂದಿ ಪರಿಹಾರದ ದೃಷ್ಟಿಯಿಂದ ಹಾಗೂ ಅಪಾಯದ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಇತ್ತೀಚೆಗಷ್ಟೇ ಉಳಿಕೆಯಾಗಿದ್ದ ಕೊನೆಯ ವ್ಯಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ.

ಅಂತಿಮ ಹಂತ
ಮಾಡಾವು ಸಬ್‌ಸ್ಟೇಷನ್‌ ಸುಮಾರು 4 ಎಕ್ರೆಯಲ್ಲಿ ನಿರ್ಮಾಣಗೊಂಡಿದೆ. ನೆಟ್ಲಮುಟ್ನೂರಿನಿಂದ ಮಾಡಾವಿಗೆ 110 ಕೆ.ವಿ. ವಿದ್ಯುತ್‌ ಸರಬರಾಜು ಮಾಡುವ 27 ಕಿ.ಮೀ. ವಿದ್ಯುತ್‌ ಲೈನ್‌ನಲ್ಲಿ ಇನ್ನು 2.50 ಕಿ.ಮೀ. ಬಾಕಿ ಇದೆ. ಒಟ್ಟು 115 ಟವರ್‌ಗಳಲ್ಲಿ 1 ಟವರ್‌ ನಿರ್ಮಾಣಕ್ಕೆ ಬಾಕಿ ಇದೆ. ಇದರ ಫೌಂಡೇಶನ್‌ ಕೆಲಸ ಆಗಿದೆ. ಸ್ಟೇಷನ್‌ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಪರೀಕ್ಷಾ ಕೆಲಸ ನಡೆಯುತ್ತಿದೆ.

2.5 ಕೋಟಿ ರೂ. ಪರಿಹಾರ ಬಾಕಿ
ವಿದ್ಯುತ್‌ ಲೈನ್‌ ಮತ್ತು ಟವರ್‌ ನಿರ್ಮಾಣಕ್ಕಾಗಿ ಸ್ಥಳೀಯ ರೈತರ ಭೂಮಿಗೆ ಸಂಬಂಧಿಸಿ ಒಟ್ಟು 5.8 ಕೋಟಿ ರೂ. ಪರಿಹಾರ ನಿಗದಿಪಡಿಸಲಾಗಿದ್ದು, 110 ಮಂದಿಗೆ 2.5 ಕೋಟಿ ರೂ. ಪರಿಹಾರ ನೀಡಲು ಬಾಕಿ ಇದೆ. ಇದರಲ್ಲಿ 1 ಕೋಟಿ ರೂ. ಪರಿಹಾರಕ್ಕೆ ಸಂಬಂಧಿಸಿದ ಜಾಗದ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಉಳಿದ 1.5 ಕೋಟಿ ರೂ. ಪರಿಹಾರದ ದಾಖಲೆಗಳನ್ನು ಸಂಬಂಧಪಟ್ಟ ಜನರಿಂದ ಪಡೆಯುವ ಕಾರ್ಯ ನಡೆಯುತ್ತಿದೆ. ಈ ಎಲ್ಲ ದಾಖಲೆಗಳನ್ನು ಕೆಪಿಟಿಸಿಎಲ್‌ ಕಾರ್ಪೊರೆಟ್‌ ಕಚೇರಿಗೆ ನೀಡಿ ಅಲ್ಲಿಂದ ನೇರವಾಗಿ ಫಲಾನುಭವಿಗಳ ಹೆಸರಿಗೆ ಡಿಡಿ ಮಾಡಲಾಗುತ್ತದೆ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಾಡಾವು ಸಬ್‌ಸ್ಟೇಷನ್‌ ಕುರಿತು ಸಚಿವರು ಪರಿಶೀಲಿಸಿದ್ದಾರೆ. ಪರಿಹಾರ ಸಂದಾಯವಾದ ಬಳಿಕ 2.5 ಕಿ.ಮೀ. ದೂರದ ಲೈನ್‌ ಎಳೆಯುವ ಕಾರ್ಯ ಮತ್ತು 1 ಟವರ್‌ ನಿರ್ಮಾಣವನ್ನೂ ತತ್‌ಕ್ಷಣವೇ ಆರಂಭ ಮಾಡಲಿದ್ದು, ಫೆಬ್ರವರಿ ತಿಂಗಳ ಅಂತ್ಯದಲ್ಲಿ ಮಾಡಾವು ವಿದ್ಯುತ್‌ ಸಬ್‌ಸ್ಟೇಷನ್‌ ಲೋಕಾರ್ಪಣೆಗೆ ಸಿದ್ಧಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರೂ ಈ ಪರಿಹಾರ ಸಂದಾಯ ಪೂರ್ಣಗೊಳ್ಳುವುದು ಯಾವಾಗ ಎನ್ನುವ ಪ್ರಶ್ನೆಯೂ ಇದೆ.

ಮಾಡಾವು ವಿದ್ಯುತ್‌ ಸಬ್‌ಸ್ಟೇಷನ್‌ ಲೋಕಾರ್ಪಣೆಯೊಂದಿಗೆ ಸುಳ್ಯ, ಕಡಬ ತಾಲೂಕು ಮತ್ತು ಕುಂಬ್ರ, ಪಾಣಾಜೆ, ಬೆಟ್ಟಂಪಾಡಿ ಸಹಿತ ಪುತ್ತೂರು ತಾಲೂಕಿನ ಕೆಲ ಭಾಗಗಳ ವಿದ್ಯುತ್‌ ಒತ್ತಡದ ಸಮಸ್ಯೆ ಸಂಪೂರ್ಣ ಪರಿಹಾರವಾಗುವ ಆಶಾವಾದ ಈ ಭಾಗದ ರೈತರದ್ದಾಗಿದೆ.

ರಾಜೇಶ್ ಪಟ್ಟೆ

ಟಾಪ್ ನ್ಯೂಸ್

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.