ಮಡಿಕೇರಿ, ಉಡುಪಿ ಘಟಕ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಸದ್ಯವೇ ಅವಕಾಶ
Team Udayavani, May 3, 2020, 9:12 AM IST
ಸಾಂದರ್ಭಿಕ ಚಿತ್ರ
ಪುತ್ತೂರು/ಉಡುಪಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಸಂಚಾರ ಬಂದ್ ಮಾಡಿದ್ದ ಕೆಎಸ್ಸಾರ್ಟಿಸಿ ಬಸ್‌ಗಳು ಇದೀಗ ರಸ್ತೆಗಿಳಿಯುವ ಸೂಚನೆಗಳು ಕಂಡುಬಂದಿದ್ದು, ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ಮಡಿಕೇರಿ ಘಟಕ ಹಸುರು ವಲಯದಲ್ಲಿ ಇರುವ ಕಾರಣ ಜಿಲ್ಲಾಧಿಕಾರಿ ಅನುಮತಿ ಪಡೆದು ಬಸ್ ಸಂಚಾರ ವ್ಯವಸ್ಥೆಗೆ ಮುಂದಾಗುವುದಾಗಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ತಿಳಿಸಿದ್ದಾರೆ. ಸದ್ಯ ಜಿಲ್ಲಾಡಳಿತದ ಸೂಚನೆ ಬಂದಿಲ್ಲ. ಮೇ 4ರ ಬಳಿಕ ಜಿಲ್ಲಾಡಳಿತದ ಸೂಚನೆ ಬಂದರೆ ಆರಂಭಿಸಬಹುದು ಎಂದು ಉಡುಪಿ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ ಉದಯ ಕುಮಾರ ಶೆಟ್ಟಿ ತಿಳಿಸಿದ್ದಾರೆ.
ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮಾತ್ರ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಲಾ ಗುವುದು. ಹಸುರು ವಲಯದಲ್ಲಿರುವ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೂ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಆದರೆ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿಗಳ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ದ.ಕ.ದಲ್ಲಿ ಬಸ್ ಸಂಚಾರ ಇಲ್ಲ ಕೆಎಸ್ಸಾರ್ಟಿಸಿ ಉಪವಿಭಾಗದ ಪುತ್ತೂರು, ಸುಳ್ಯ, ಬಿ.ಸಿ. ರೋಡ್, ಧರ್ಮಸ್ಥಳ ಘಟಕಗಳಲ್ಲಿ ಯಾವುದೇ ಸರಕಾರಿ ಬಸ್ ಸಂಚಾರ ಸಾಧ್ಯತೆ ಇಲ್ಲ. ದ.ಕ. ಜಿಲ್ಲೆ ಪ್ರಸ್ತುತ ಕಿತ್ತಳೆ ವಲಯದಲ್ಲಿರುವ ಕಾರಣ ಇಲ್ಲಿ ಸಂಚಾರ ವ್ಯವಸ್ಥೆಗೆ ಇನ್ನೂ ಕಾಯಬೇಕು ಎಂದು ನಾಗೇಂದ್ರ ತಿಳಿಸಿದರು.
ಉಡುಪಿ ಜಿಲ್ಲೆಯಂತೆ ಹಸುರು ವಲಯವಾಗಿ ಗುರುತಿಸಿಕೊಂಡಿರುವ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಕೆಎಸ್ಸಾರ್ಟಿಸಿ ಬಸ್ ಸೇವೆಗಳು ಉಡುಪಿಯಿಂದ ಪ್ರಾರಂಭಿಸಲು ಜಿಲ್ಲಾಡಳಿತದ ನಿರ್ದೇಶನ ಬಂದಿಲ್ಲ. ಜೂ. 1ರ ಬಳಿಕ ಖಾಸಗಿ ಬಸ್ ಸಂಚಾರ ಜಿಲ್ಲಾಧಿಕಾರಿಯವರು ಶೇ. 50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯ ಬೇಕೆನ್ನುತ್ತಾರೆ. ಇದು ಕಾರ್ಯಸಾಧ್ಯವಾದ ವಿಷಯವಲ್ಲ. ಆದ್ದರಿಂದ ಜೂ. 1ರ ಬಳಿಕ ನಮ್ಮ ಬಸ್‌ಗಳನ್ನು ಓಡಿಸಲು ಚಿಂತನೆ ನಡೆಸುತ್ತೇವೆ. ಈ ಬಗ್ಗೆ ಶನಿವಾರ ನಡೆದ ಸಿಟಿ ಬಸ್ ಮತ್ತು ಕೆನರಾ ಬಸ್ ಮಾಲಕರ ಸಂಘದ ಸಭೆಯಲ್ಲಿ ನಿರ್ಣಯಿಸಿದ್ದೇವೆ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ, ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಸುರೇಶ ನಾಯಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.