ಕಡಬ: 2ನೇ ಬಾರಿ ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆ
ಮಹಾತ್ಮಾ ಗಾಂಧಿ ನರೇಗಾ ಯೋಜನೆ
Team Udayavani, May 23, 2022, 10:07 AM IST
ಕಡಬ: ಕಡಬ ತಾಲೂಕು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2021-22 ನೇ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆಯನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಾಲೂಕಿನ ವ್ಯಾಪ್ತಿಯ 21 ಗ್ರಾ.ಪಂ. ಗಳ ಮೂಲಕ ಸರಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಜನತೆಗೆ ಉದ್ಯೋಗವನ್ನು ನೀಡುತ್ತಾ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಸರಕಾರ 2021-22 ರಲ್ಲಿ 2,00,509 ಮಾನವ ದಿನ ಸೃಜಿಸುವ ವಾರ್ಷಿಕ ಗುರಿಯನ್ನು ನಿಗದಿಪಡಿಸಿತ್ತಾದರೂ, ನವೆಂಬರ್ 2021 ರಲ್ಲಿಯೇ ತಾಲೂಕು ಶೇ. 100 ಗುರಿಯನ್ನು ಸಾಧಿಸಿ ಮಾರ್ಚ್ ಅಂತ್ಯಕ್ಕೆ 2,78,081 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.139 ಸಾಧನೆಯನ್ನು ಮಾಡಿ ಜಿಲ್ಲೆಯಲ್ಲೇ ಅಧಿಕ ಗುರಿಯನ್ನು ಸಾಧಿಸಿದ ತಾಲೂಕಾಗಿ ಗುರುತಿಸಿಕೊಂಡಿದೆ.
ವೈಯಕ್ತಿಕ ಕಾಮಗಾರಿಗಳೇ ಹೆಚ್ಚು
ತಾಲೂಕಿನಲ್ಲಿ ಒಟ್ಟಾರೆ ಬಾವಿ 125, ತೋಟಗಾರಿಕಾ ಅಭಿವೃದ್ಧಿ 1362, ಆಡು ಶೆಡ್ 26, ದನದ ಹಟ್ಟಿ 284, ಹಂದಿ ಶೆಡ್ 14, ಕೋಳಿ ಶೆಡ್ 70, ಸೋಕ್ ಪಿಟ್ 219, ಕೃಷಿ ಹೊಂಡ 9, ಶೌಚಾಲಯ ನಿರ್ಮಾಣ 61, ಎರೆಹುಳು ಗೊಬ್ಬರ ಘಟಕ 40, ಮಳೆ ನೀರು ಇಂಗು ಗುಂಡಿ ಕಾಮಗಾರಿ 73, ಗೋಬರ್ ಗ್ಯಾಸ್ ಘಟಕ 12, ಮೀನುಗಾರಿಕ ಹೊಂಡ 6, ಗೊಬ್ಬರ ಗುಂಡಿ ನಿರ್ಮಾಣ 43 ಹೀಗೆ ಒಟ್ಟು 2,409 ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಕಾಮಗಾರಿಗಳಲ್ಲಿ 5 ಕಿಂಡಿ ಅಣೆಕಟ್ಟು, 1 ಅಂಗನವಾಡಿ ಕೇಂದ್ರ, 63 ಸಿ.ಸಿ. ರಸ್ತೆ, 6 ಸಾರ್ವಜನಿಕ ತೆರೆದ ಬಾವಿ, 3 ಗ್ರಾಮೀಣ ಉದ್ಯಾನವನ ನಿರ್ಮಾಣ, 50 ತೋಡಿನ ಹೂಳೆತ್ತುವ ಕಾಮಗಾರಿ, 5 ಪೌಷ್ಟಿಕ ತೋಟ ರಚನೆ, 16 ಗ್ರಾ.ಪಂ. ಹಾಗೂ ಶಾಲಾ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, 14 ಸಾರ್ವಜನಿಕ ಪ್ರದೇಶದಲ್ಲಿ ಮಳೆ ನೀರು ಇಂಗು ಗುಂಡಿ ನಿರ್ಮಾಣ, 11 ಶಾಲಾ ಆವರಣ ಗೋಡೆ ರಚನೆ, 1 ಸಂಜೀವಿನಿ ಕಟ್ಟಡ ಹೀಗೆ ಒಟ್ಟು 183 ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ವರ್ಷದಿಂದ ವರ್ಷ ಪ್ರಗತಿ
2021-22 ರಲ್ಲಿ ಒಟ್ಟು 9.80 ಕೋ.ರೂ. ಒಟ್ಟು ಅನುದಾನ ಬಳಕೆ ಮಾಡಿಕೊಂಡಿದ್ದು 8 ಕೋ.ರೂ. ಕೂಲಿ ಮೊತ್ತ ಹಾಗೂ 1.80 ಕೋ.ರೂ. ಸಾಮಗ್ರಿ ಅನುದಾನವನ್ನು ಬಳಸಿಕೊಳ್ಳಲಾಗಿದೆ. 2020-21 ನೇ ಆರ್ಥಿಕ ವರ್ಷದಲ್ಲಿ 2,49,483 ಮಾನವ ದಿನಗಳನ್ನು ಸೃಜಿಸುವ ಮೂಲಕ 6.75 ಕೋ.ರೂ ಕೂಲಿ ಹಾಗೂ 1.5 ಕೋ.ರೂ. ಸಾಮಗ್ರಿ ಒಟ್ಟು 8.25 ಕೋ.ರೂ ಅನುದಾನವನ್ನು ಪಡೆದುಕೊಳ್ಳಲಾಗಿತ್ತು.
2 ಪ್ರಶಸ್ತಿ
ನರೇಗಾ ಕಾರ್ಯ ಸಾಧನೆಗಾಗಿ ಶಿರಾಡಿ ಗ್ರಾ.ಪಂ. ಗೆ ಮತ್ತು ಯೋಜನೆಯ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್ ರಾಜ್ ಅವರಿಗೆ ನರೇಗಾ ರಾಜ್ಯ ಪ್ರಶಸ್ತಿ ದೊರೆತಿದೆ
ಗ್ರಾಮ ಪಂಚಾಯತ್‌ಗಳ ಸಾಧನೆ
ಶಿರಾಡಿ 24985, ಗೋಳಿತೊಟ್ಟು 24857, ಬೆಳಂದೂರು 23124 ಸುಬ್ರಹ್ಮಣ್ಯ 20515 ಈ 4 ಗ್ರಾ.ಪಂ. ಗಳು ಸತತ ಎರಡನೇ ವರ್ಷದಲ್ಲಿ ಅಧಿಕ ಮಾನವ ದಿನ ಸೃಜನೆಯನ್ನು ಮಾಡಿವೆ. 4 ಗ್ರಾ.ಪಂ.ಗಳ ಸಾಧನೆ ಕಡಬ ತಾಲೂಕಿನಲ್ಲಿ ಅಡಿಕೆ ಗಿಡ ನಾಟಿ ಹಾಗೂ ದನದ ಹಟ್ಟಿ ನಿರ್ಮಾಣ ಕಾಮಗಾರಿಗಳನ್ನು ಹೆಚ್ಚಾಗಿ ಅನುಷ್ಠಾ ನಗೊಳಿಸಲಾಗಿದೆ. ಕಳೆದ ವರ್ಷ ತಾಲೂಕಿನ 4 ಗ್ರಾ.ಪಂ.ಗಳು ಜಿಲ್ಲೆಯಲ್ಲೇ ಗಣನೀಯ ಕಾರ್ಯವನ್ನು ಮಾಡಿವೆ. –ನವೀನ್ ಭಂಡಾರಿ ಎಚ್., ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ.
ಸಹಕಾರ, ಶ್ರಮದಿಂದ ಸಾಧನೆ
2 ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ, ಗ್ರಾ.ಪಂ. ಆಡಳಿತ ವರ್ಗದ ಸಹಕಾರ ಮತ್ತು ನರೇಗಾ ತಂಡದ ಶ್ರಮದ ಫಲದಿಂದ ಗುರಿ ಮೀರಿ ಸಾಧನೆ ಮಾಡಲು ಸಾಧ್ಯವಾಗಿದೆ. –ಚೆನ್ನಪ್ಪ ಗೌಡ ಕಜೆಮೂಲೆ, ಸಹಾಯಕ ನಿರ್ದೇಶಕರು(ಗ್ರಾ.ಉ.), ತಾ.ಪಂ. ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.