![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 25, 2019, 5:50 AM IST
ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಶ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.
ನೆಹರೂನಗರ: ಮನುಷ್ಯ ಕೇವಲ ಜೀವಿಸುವುದಕ್ಕಿಂತ ನಮಗೆ ಲಭಿಸಿದ ಜೀವನವನ್ನು ಸಾರ್ಥಕತೆಯಿಂದ ಬದುಕುವುದು ಮುಖ್ಯ. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಥೆಗಾರ, ಸಾಹಿತಿ ಎ.ಆರ್. ಮಣಿಕಾಂತ್ ಹೇಳಿದರು.
ವಿವೇಕಾನಂದ ಮಹಾವಿದ್ಯಾಲಯದ ಲಲಿತಕಲಾ ಸಂಘ ಹಾಗೂ ಇತರ ವಿಭಾಗಗಳ ವತಿಯಿಂದ ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ಅನೇಕ ಮಂದಿ ಇದ್ದಾರೆ. ಅವರ ಅಂಗ ನೂನ್ಯತೆ ಮುಂದೆ ನಮ್ಮ ಸೌಂದರ್ಯ ಪ್ರಜ್ಞೆ ಕುರಿತು ಚಿಂತಿಸುತ್ತೇವೆ. ಆದರೆ ಆ ನ್ಯೂನತೆಯ ವ್ಯಕ್ತಿ ಸಮರ್ಥವಾದ ಹಾಗೂ ಸಾಧನೆಯನ್ನು ಮಾಡುವ ಮೂಲಕ ಸಾರ್ಥಕ್ಯ ಜೀವನವನ್ನು ನಡೆಸುತ್ತಾನೆ. ಅದನ್ನೇ ನಾವು ನಮ್ಮ ಜೀವನ ಸ್ಫೂರ್ತಿಯಾಗಿ ಕಾಣಬೇಕು ಎಂದರು. ಸಾಧನೆಯ ಕಥೆಗಳ ಮೂಲಕ ಜೀವನ ವನ್ನು ಸಮರ್ಥವಾಗಿ ಎದುರಿಸಬಹುದು ಎನ್ನುವುದನ್ನು ವಿವರಿಸಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಸ್ಫೂರ್ತಿಯ ಕೃತಿಗಳು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯುಎಸಿ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್ ಎಚ್.ಜಿ. ಮಾತನಾಡಿ, ಮಾನವೀಯ ಮೌಲ್ಯ ನೀಡುವ ಹಲವು ಕಥೆ, ಕೃತಿಗಳು ಎಲ್ಲರಿಗೂ ಸ್ಫೂರ್ತಿ. ಮನುಷ್ಯತ್ವದ ಮೌಲ್ಯಗಳನ್ನು ತಿಳಿಸುವ ನುಡಿಚಿತ್ರಗಳಂತಹ ನೈಜ ಘಟನೆಗಳ ಬರವಣಿಗೆಗಳು ಪ್ರತಿಯೊಬ್ಬರಿಗೂ ಜೀವನವನ್ನು ಯಾವ ರೀತಿಯಾಗಿ ನಡೆಸಬೇಕು ಎನ್ನುವ ಮಾದರಿಯನ್ನು ಒದಗಿಸುತ್ತವೆ ಎಂದವರು ತಿಳಿಸಿದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.