Puttur ಸಹಕಾರಿ ಸಂಸ್ಥೆಯ ವ್ಯವಸ್ಥಾಪಕ ಆತ್ಮಹತ್ಯೆ
Team Udayavani, Dec 4, 2023, 9:00 PM IST
ಪುತ್ತೂರು/ಬಡಗನ್ನೂರು: ಸಹಕಾರಿ ಸಂಸ್ಥೆಯೊಂದರ ವ್ಯವಸ್ಥಾಪಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ. 3ರಂದು ಬೆಳಕಿಗೆ ಬಂದಿದೆ.
ಬಡಗನ್ನೂರು ಗ್ರಾಮದ ಪಟ್ಟೆ ಮಾನಿಂಜೆ ನಿವಾಸಿ ಪ್ರೀತಂ ಎನ್. (26) ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಐದು ವರ್ಷಗಳಿಂದ ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಉದ್ಯೋಗದಲ್ಲಿದ್ದ ಪ್ರೀತಂ ಅವರು ಮೂರು ವರ್ಷಗಳಿಂದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಂದೂವರೆ ವರ್ಷ ಮಂಗಳೂರು ಶಾಖೆಯಲ್ಲಿ ವ್ಯವಸ್ಥಾಪಕರಾಗಿದ್ದು, ಕಳೆದೊಂದು ವರ್ಷದಿಂದ ಸುಳ್ಯದ ನೂತನ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರೀತಂ ಅವರು ಡಿ. 2ರಂದು ಕೆಲಸ ಮುಗಿಸಿ ಪಟ್ಟೆಯ ಮನೆಗೆ ಬಂದಿದ್ದರು. ನಾಳೆ ಮೂಡಬಿದಿರೆಯಲ್ಲಿ ತರಬೇತಿ ಇದ್ದು, ಬೇಗ ಎಬ್ಬಿಸುವಂತೆ ತಾಯಿಗೆ ತಿಳಿಸಿ ಪ್ರೀತಂ ಅವರು ಕೋಣೆಯಲ್ಲಿ ಮಲಗಿದ್ದರು. ಡಿ. 3ರಂದು ಬೆಳಗ್ಗೆ 6 ಗಂಟೆಗೆ ಪ್ರೀತಂ ಅವರನ್ನು ಎಚ್ಚರಿಸಲೆಂದು ತಾಯಿ ಆತ ಮಲಗಿದ್ದ ಕೋಣೆಗೆ ಹೋದಾಗ ಅಲ್ಲಿ ಪ್ರೀತಂ ಇರಲಿಲ್ಲ. ಮನೆಯ ಅಂಗಳದ ಬಾವಿ ಬಳಿ ಚಪ್ಪಲಿ ಮತ್ತು ಮೊಬೈಲ್ ಫೋನ್ ಕಂಡುಬಂದಿತ್ತು. ತತ್ಕ್ಷಣ ಅಗ್ನಿ ಶಾಮಕದವರನ್ನು ಕರೆಯಿಸಿ ಪರಿಶೀಲಿಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಜೀವನದಲ್ಲಿ ಜುಗುಪ್ಸೆಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಸಂಪ್ಯ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ. ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.