ಹರಾಜಾದರೂ ಹಸ್ತಾಂತರವಾಗದ ಮಾರುಕಟ್ಟೆ ಕಟ್ಟಡ
Team Udayavani, May 31, 2019, 5:50 AM IST
ಬೆಳ್ತಂಗಡಿ: ನಗರ ಪಂಚಾಯತ್‌ಗೆ ಒಳಪಟ್ಟ ಸಂತೆಕಟ್ಟೆ ನೂತನ ಮಾರುಕಟ್ಟೆ ಕಾಮಗಾರಿ ಅವಧಿ ಪೂರ್ಣಗೊಂಡರೂ ಕಟ್ಟಡ ಹಸ್ತಾಂತರಕ್ಕೆ ಮೀನಮೇಷ ಎಣಿಸುತ್ತಿದೆ. ಸಂತೆಕಟ್ಟೆ ಈಗಿರುವ ಮಾರುಕಟ್ಟೆ ಪ್ರದೇಶದಲ್ಲಿ ನಗರ ಪಂಚಾಯತ್‌ನಿಂದ ಎರಡು ಅಂತಸ್ತಿತ ಹೊಸ ಕಟ್ಟಡ ನಿರ್ಮಾಣಕ್ಕೆ 2017ರಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಇದರಂತೆ 2017ರ ಡಿಸೆಂಬರ್‌ನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 29 ಂಗಡಿ ಮಳಿಗೆಯ ಕೆಳಅಂತಸ್ತು ನಿರ್ಮಾಣದ ಜವಾಬ್ದಾರಿ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು.
ಏಲಂ ಆದರೂ ಕಟ್ಟಡ ಖಾಲಿ
ಯೊಜನೆಯಂತೆ 6ರಿಂದ 9 ತಿಂಗಳೊಳಗಾಗಿ ನಗರ ಪಂಚಾಯತ್‌ಗೆ ಕಟ್ಟಡ ಹಸ್ತಾಂತರಿಸಿ ಏಲಂ ಮಾಡಬೇಕಿತ್ತು. ಆದರೆ ಏಲಂ ಪ್ರಕ್ರಿಯೆ ನಡೆದಿದ್ದರೂ ಕಟ್ಟಡ ಹಸ್ತಾಂತರ ಪ್ರಕ್ರಿಯೆಗೆ ದಿನ ಕೂಡಿ ಬಂದಿಲ್ಲ. ಈಗಾಗಲೇ ವ್ಯಾಪಾರಿಗಳು ಏಲಂನಲ್ಲಿ ಅಂಗಡಿಯೊಂದಕ್ಕೆ 1.50ರಿಂದ 2 ಲಕ್ಷ ರೂ. ವೆಚ್ಚ ಭರಿಸಿ ಕಾದಿರಿಸಿದ್ದಾರೆ. ಆದರೆ ಮಳೆಗಾಲಕ್ಕೂ ಮುನ್ನ ಹಸ್ತಾಂತರಿಸಬೇಕಿದ್ದ ಕೊಠಡಿಗಳು ಧೂಳು ಹಿಡಿಯುತ್ತಿವೆ. ಅವಧಿ ಪ್ರಕಾರ 2018ರ ಮೇ ಒಳಗಾಗಿ ಕಟ್ಟಡ ನಿರ್ಮಾಣ ಸಹಿತ ಹಸ್ತಾಂತರ ಪ್ರಕ್ರಿಯೆಮುಗಿದಿರಬೇಕಿತ್ತು. ಆದರೆ ವಿಳಂಬವಾಗುತ್ತಲೇ ಇದೆ.
29 ಅಂಗಡಿ ಮಳಿಗೆ ಹರಾಜು
ಆರಂಭದಲ್ಲಿ 28 ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದು, ಬಳಿಕ ವಿಸ್ತರಿಸಿ ಒಟ್ಟು 29 ಮಳಿಗೆಗಳನ್ನು ಅಂತಿಮಗೊಳಿಸಲಾಗಿದೆ. ಕಳೆದೆರಡು ತಿಂಗಳ ಹಿಂದೆ ನಗರ ಪಂಚಾಯತ್ ಏಲಂ ಪ್ರಕ್ರಿಯೆ ಪೂರ್ಣಗೊಳಿಸಿ ವ್ಯಾಪಾರಸ್ಥರಿಗೆ ಹಂಚಿದೆ. 5 ಅಂಗಡಿಗಳನ್ನು ಹಿಂದಿದ್ದ ನಗರ ಪಂಚಾಯತ್ ಹಳೇ ಕಟ್ಟಡದ ಬಾಡಿಗೆದಾರರಿಗೆ ನೀಡಲಾಗಿದೆ.
ನೀತಿಸಂಹಿತೆ ಅಡ್ಡಿ
– ಹರೀಶ್ ಪೂಂಜ ಶಾಸಕರು
ಕಾಮಗಾರಿ ಪೂರ್ಣ
ಕಟ್ಟಡಕ್ಕೆ ನೀರಿನ ಸಂಪರ್ಕ ವ್ಯವಸ್ಥೆ ಇನ್ನಷ್ಟೇ ಪೂರ್ಣಗೊಳ್ಳಬೇಕಾಗಿದೆ. ವಿದ್ಯುತ್ ಸಂಪರ್ಕ ನೀಡಲಾಗಿದ್ದರೂ ಕೆಲವು ಗೋಡೆಗಳಲ್ಲಿ ತೆರೆದ ಹಂತದಲ್ಲೇ ಇದೆ. ಈ ನಡುವೆ ನಗರ ಪಂ.ಜೂ. 15ರ ಒಳಗಾಗಿ ಹಸ್ತಾಂತರ ಮಾಡು ವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದೆ. ಆದರೆ ವ್ಯಾಪಾರಿಗಳಿಗೆ ಮಳೆಗಾಲದಲ್ಲಿ ಬಿಟ್ಟುಕೊಟ್ಟಲ್ಲಿ ಹಳೇ ಕಟ್ಟಡದಿಂದ ವಸ್ತುಗಳನ್ನು ಸ್ಥಳಾಂತರಿಸಲು ಕಷ್ಟವಾಗುತ್ತದೆ ಎಂಬ ಕೂಗು ಕೇಳಿ ಬಂದಿದೆ.
2 ಶೌಚಾಲಯ
ಅಂಗಡಿದಾರರಿಗೆ ಎರಡು ಶೌಚಾಲಯ ನಿರ್ಮಿಸಲಾಗಿದ್ದು, ಪುರುಷ-ಮಹಿಳಾ ಶೌಚಾಲಯ ಒದಗಿಸಲಾಗಿದೆ. ಇದರ ನಿರ್ವಹಣೆಯೇ ಸವಾಲಾಗಿದೆ. ಈಗಿರುವ ಹಳೇ ಮಾರುಕಟ್ಟೆ ಸ್ಥಳದಲ್ಲಿರುವ ಶೌಚಾಲಯ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಮಾರುಕಟ್ಟೆಗೆ ಸಾವಿರಾರು ಜನ ಬಂದು ಹೋಗುವುದರಿಂದ ಹೊಸ ಶೌಚಾಲಯದ ನಿರ್ವಹಣೆ ಸವಾಲಾಗಿದೆ.
ನೀರಿನ ವ್ಯವಸ್ಥೆ
ನಿರ್ಮಿತಿ ಕೇಂದ್ರದಿಂದ ಕಟ್ಟಡ ಒಂದೊಮ್ಮೆ ನಗರ ಪಂಚಾಯತ್‌ಗೆ ಹಸ್ತಾಂತರಿಸಿದರೆ ನೀರಿನ ವ್ಯವಸ್ಥೆ ನೀಡಲಾಗುವುದು. ಬಳಿಕ ವ್ಯಾಪಾರಿಗಳಿಗೆ ಶೀಘ್ರವೇ ಅಂಗಡಿ ಕೊಠಡಿ ಲೈಸೆನ್ಸ್, ಒಪ್ಪಂದ ಪತ್ರ ನೀಡಲಾಗುವುದು.
– ಮಹಾವೀರ ಆರಿಗ ನಗರ ಪಂಚಾಯತ್ ಎಂಜಿನಿಯರ್
•ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.