Bantwal: ಮಟ್ಕಾ ಚೀಟಿ ದಂಧೆ; ಇಬ್ಬರ ವಿರುದ್ಧ ಪ್ರಕರಣ
Team Udayavani, Nov 30, 2024, 8:15 PM IST
ಬಂಟ್ವಾಳ: ಬಂಟ್ವಾಳ ಬೈಪಾಸಿನ ಹೋಟೆಲೊಂದರ ಸಮೀಪದಲ್ಲಿ ಮಟ್ಕಾ ಚೀಟಿ ದಂಧೆ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೋಳಿಯಾರು ನಿವಾಸಿ ಅಬೂಬಕ್ಕರ್ ಹಾಗೂ ಸಜೀಪಮೂಡ ನಿವಾಸಿ ದಿನೇಶ್ಕುಮಾರ್ ಪ್ರಕರಣದ ಆರೋಪಿಗಳಾಗಿದ್ದಾರೆ. ಆರೋಪಿಗಳು ಅಂಕೆ ಸಂಖ್ಯೆಗಳ ಮೇಲೆ ಹಣವನ್ನು ಪಣವನ್ನಾಗ್ಗಿಟ್ಟುಕೊಂಡು ಅಕ್ರಮವಾಗಿ ಮಟ್ಕಾ ಚೀಟಿ ದಂಧೆಯಲ್ಲಿ ತೊಡಗಿರುವ ಕುರಿತ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ನಗರ ಠಾಣಾ ಪಿಎಸ್ಐ ರಾಮಕೃಷ್ಣ ಹಾಗೂ ಸಿಬಂದಿ ದಾಳಿ ನಡೆಸಿದ್ದಾರೆ.
ಇಬ್ಬರು ಆರೋಪಿಗಳು ಸಹಿತ 2,850 ರೂ. ನಗದು ಹಾಗೂ ಮಟ್ಕಾ ಚೀಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.