![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 23, 2022, 9:27 AM IST
ಪುತ್ತೂರು: ತಾಲೂಕಿನ ಏಕೈಕ ಮೌಲಾನಾ ಆಜಾದ್ ಮಾದರಿ ಶಾಲೆಗೆ ಸಾಲ್ಮರದಲ್ಲಿ ನೂತನವಾಗಿ ನಿರ್ಮಿ ಸುತ್ತಿರುವ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು 3 ತಿಂಗಳೊಳಗೆ ಕಾರ್ಯಾರಂಭಕ್ಕೆ ಸಿದ್ಧಗೊಳ್ಳಲಿದೆ.
ಈ ಶೈಕಣಿಕ ವರ್ಷದಲ್ಲಿ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ಅಂತಿಮ ಹಂತದ ಕಾಮಗಾರಿಯು ಬಿರುಸು ಪಡೆದಿದೆ. ಈಗ ತಾತ್ಕಾಲಿಕ ಕಟ್ಟಡದಲ್ಲಿ ಶೈಕ್ಷಣಿಕ ತರಗತಿ ನಡೆಯುತ್ತಿದೆ.
ಎರಡು ಅಂತಸ್ತಿನ ಕಟ್ಟಡ
ಸಾಲ್ಮರ ದೇವರಾಜ ಅರಸು ಭವನದ ಸನಿಹದಲ್ಲಿ 2.35 ಕೋ. ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಬಣ್ಣ ಬಳಿಯುವ ಕೆಲಸ, ಇನ್ನಿತರ ಸಣ್ಣ ಪುಟ್ಟ ಕಾರ್ಯ ಪ್ರಗತಿಯಲ್ಲಿದೆ. 6 ನೇ ತರಗತಿ ಯಿಂದ 10 ನೇ ತರಗತಿ ತನಕದ ಕೊಠಡಿ, ಶಿಕ್ಷಕರ, ಮುಖ್ಯ ಶಿಕ್ಷಕರ ಕೊಠಡಿ, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲಾಗಿದೆ.
ಐದು ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಶಾಲೆ ತಾತ್ಕಾಲಿಕ ನೆಲೆಯಲ್ಲಿ ನೆಲ್ಲಿಕಟ್ಟೆ ಹಳೆ ಶಾಲಾ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದೆ. ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆಯಡಿಯಲ್ಲಿ ಈ ಶಾಲೆ ಇದ್ದು ಶಿಕ್ಷಣ ಇಲಾಖೆ ಮೂಲಕ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 8ರಿಂದ 10ನೇ ತರಗತಿ ತನಕ ಒಟ್ಟು 249 ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಈ ಬಾರಿಯ ಎಸೆ ಸೆಲ್ಸಿ ಪರೀಕ್ಷೆ ಬರೆದ 39 ವಿದ್ಯಾ ರ್ಥಿಗಳು ಸೇರಿ ದ್ದಾರೆ. ಈ ಬಾರಿ 8ನೇ ತರಗತಿಗೆ ಹೊಸ ದಾಗಿ ಸೇರ್ಪಡೆಯ ಬಳಿಕ ಒಟ್ಟು ಸಂಖ್ಯೆಯಲ್ಲಿ ಹೆಚ್ಚಳ ವಾಗ ಲಿದೆ ಎನ್ನುತ್ತಾರೆ ಶಾಲಾ ಮುಖ್ಯಗುರು ಅವಿನಾಶ್.
ಏನಿದು ಮೌಲಾನ್ ಆಜಾದ್ ಶಾಲೆ?
ಅಲ್ಪಸಂಖ್ಯಾಕ ಮಕ್ಕಳನ್ನು ಮರಳಿ ಶಾಲೆಗೆ ತರಲು ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಆರಂಭಿಸಲಾಗಿತ್ತು. ಅನಂತರ ವಸತಿ ಸಹಿತ ಶಾಲೆಯ ಮಾದರಿಯಲ್ಲೇ ವಸತಿ ರಹಿತ ಶಾಲೆ ಆರಂಭಿಸಿ 6 ನೇ ತರ ಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭಿಸಿ 10ನೇ ತರಗತಿವರೆಗೆ ವಿಸ್ತರಿಸಲಾಯಿತು. ಈ ಶಾಲೆಗಳಲ್ಲಿ ಶೇ. 75ರಷ್ಟು ಸೀಟ್ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಕ್ಖ್, ಪಾರ್ಸಿ ವಿದ್ಯಾರ್ಥಿಗಳಿಗೆ, ಶೇ. 25ರಷ್ಟು ಪ.ಜಾತಿ, ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.
ಉದ್ಘಾಟನೆಗೆ ಸಿದ್ಧತೆ
ಸಾಲ್ಮರದಲ್ಲಿ ನಿರ್ಮಾಣ ಹಂತದಲ್ಲಿರುವ ಮೌಲಾನ್ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮೂರು ತಿಂಗಳಲ್ಲಿ ಕಾರ್ಯಾರಂಭಕ್ಕೆ ಬಿಟ್ಟು ಕೊಡುವಂತೆ ಸೂಚನೆ ನೀಡಲಾಗಿದೆ. ಸುಸಜ್ಜಿತ ಕಟ್ಟಡ ಮೂಲ ಸೌಕರ್ಯ ವ್ಯವಸ್ಥೆ ಒದಗಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಿಸಲು ಆದ್ಯತೆ ನೀಡಲಾಗಿದೆ. –ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಕೊನೆಯ ಹಂತ
ಜಿಲ್ಲೆಯಲ್ಲಿ ಒಟ್ಟು ಎಂಟು ಮೌಲಾನ್ ಆಜಾದ್ ಮಾದರಿ ಶಾಲೆಗಳಿವೆ. ಪುತ್ತೂರಿನ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮುಕ್ತಾಯದ ಹಂತದಲ್ಲಿ ಇದೆ. ಉದ್ಘಾಟನೆ ಅನಂತರ ತರಗತಿಗಳು ಹೊಸ ಕಟ್ಟಡದಲ್ಲಿ ಪ್ರಾರಂಭಗೊಳ್ಳಲಿದೆ. –ಅಂಜನಪ್ಪ, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ದ.ಕ.
You seem to have an Ad Blocker on.
To continue reading, please turn it off or whitelist Udayavani.