ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್-ಕಲ್ಲಡ್ಕ ಟ್ರಾಫಿಕ್ ಜಾಮ್
Team Udayavani, May 22, 2022, 9:59 PM IST
ಬಂಟ್ವಾಳ: ಸಾಮಾನ್ಯ ವಾಗಿ ರಜಾದಿನವಾದರೆ ಹೆದ್ದಾರಿಗಳ ಸಹಿತ ಬಹುತೇಕ ರಸ್ತೆಗಳು ಖಾಲಿ ಇರುತ್ತವೆ. ಆದರೆ ಮೇ 22ರ ರವಿವಾರ ಶುಭ ಸಮಾರಂಭಗಳು ನಿಬಿಡವಾಗಿದ್ದ ಪರಿಣಾಮ ಎಲ್ಲೆಡೆ ಟ್ರಾಫಿಕ್ ಜಾಮ್ ಕಂಡುಬಂದಿತ್ತು.
ಬಿ.ಸಿ.ರೋಡು- ಅಡ್ಡಹೊಳೆ ರಾ. ಹೆದ್ದಾರಿ ಯನ್ನು ಅಭಿವೃದ್ಧಿಗಾಗಿ ಅಗೆ ಯಲಾಗಿದ್ದು, ರವಿವಾರ ಸಂಜೆಯ ವರೆಗೂ ಟ್ರಾಫಿಕ್ ಜಾಮ್ ಇತ್ತು.
ಮೆಲ್ಕಾರ್ ಜಂಕ್ಷನ್‌ನಲ್ಲಿ ಮುಡಿಪು ಭಾಗದಿಂದ ಬರುವ ರಸ್ತೆಯೂ ಕೂಡಿಕೊಳ್ಳುತ್ತಿದ್ದು, ಒಂದು ಬದಿ ಹೆದ್ದಾರಿ ಅಗೆದು ಗೊಂದಲಮಯ ಸ್ಥಿತಿ ಇದೆ. ಹೀಗಾಗಿ ವಾಹನಗಳ ಅಡ್ಡಾದಿಡ್ಡಿ ಚಲನೆಯಿಂದ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು.
ಆ್ಯಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ತೊಂದರೆ ಆಗಿದ್ದು, ಬಳಿಕ ಸಾರ್ವಜನಿಕರೇ ರಸ್ತೆಗಿಳಿದು ವಾಹನಗಳಿಗೆ ಸೂಚನೆ ನೀಡಿ ಸರಾಗ ಸಂಚಾರಕ್ಕೆ ಸಹಕರಿಸಿದರು.
ಗುರುವಾಯನಕೆರೆಯಲ್ಲೂ
ಬೆಳ್ತಂಗಡಿ: ಗುರುವಾಯನಕೆರೆ ಯಲ್ಲಿ ರವಿವಾರ ಮಧ್ಯಾಹ್ನ ವಿಪರೀತ ವಾಹನ ದಟ್ಟಣೆಯಿಂದ ತಾಸುಗಟ್ಟಲೆ ಸಂಚಾರಕ್ಕೆ ಅಡಚಣೆಯಾಯಿತು.
ಬೆಳ್ತಂಗಡಿವರೆಗೂ ವಾಹನಗಳು ಸಾಲುಗಟ್ಟಿದ್ದವು. ಬೆಳ್ತಂಗಡಿಯಂದ ಗುರುವಾಯನ ಕೆರೆಗೆ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ತಗಲುತ್ತಿತ್ತು. ನಿರಂತರ ಮಳೆಯೂ ಸುರಿಯುತ್ತಿದ್ದ ಕಾರಣ ವಾಹನ ಸವಾರರು ಇನ್ನಷ್ಟು ಸಮಸ್ಯೆ ಎದುರಿಸುವಂತಾಯಿತು.
ಗುರುವಾಯನ ಕೆರೆಯಲ್ಲಿ ಆ್ಯಂಬುಲೆನ್ಸ್ ಒಂದು ಟ್ರಾಫಿಕ್ ಜಾಮ್ ನಡುವೆ ಸಿಲುಕಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.