Vogga ಸಮೀಪದ ಮೇನಾಡು: ನಗ-ನಗದು ದೋಚಿದ ಪ್ರಕರಣ: ಆರೋಪಿಗಳ ಪತ್ತೆಗೆ ಸಿಸಿ ಕೆಮರಾಗಳ ಪರಿಶೀಲನೆ
Team Udayavani, Jan 13, 2024, 1:08 AM IST
ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಸಮೀಪದ ಮೇನಾಡುನಲ್ಲಿ ಜ. 11ರ ಮುಂಜಾನೆ ತಂಡವೊಂದು ತಾಯಿ-ಮಗಳಿಗೆ ಚಾಕು ತೋರಿಸಿ 3.20 ಲಕ್ಷ ರೂ. ಮೌಲ್ಯದ ನಗ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಸಿಸಿ ಕೆಮರಾಗಳನ್ನು ಪರಿಶೀಲಿಸುವ ಜತೆಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರ ಮಾರ್ಗದರ್ಶನದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿ ಕೆಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಯು ಬಿ.ಸಿ.ರೋಡು-ಕಡೂರು ಹೆದ್ದಾರಿ ಬದಿಯಲ್ಲೇ ನಡೆದಿದ್ದು, ದರೋಡೆಕೋರರು ಹೆದ್ದಾರಿಯಲ್ಲೇ ಸಾಗಿದ್ದಾರೋ ಅಥವಾ ಒಳ ರಸ್ತೆಗಳನ್ನು ಬಳಸಿ ಪರಾರಿಯಾಗಿದ್ದಾರೋ ಎಂಬುದರ ಕುರಿತು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಒಂದು ವೇಳೆ ಹೆದ್ದಾರಿಯಲ್ಲೇ ಪರಾರಿ ಆಗಿದ್ದರೆ ಘಟನೆಯು ಮುಂಜಾನೆಯ ವೇಳೆ ನಡೆದಿರುವುದರಿಂದ ಆ ವೇಳೆ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಕಡಿಮೆ ಇದ್ದು, ಕಳ್ಳರ ಪತ್ತೆಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಜತೆಗೆ ಸ್ಥಳೀಯರಿಂದ ಈ ಕುರಿತು ಮಾಹಿತಿಯನ್ನೂ ಕಲೆ ಹಾಕುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.
ದರೋಡೆಕೋರರನ್ನು ಶೀಘ್ರ ಬಂಧಿಸುವ ಕುರಿತು ಪೊಲೀಸ್ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.