Menstrual Cup; 75 ಪ.ಪೂ. ಕಾಲೇಜುಗಳ 11,263 ಮಕ್ಕಳಿಗೆ ವಿತರಣೆ ಪೂರ್ಣ
ದ.ಕ.ಜಿಲ್ಲೆಯಲ್ಲಿ ಮೈತ್ರಿ ಮುಟ್ಟಿನ ಕಪ್ ಯೋಜನೆ ಪ್ರಾಯೋಗಿಕ ಯಶಸ್ವಿ
Team Udayavani, Nov 17, 2023, 11:18 PM IST
ಬೆಳ್ತಂಗಡಿ: ಸರಕಾರಿ ಪದವಿಪೂರ್ವ ಕಾಲೇಜಿನ ಹೆಣ್ಣುಮಕ್ಕಳ ನೈರ್ಮಲ್ಯಕ್ಕಾಗಿ ರಾಜ್ಯ ಸರಕಾರವು “ಶುಚಿ’ ಕಾರ್ಯಕ್ರಮದಡಿ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಆಯ್ಕೆ ಮಾಡಿ ಮೈತ್ರಿ ಮುಟ್ಟಿನ ಕಪ್ ವಿತರಣೆ ನಡೆಸುತ್ತಿದ್ದು, ಪ್ರಾಯೋಗಿಕ ಯಶ ಸಾಧಿಸಿದೆ.
ಯೋಜನೆಯಡಿ ಸರಕಾರವು ಮುಂದುವರಿದ ಜಿಲ್ಲೆಯೆಂಬ ನೆಲೆಯಲ್ಲಿ ದ.ಕ. ಮತ್ತು ಹಿಂದುಳಿದ ಜಿಲ್ಲೆಯೆಂಬ ನೆಲೆಯಲ್ಲಿ ಚಾಮರಾಜ ಜಿಲ್ಲೆಯನ್ನು ಆಯ್ಕೆ ಮಾಡಿತ್ತು. ಫಲಿತಾಂಶವನ್ನು ಅವಲೋಕಿಸಿ ರಾಜ್ಯಾ ದ್ಯಂತ ವಿಸ್ತರಿಸುವುದು ಸರಕಾರದ ಉದ್ದೇಶ. ವಿಶೇಷವೆಂದರೆ ಇಂತಹ ಯೋಜನೆ ಪರಿಚಯಿಸಿದ ಮೊದಲ ರಾಜ್ಯವೆಂಬ ಹೆಮ್ಮೆ ಕರ್ನಾಟಕದ್ದು.
ದ.ಕ.ದಲ್ಲಿ ಆರಂಭದಲ್ಲಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಶೇ. 28 ಉತ್ತಮ ಸ್ಪಂದನೆ ದೊರೆತ ಬಳಿಕ ಜಿಲ್ಲೆಯ ಒಟ್ಟು 54 ಸರಕಾರಿ ಹಾಗೂ 21 ಅನುದಾನಿತ ಸೇರಿ ಒಟ್ಟು 75 ಪದವಿ ಪೂರ್ವ ಕಾಲೇಜುಗಳ 16ರಿಂದ 18 ವರ್ಷ ವಯಸ್ಸಿನ 11,263 ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ (Menstrual Cup) ವಿತರಿಸುವ ಕಾರ್ಯಕ್ರಮ ನ. 10ಕ್ಕೆ ಪುತ್ತೂರಿನ ಕೊಂಬೆಟ್ಟಿನಲ್ಲಿ ನೀಡುವ ಮೂಲಕ ಪೂರ್ಣಗೊಂಡಿದೆ.
ಸ್ತ್ರೀಯರು ಮಾಸಿಕ ಋತುಸ್ರಾವದ ಸಮಯದಲ್ಲಿ ಪ್ಯಾಡ್‌ಗಳಿಗೆ ಪರ್ಯಾಯವಾಗಿ ಬಳಸಬಹುದಾದ ಒಂದು ಸಾಧನ ಇದು. ಋತುಸ್ರಾವದ ಸಮಯದಲ್ಲಿ ಯಾವುದೇ ಕೆಲಸಕ್ಕೂ ಅಡ್ಡಿಯಾಗಬಾರದು ಎನ್ನುವ ನೆಲೆಯಲ್ಲಿ ಸರಕಾರವು ಈ ಮೂಲಕ ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಣ ನೀಡಲು ಮುಂದಾಗಿದೆ. ಇದಕ್ಕಾಗಿ ಪೋಷಕರ ಜತೆಗೂಡಿ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಆಯಾ ತಾಲೂಕಿನ ಆರೋಗ್ಯ ಇಲಾಖೆಯ ಸಿಬಂದಿ, ಸಂಪನ್ಮೂಲ ವ್ಯಕ್ತಿ, ಸಮುದಾಯ ಆರೋಗ್ಯ ಅಧಿಕಾರಿ, ಕೌನ್ಸಿಲರ್ ತಂಡವಾಗಿ ಪ.ಪೂ. ಕಾಲೇಜುಗಳಿಗೆ ಒಟ್ಟು 6 ಬಾರಿ ತೆರಳಿ ತಲಾ 2 ತಾಸುಗಳ ತರಬೇತಿ ಹಾಗೂ ಮಾಹಿತಿ ನೀಡಿದ ಬಳಿಕ ಕಪ್ ವಿತರಣೆ ಮಾಡಲಾಗಿದೆ.
ಸ್ಯಾನಿಟರಿ ಪ್ಯಾಡ್, ಟ್ಯಾಂಪೂನ್ ಇತ್ಯಾದಿಗಳ ಬದಲಾಗಿ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್ ವಿತರಿಸುವ ಮೂಲಕ ಪೋಷಕರ ಮೂಢನಂಬಿಕೆ ಹಾಗೂ ಭಯವನ್ನು ಹೋಗಲಾಡಿಸಿ ಮಕ್ಕಳ ಒತ್ತಡವನ್ನು ಕಡಿಮೆ ಮಾಡುವುದು, ಮುಟ್ಟಿನ ಕಾರಣಕ್ಕೆ ಬಾಲಕಿಯರು ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯದೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಯೋಜನೆಯ ಉದ್ದೇಶ. ಶೇ. 100 ಬಾಲಕಿಯರು ಇದನ್ನು ಉಪಯೋಗಿಸಬೇಕು ಎಂಬುದು ಸರಕಾರದ ಉದ್ದೇಶ. ಈ ಯೋಜನೆಯಲ್ಲಿ ದ.ಕ. ಜಿಲ್ಲೆ ಶೇ. 89ರಷ್ಟು ಪ್ರಾಯೋಗಿಕ
ಯಶಸ್ಸು ಕಂಡಿದೆ.
– ಡಾ| ರಾಜೇಶ್,
ಸಂತಾನ ಉತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ, ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.