ಲಕ್ಷಾಂತರ ರೂ. ವೆಚ್ಚದ ಎಸ್‌ಐ ವಸತಿಗೃಹ ಅನಾಥ
ಮೂಲ ಸೌಕರ್ಯ ನೆಪ; ವಾಸ್ತವ್ಯಕ್ಕೆ ಹಿಂದೇಟು
Team Udayavani, Jun 26, 2020, 5:42 AM IST
ಪುತ್ತೂರು: ನಗರ ವ್ಯಾಪ್ತಿಯಲ್ಲಿನ ವಿವಿಧ ಠಾಣೆಗಳ ಎಸ್‌ಐಗಳಿಗೆ ವಾಸಕ್ಕೆಂದು 3 ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಬನ್ನೂರಿನಲ್ಲಿ ನಿರ್ಮಿಸಲಾದ ವಸತಿಗೃಹ ವಾಸ್ತವ್ಯ ಇಲ್ಲದ ಕಾರಣ ಅನಾಥ ಸ್ಥಿತಿಯಲ್ಲಿದೆ.ಬನ್ನೂರು ಬಲಮುರಿ ಗಣಪತಿ ದೇವಸ್ಥಾನ ಸನಿಹ ನಿರ್ಮಿಸಿದ ವಸತಿಗೃಹದಲ್ಲಿ ವಾಸ್ತವ್ಯಕ್ಕೆ ಎಸ್‌ಐಗಳು ಮನಸ್ಸು ಮಾಡುತ್ತಿಲ್ಲ. ಕುಟುಂಬದ ವಾಸಕ್ಕೆ ಪೂರಕ ಮೂಲ ಸೌಕರ್ಯ ಇಲ್ಲಿಲ್ಲ ಎನ್ನುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಮೂರು ಕಡೆ ವಸತಿಗೃಹ
ಸಾಮೆತ್ತಡ್ಕ, ಸಂಪ್ಯ ಹಾಗೂ ಬನ್ನೂರಿನಲ್ಲಿ ಒಟ್ಟು 15 ಕೋ.ರೂ. ಅಂದಾಜು ವೆಚ್ಚದಲ್ಲಿ ಪೊಲೀಸ್ ಸಿಬಂದಿ ಹಾಗೂ ಎಸ್‌ಐ ಕುಟುಂಬ ವಾಸಕ್ಕೆ ವಸತಿಗೃಹ ನಿರ್ಮಿಸಲಾಗಿತ್ತು. ಈಗಾಗಲೇ ಸಾಮೆತ್ತಡ್ಕ ಮತ್ತು ಸಂಪ್ಯ ವಸತಿಗೃಹಗಳಲ್ಲಿ ಪೊಲೀಸ್ ಸಿಬಂದಿ ವಾಸ್ತವ್ಯ ಹೂಡಿದ್ದಾರೆ.
ಬನ್ನೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ 25 ಸೆಂಟ್ಸ್ ನಿವೇಶನದಲ್ಲಿ 850 ಚದರ ಅಡಿ ವಿಸ್ತೀರ್ಣದ ಕೆಳ ಮತ್ತು ಮೇಲಂತಸ್ತು ಹೊಂದಿರುವ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೊಲೀಸ್ ಹೌಸಿಂಗ್ ಬೋರ್ಡ್ ನಿರ್ಮಿಸಿದ ಈ ಕಟ್ಟಡ ನಿರ್ಮಾಣದ ಒಂದು ವರ್ಷದ ಬಳಿಕ, 2018ರ ಸೆ. 20ಕ್ಕೆ ಪುತ್ತೂರು ಉಪವಿಭಾಗದ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಯಿತು. ವಿದ್ಯುತ್, ಕೊಳವೆ ಬಾವಿ ಮತ್ತಿತರ ಸೌಕರ್ಯ ಒದಗಿಸಲಾಗಿದೆ.
ಪುತ್ತೂರು ನಗರ ಠಾಣೆ, ಸಂಚಾರಿ ಠಾಣೆ, ಮಹಿಳಾ ಠಾಣೆಗಳಲ್ಲಿ 4 ಮಂದಿ ಎಸ್.ಐ.ಗಳು ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಸಬ್‌ಇನ್‌ಸ್ಪೆಕ್ಟರ್ ಹಾಗೂ ಅವರ ಕುಟುಂಬದ ವಾಸಕ್ಕೆ ಈ ವಸತಿಗೃಹ ನಿರ್ಮಿಸಲಾಗಿದೆ. ಆವರಣಗೋಡೆ ಇಲ್ಲದಿರುವುದರಿಂದ ಹಾಗೂ ಇಡೀ ಕುಟುಂಬ ವಾಸ ಮಾಡಲು ಎಲ್ಲ ವ್ಯವಸ್ಥೆಗಳು ಇಲ್ಲಿಲ್ಲ ಎಂಬ ಕಾರಣದಿಂದ ಪ್ರವೇಶಕ್ಕೆ ಎಸ್‌ಐಗಳು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
ಪಾಳು ಬಿದ್ದ ಸ್ಥಿತಿ
ಕಳೆದ ಮೂರು ವರ್ಷಗಳಿಂದ ಖಾಲಿ ಬಿದ್ದಿರುವ ಕಾರಣ ಕಟ್ಟಡ ಪಾಳು ಬಿದ್ದ ಸ್ಥಿತಿಗೆ ತಲುಪಿದೆ. ಬಾಗಿಲು ಭದ್ರವಾಗಿಲ್ಲ. ಒಳಭಾಗದಲ್ಲಿ ಸ್ವತ್ಛತೆ ಇಲ್ಲ. ಬೀದಿ ಸುತ್ತಾಡುವ ಪ್ರಾಣಿಗಳಿಗೆ ಆವಾಸ ತಾಣವಾಗಿ ಬದಲಾಗುತ್ತಿದೆ. ವಿದ್ಯುತ್ ಸಂಪರ್ಕ ಇರುವ ಕಾರಣ ಬಿಲ್ ಕೂಡ ಬರುತ್ತಿದೆ. ಕಟ್ಟಡ ಸೂಕ್ತ ರೀತಿಯಲ್ಲಿ ಬಳಕೆ ಆಗದಿದ್ದರೆ ಅದು ಅನ್ಯ ಚಟುವಟಿಕೆಯ ತಾಣವಾಗಿ ಕೂಡ ಬದಲಾಗುವ ಅಪಾಯ ಉಂಟಾಗಿದೆ.
ಅಗತ್ಯ ಕ್ರಮ
ಬನ್ನೂರಿನ ಎಸ್‌ಐ ವಸತಿಗೃಹದ ಕುರಿತು ಸಂಬಂಧಿಸಿದವರ ಜತೆ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಸಂಜೀವ ಮಠಂದೂರು, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.