ಬೆಳ್ತಂಗಡಿಯ 292 ಮತಗಟ್ಟೆಗಳಲ್ಲಿ ಮತದಾನ ಆರಂಭ: ಶಾಸಕ ಹರೀಶ್ ಪೂಂಜ ಮತದಾನ
Team Udayavani, Dec 27, 2020, 8:31 AM IST
ಬೆಳ್ತಂಗಡಿ: ತಾಲೂಕಿನಲ್ಲಿ 46 ಗ್ರಾ.ಪಂ.ಗಳ 634 ಸ್ಥಾನಗಳಿಗೆ 292 ಮತಗಟ್ಟೆಗಳಲ್ಲಿ ಮುಂಜಾನೆ 7ಗಂಟೆಯಿಂದಲೇ ಮತದಾನ ಆರಂಭಗೊಂಡಿದೆ. ಶಾಸಕ ಹರೀಶ್ ಪೂಂಜ ಅವರು ಕುಟುಂಬ ಸಮೇತರಾಗಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
46 ಗ್ರಾ.ಪಂ.ಗಳ ಒಟ್ಟು 631 ಸ್ಥಾನಗಳ ಪೈಕಿ ಒಟ್ಟು 6 ಗ್ರಾ.ಪಂ.ಗಳ 7 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಪ್ರಸಕ್ತ 624 ಸ್ಥಾನಗಳಿಗೆ ರವಿವಾರ ಮತದಾನ ಆರಂಭಗೊಂಡಿದೆ.
ಬೆಳ್ತಂಗಡಿ ತಾಲೂಕಿನ 2,04205 ಮತದಾರರು ಇಂದು ಒಟ್ಟು 1439 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಚಳಿ ಮಧ್ಯೆಯೂ ಉತ್ಸಾಹದಿಂದ ಮುಂಜಾನೆಯೇ ಮತದಾನಕ್ಕೆ ಸರತಿ ಸಾಲು ಕಂಡುಬಂತು.
1605 ಮಂದಿ ಸಿಬಂದಿ ನೇಮಕ
ಒಟ್ಟು 1605 ಮಂದಿ ಮತಗಟ್ಟೆ ಸಿಬಂದಿಗಳನ್ನು ನೇಮಿಸಲಾಗಿದೆ. ಮತಗಟ್ಟೆ ಅಧಿಕಾರಿ-321 (ಪಿಆರ್‌ಒ), ಒಂದನೇ ಮತಗಟ್ಟೆ ಅಧಿಕಾರಿ-321 (ಎಪಿಆರ್‌ಒ), 2ನೇ, 3ನೇ ಮತಗಟ್ಟೆ ಅಧಿಕಾರಿ- 642, ಡಿ ಗ್ರೂಪ್ ಸಿಬಂದಿ- 321 ಒಟ್ಟು 1605 ಮಂದಿ ನೇಮಿಸಲಾಗಿದೆ.
20 ಸೆಕ್ಟರ್
ಚುನಾವಣೆಗೆ 46 ಗ್ರಾಮ ಪಂಚಾಯಿತಿಗಳನ್ನು 20 ಸೆಕ್ಟರ್ ಆಗಿ ವಿಂಗಡಿಸಲಾಗಿದೆ. ಈಗಾಗಲೇ ಅತೀ ಸೂಕ್ಷ್ಮ, ಸೂಕ್ಷ್ಮ ಮತಗಟ್ಟೆಗಳಿವೆ. ವೇಣೂರು ಹಾಗೂ ಬೆಳ್ತಂಗಡಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಎಎನ್‌ಎಫ್ 2 ತಂಡ ಕಾರ್ಯಾಚರಣೆ ನಡೆಸಿದೆ.
ಇದನ್ನೂ ಓದಿ:ಗ್ರಾ.ಪಂ. ಚುನಾವಣೆ: ಎರಡನೇ ಹಂತದ ಮತದಾನ ಆರಂಭ
1 ಡಿವೈಎಸ್ಪಿ, 2 ಸಿಪಿಐ, 8 ಪಿಎಸ್‌ಐ, 12 ಎಎಸ್‌ಐ, 22 ಮಂದಿ ಎಚ್‌ಸಿ ಮತ್ತು ಪಿಸಿಗಳು 92 ಹಾಗೂ 170 ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್ ಪಿ ಒಂದು ತಂಡ ಮತ್ತು ಜಿಲ್ಲಾ ಸಶಸ್ತ್ರ ಪಡೆಗಳು 4 ತಂಡಗಳು ಚುನಾವಣೆಗೆ ನಿಯೋಜಿಸಲಾಗಿದೆ.
ಮದುವೆ ಸಂಭ್ರಮದ ಮಧ್ಯೆ ಬಂದು ಮತಹಾಕಿದ ಸಹೋದರಿಯರು
ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಇಬ್ರಾಹಿಂ ಕೂಳೂರು ಅವರ ಇಬ್ಬರು ಮಕ್ಕಳಾದ ಝುಹುರಾ ಮತ್ತು ಖೈರುನ್ನಿಸಾ ಸಹೋದರಿಯರು ತಮ್ಮದೇ ಮದುವೆ ಸಂಭ್ರಮದ ಮಧ್ಯೆ ಮುಂಡಾಜೆ ಗ್ರಾಮದ 103 ಭಾಗ ಸಂಖ್ಯೆಯ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಸಾಮಾಜಿಕ ಬದ್ಧತೆ ಮೆರೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.