ಜಾಲ್ಸೂರು: ಶಾಸಕ ರಾಮದಾಸ್ ಕಾರು ಅಪಘಾತ: ಅಪಾಯದಿಂದ ಪಾರಾದ ಶಾಸಕ
Team Udayavani, Aug 23, 2019, 9:30 AM IST
ಸುಳ್ಯ: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ರಾಮದಾಸ್ ಅವರ ಕಾರು ಜಾಲ್ಸೂರಿನಲ್ಲಿ ರಸ್ತೆ ಪಕ್ಕದ ಮೋರಿಗೆ ಢಿಕ್ಕಿ ಹೊಡೆದು, ಕಾರು ಚಾಲಕ ಹಾಗೂ ಶಾಸಕರು ಅಪಾಯದಿಂದ ಪಾರಾದ ಘಟನೆ ಆ.23ರಂದು ಮುಂಜಾನೆ ಸಂಭವಿಸಿದೆ.
ಶಾಸಕ ರಾಮದಾಸ್ ಅವರು ಮೈಸೂರಿನಿಂದ ಸುಳ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಕಾರು ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಗೆ ಮುಂಜಾನೆ 7.15ರ ಸುಮಾರಿಗೆ ತಲುಪಿದಾಗ ಕಾರು ಚಾಲಕನಿಗೆ ನಿದ್ರೆ ಆವರಿಸಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಗೇಟಿನ ಬಳಿಯಿರುವ ಮೋರಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಶಾಸಕ ರಾಮದಾಸ್ ಅವರಿಗೆ ಅಲ್ಪ ಸ್ವಲ್ಪ ಗಾಯಗೊಂಡರು.
ಈ ಸಂದರ್ಭದಲ್ಲಿ ಅಲ್ಲಿಯೇ ಸಮೀಪದ ಪೆಟ್ರೊಲ್ ಪಂಪ್ ನಲ್ಲಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸಹೋದರ ದಿ. ಭಾಸ್ಕರ ಗೌಡರ ಪುತ್ರ ಆಶಿಕ್ ಅವರು ಶಾಸಕ ರಾಮ್ ದಾಸ್ ಅವರನ್ನು ತಮ್ಮ ಕಾರಿನಲ್ಲಿ ಸುಳ್ಯದ ಆಸ್ಪತ್ರೆ ಕರೆತಂದರು ಎಂದು ತಿಳಿದುಬಂದಿದೆ.
ಅಪಾಯದಿಂದ ಪಾರು
ವಾಹನ ಅಪಘಾತದಲ್ಲಿ ಗಾಯಗೊಂಡಿರುವ ಮೈಸೂರು ಕೆ.ಆರ್.ನಗರ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕೆ.ವಿ.ಚಿದಾನಂದ ಹೇಳಿದ್ದಾರೆ.
ರಾಮದಾಸ್ ಅವರು ಕಾರಿನ ಹಿಂದಿನ ಸೀಟಲ್ಲಿ ಕುಳಿತಿದ್ದರು. ಸೀಟ್ ಬೆಲ್ಟ್ ಧರಿಸಿದ್ದರು. ಅಪಘಾತ ನಡೆದಾಗ ಏರ್ ಬ್ಯಾಗ್ ಓಪನ್ ಆಗಿದೆ. ಸೀಟ್ ಬೆಲ್ಟ್ ಧರಿಸಿದ್ದುದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಆದರೆ ಎದೆಗೆ ತೀವ್ರ ಒತ್ತಡ ಬಿದ್ದಂತಾಗಿದ್ದು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ಚಿಕಿತ್ಸೆ ನೀಡಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಶಾಸಕ ಎಸ್ ಅಂಗಾರ ಆಸ್ಪತ್ರೆಗೆ ಭೇಟಿ. ಆರೋಗ್ಯ ವಿಚಾರಣೆ ನಡೆಸಿದರು. ಹಿಂದೂ ಸಂಘಟನೆ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅವರು ಕೂಡ ಭೇಟಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.