ಶಾಸಕರ ಕಚೇರಿ “ಶ್ರಮಿಕ’ ಇದೀಗ ಉದ್ಯೋಗ ಕೇಂದ್ರ
ಉದ್ಯೋಗಾಕಾಂಕ್ಷಿಗಳಿಗಿಲ್ಲ ಇನ್ನು ನಿರಾಶೆ; ಮಾದರಿ ಪ್ರಯತ್ನಕ್ಕೆ ಮೆಚ್ಚುಗೆ
Team Udayavani, Dec 15, 2019, 5:18 AM IST
ಬೆಳ್ತಂಗಡಿ: ಇಲ್ಲಿನ ಶಾಸಕ ಹರೀಶ್ ಪೂಂಜ ತಮ್ಮ ಕಚೇರಿ “ಶ್ರಮಿಕ’ದಲ್ಲಿ ವಿನೂತನ ಯೋಜನೆಯೊಂದನ್ನು ಹಮ್ಮಿಕೊಂಡಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳಿದ್ದು, ವಿದ್ಯಾರ್ಥಿಗಳು ಉದ್ಯೋಗ ಅರಸಿ ಕಂಪೆನಿಯಿಂದ ಕಂಪೆನಿಗೆ ಅಲೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಉದ್ಯೋಗಾಕಾಂಕ್ಷಿಗಳು ಅನೇಕ ಸಮಸ್ಯೆ ಎದುರಿಸುವುದನ್ನು ಮನಗಂಡು ಉದ್ಯೋಗ ಸಂಸ್ಥೆಗಳನ್ನೇ ತಾಲೂಕಿಗೆ ಕರೆಸುವ ಪ್ರಯತ್ನ ಮೆಚ್ಚುಗೆ ಪಡೆದಿದೆ.
ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಅರಸುತ್ತಿರುವ ಉದ್ಯೋಗಾ ರ್ಥಿಗಳು ಶಾಸಕರ ಕಚೇರಿ ಶ್ರಮಿಕ ಸಂಪರ್ಕಿಸಿದಲ್ಲಿ ಅವರಿಗೆ ಹೊಂದಾಣಿಕೆ ಯಾಗುವ ಸೂಕ್ತ ಉದ್ಯೋಗದ ವ್ಯವಸ್ಥೆ ಕಲ್ಪಿಸಲಿದೆ. ಪ್ಲೇಸ್‌ಮೆಂಟ್ ಅಗತ್ಯತೆ ಇರುವ ಪ್ರತಿಷ್ಠಿತ ಕಂಪೆನಿಗಳ ಮುಖ್ಯಸ್ಥರನ್ನು ಬೆಳ್ತಂಗಡಿ ಕರೆಸಿ ಸಂದರ್ಶನ ನಡೆಸಿ ಅಗತ್ಯ ತರಬೇತಿ ನೀಡಿ ನೇಮಕಾತಿಗೆ ಸಹಾಯ ಮಾಡುವ ಪ್ರಯತ್ನ ನಡೆದಿದೆ. ಮಾತ್ರವಲ್ಲದೆ ಕಚೇರಿಯಲ್ಲಿ ಮಾಹಿತಿ ಸಂಗ್ರಹಣೆಗೆ ಇಬ್ಬರನ್ನು ನೇಮಿಸಲಾಗಿದೆ.
ಡಿ. 11ರಂದು ಮೊದಲ ಭಾಗವಾಗಿ ಎಲವೇಟ್ ಲೈಫ್‌ನ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿ ಬೆಳ್ತಂಗಡಿ “ಶ್ರಮಿಕ’ ದಲ್ಲಿ ಸಂದರ್ಶನ ನಡೆಸಿದೆ. ಮೊದಲ ಆದ್ಯತೆಯಾಗಿ ವಿದ್ಯಾಭ್ಯಾಸ ಮುಗಿಸಿ ಬಂದ ಹೊಸಬರಿಗೆ ಅವಕಾಶವಿದೆ.
ಕಲಿಕೆಗೆ ತಕ್ಕ ಗಳಿಕೆ ಭರವಸೆ
ತಾಲೂಕಿನ ಗ್ರಾಮೀಣ ಭಾಗದ ಮಕ್ಕಳು ಸಂಕಷ್ಟ ಎದುರಿಸಬಾರದು ಎಂಬ ಉದ್ದೇಶದಿಂದ, ನಿರುದ್ಯೋಗಿಗಳ ತಳಮಳಗಳನ್ನು ಅರಿತ ಶಾಸಕ ಹರೀಶ್ ಪೂಂಜ ಅವರು ಅರ್ಹ ಉದ್ಯೋಗಾರ್ಥಿಗಳಿಗೆ ಕಲಿಕೆಗೆ ತಕ್ಕ ಗಳಿಕೆಯ ಭರವಸೆಯ ನೀಡುವ ಈ ವಿನೂತನ ಪ್ರಯತ್ನ ಆರಂಭಿಸಿದ್ದಾರೆ. ಉದ್ಯೋಗಾಂಕ್ಷಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು [email protected] ಗೆ ಕಳುಹಿಸಬಹುದು.
ಉದ್ಯೋಗ ಭರವಸೆ
ನಾನು ಕೆ.ಪಿ.ಟಿ. ಮಂಗಳೂರಿನಲ್ಲಿ ಮೆಕ್ಯಾನಿಕಲ್ ಡಿಪ್ಲೊಮ ಪೂರ್ಣಗೊಳಿಸಿ ಉದ್ಯೋಗ ಆಕಾಂಕ್ಷೆಯಿಂದ ಶಾಸಕರ ಕಚೇರಿಗೆ ನನ್ನ ವಿವರ ನೀಡಿದ್ದೆ. ಸಂದರ್ಶನಕ್ಕೆ ಕರೆದಿದ್ದರು. 11 ಮಂದಿಯಲ್ಲಿ 3 ಮಂದಿ ಆಯ್ಕೆಯಾಗಿದ್ದೇವೆ. ನಮಗೆ ಶಾಸಕರ ಪ್ರಯತ್ನದಿಂದ ಉದ್ಯೋಗ ಭರವಸೆ ಸಿಕ್ಕಿರುವುದು ಖುಷಿಯಾಗಿದೆ.
– ಸುಜೀತಾ ಎಸ್., ಉಜಿರೆ
ವಿಸ್ತರಣೆ ಚಿಂತನೆ
ಈಗಷ್ಟೇ ವಿದ್ಯಾಭ್ಯಾಸ ಮುಗಿಸಿದವರಿಗೆ ಮಾತ್ರ ಸದ್ಯ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ಚಿಂತನೆ ಇದೆ. ಮಾತ್ರವಲ್ಲದೆ ಬೆಳ್ತಂಗಡಿ ತಾ|ನಲ್ಲಿ ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶವಿದೆ.
– ಹರೀಶ್ ಪೂಂಜ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.