ಉಜಿರೆಯಲ್ಲೊಂದು ಮಾದರಿ ಸೌರ ವಿದ್ಯುತ್‌ ಪಾರ್ಕ್‌

15.80 ಲಕ್ಷ ರೂ.ನಲ್ಲಿ ಅನುಷ್ಠಾನ , ವಿದ್ಯುತ್‌ ಉಳಿಕೆಗೆ ಪರ್ಯಾಯ ಚಿಂತನೆ

Team Udayavani, Jan 12, 2021, 3:00 AM IST

ಉಜಿರೆಯಲ್ಲೊಂದು ಮಾದರಿ ಸೌರ ವಿದ್ಯುತ್‌ ಪಾರ್ಕ್‌

ಬೆಳ್ತಂಗಡಿ: ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಮ  ಪಂಚಾಯತ್‌ಗೆ ನಿರಂತರ ಆದಾಯ ಸೃಷ್ಟಿಸುವೆಡೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ  ಪಂಚಾಯತ್‌ ಮಾದರಿ ಪ್ರಯೋಗದಲ್ಲಿ ತೊಡಗಿದೆ.

14ನೇ ಹಣಕಾಸು ಯೋಜನೆ ಮತ್ತು ಜಿ.ಪಂ. ಹಾಗೂ ಗ್ರಾ.ಪಂ. ಸುಮಾರು 15.80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಉಜಿರೆ ಗ್ರಾಮದ ಉಂಡ್ಯಾಪು ಎಂಬಲ್ಲಿ ಕುಡಿಯುವ ನೀರಿನ ಸ್ಥಾವರ ಹಾಗೂ ಸೌರ ವಿದ್ಯುತ್‌ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದೆ.

ವಿದ್ಯುತ್‌ ಬಿಲ್‌ ಇಳಿಸಲು :

ಮನೆ ಮನೆಗೆ ನೀರು ಸರಬಾರಾಜಿನ ವಿದ್ಯುತ್‌ ಬಿಲ್‌ ಗ್ರಾಮ  ಪಂಚಾಯತ್‌ಗೆ ಹೊರೆಯಾಗುತ್ತಿರುವುದನ್ನು ಕಂಡು ಸೌರವಿದ್ಯುತ್‌ ಬಳಸಿ ಕುಡಿಯವ ನೀರಿನ ಸ್ಥಾವರ ನಿರ್ಮಿಸಲಾಗಿದೆ. ವಿದ್ಯುತ್‌ ಇಲ್ಲದೆ ಕೇವಲ ಸೌರಶಕ್ತಿಯಿಂದ ಸುಮಾರು 5 ಎಚ್‌.ಪಿ. ಪಂಪ್‌ ಚಾಲನೆ ಯಾಗುವ ಮೂಲಕ ವಾರ್ಷಿಕ 1.50 ಲಕ್ಷ ರೂ. ವಿದ್ಯುತ್‌ ಬಿಲ್‌ ಒಂದು ಸ್ಥಾವರದಿಂದ ಉಳಿಕೆ ಮಾಡುವ ವಿಶೇಷ ಯೋಜನೆ ಇದಾಗಿದೆ. .

ಆರಂಭಿಕ ಹಂತದಲ್ಲಿ ಒಂದು ಸ್ಥಾವರ ನಿರ್ಮಾಣಕಾರ್ಯ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ಉಜಿರೆ ಸಂಪೂರ್ಣ ಸೌರ ವಿದ್ಯುತ್‌ ನೀರಿನ ಸ್ಥಾವರ ನಿರ್ಮಾಣ ಗುರಿ ಹೊಂದಿದೆ. ಬೆಳಗ್ಗೆ 8.30ರಿಂದ ಸಂಜೆ 5ಗಂಟೆವರೆಗೆ ನಿರಂತರ ಚಾಲನೆಯಲ್ಲಿರುವ ಸಾಮರ್ಥ್ಯ ಯೋಜನೆ ಹೊಂದಿದೆ.

ಸನ್‌ ಫಾರ್ಮ್ಸ್ ಗ್ರೀನ್‌ ಎನರ್ಜಿ ಕಂಪೆನಿಯಿಂದ ಅಳವಡಿಕೆ ಕಾರ್ಯ ನಡೆಸಿದೆ. 9ನೇ ವಾರ್ಡ್‌ನ ಸುಮಾರು 100 ಮನೆಗಳಿಗೆ ಪ್ರಯೋಜನವಾಗಲಿದೆ.

ಮುಂದೆ ಉಜಿರೆಗೆಲ್ಲ ಅನ್ವಯ :

ಉಜಿರೆಯಲ್ಲಿ ಸರಿ ಸುಮಾರು 10ಕ್ಕೂ ಅಧಿಕ ಕುಡಿಯುವ ನೀರಿನ ಸ್ಥಾವರಗಳಿವೆ. ಒಂದು ಸ್ಥಾವರದಿಂದ ಪ್ರತೀ ತಿಂಗಳು 15 ಸಾವಿರ ರೂ. ವಿದ್ಯುತ್‌ ಬಿಲ್‌ ಅಂದರೂ ವಾರ್ಷಿಕ ಕನಿಷ್ಠ ಪಕ್ಷ 1.50 ಲಕ್ಷ ರೂ. ಗ್ರಾ.ಪಂ.ಗೆ ವಿದ್ಯುತ್‌ ಬಿಲ್‌ ಬರುತ್ತಿದ್ದು, 10 ಸ್ಥಾವರಗಳಿಂದ 15 ಲಕ್ಷ ರೂ. ಗೂ ಅಧಿಕ ವೆಚ್ಚವಾಗುತ್ತಿದೆ.  ಇದೀಗ 3 ವರ್ಷದಲ್ಲಿ ಸೋಲಾರ್‌ ಪಾರ್ಕ್‌ ವೆಚ್ಚ ಕೈಸೇರಲಿದ್ದು, ಭವಿಷ್ಯದಲ್ಲಿ ಇದನ್ನು ಮಾದರಿಯಾಗಿರಿಸಿ ಉಳಿದೆ ಡೆಗಳಲ್ಲಿ ಸ್ಥಾವರ ನಿರ್ಮಾಣ ಮಾಡಲಾ ಗುವುದು ಎಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ ಶೆಟ್ಟಿ ನೊಚ್ಚ ಹೇಳಿದ್ದಾರೆ.

ಕಸದಿಂದಲೂ ಆದಾಯ :

18 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 4,500 ರಷ್ಟು ಮನೆ ಹೊಂದಿರುವ ಉಜಿರೆ ಗ್ರಾ.ಪಂ. ಪಟ್ಟಣದಂತೆ ಅಭಿವೃದ್ಧಿಯಲ್ಲಿ ವೇಗ ಪಡೆಯುತ್ತಿದೆ. ಇದರ ಮಧ್ಯೆ ತ್ಯಾಜ್ಯ ನಿರ್ವಹಣೆಯೂ ಸವಾಲಾಗುತ್ತಿರುವುದನ್ನು ಪರಿಗಣಿಸಿ ಇಜ್ಜಾಲ ಎಂಬಲ್ಲಿ ತ್ಯಾಜ್ಯ ಸಂಪನ್ಮೂಲ ಘಟಕ ಕಾರ್ಯನಿರ್ವಹಿಸುತ್ತಿದೆ. ಉಜಿರೆ ಜನ್ಯ ಎಂಬ ಬ್ರ್ಯಾಂಡಿಂಗ್ ‌ನಲ್ಲಿ   ಎಲ್ಲ ರೀತಿಯ ಕರಗುವ ತ್ಯಾಜ್ಯ ಒಗ್ಗೂಡಿಸಿ 60 ದಿನಗಳಲ್ಲಿ ಗೊಬ್ಬರ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಗತ್ಯ ಸಿದ್ಧತೆಗಳು ಆಗುತ್ತಿದೆ.

 

450  ಸಸಿ ನಾಟಿ :ಅತ್ತಾಜೆ ಎಂಬಲ್ಲಿ ಈಗಾಗಲೇ 13 ಎಕರೆಯಲ್ಲಿ ಜೈವಿಕ ವನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, 3ಎಕರೆ ಕೆರೆ ಪ್ರದೇಶದಲ್ಲಿ ಪಾರ್ಕ್‌ ನಿರ್ಮಾಣವಾಗಲಿದೆ. ಈಗಾಗಲೇ 450  ಸಸಿಗಳನ್ನು ನೆಡಲಾಗಿದೆ.

ಹೊಸ ಚಿಂತನೆಗಳಿಂದ ಉಜಿರೆಯಲ್ಲಿ ಅಭಿವೃದ್ಧಿ ವೇಗ ಪಡೆಯುತ್ತದೆ ಎಂಬು ದಕ್ಕೆ ಉಜಿರೆ ಗ್ರಾ.ಪಂ. ಸಾಧನೆ ಸಾಕ್ಷಿ. ಡಾ| ಯತೀಶ್‌ ಕುಮಾರ್‌, ಆಡಳಿತಾಧಿಕಾರಿ

ಜನಪ್ರತಿನಿಧಿಗಳು, ಪಂಚಾಯತ್‌ ಆಡಳಿತ ಮಂಡಳಿ ಹಾಗೂ ಸಿಬಂದಿ ಸಹಕಾರದಲ್ಲಿ ಉಜಿರೆಯನ್ನು ಮಾದರಿ ಗ್ರಾಮವಾಗಿಸುವ ಉದ್ದೇಶ ಹೊಂದಲಾಗಿದೆ. ಪ್ರಕಾಶ್‌ ಶೆಟ್ಟಿ ನೊಚ್ಚ, ಪಿಡಿಒ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.